Karnataka Times
Trending Stories, Viral News, Gossips & Everything in Kannada

Home Loan: ಈ ಬ್ಯಾಂಕ್ ನೀಡುತ್ತೆ ಕಡಿಮೆ ಬಡ್ಡಿದರ ಹಾಗೂ ಶೂನ್ಯ ಸಂಸ್ಕರಣಾ ಶುಲ್ಕದ ಗೃಹ ಸಾಲ!

advertisement

ಮನೆ ನಿರ್ಮಾಣ ಪ್ರತಿಯೊಬ್ಬರ ಕನಸು. ಸ್ವಂತ ಮನೆ ಕಟ್ಟಿಕೊಳ್ಳಬೇಕು ಎನ್ನುವ ಆಸೆ ಎಲ್ಲರಲ್ಲಿಯೂ ಇರುತ್ತೆ. ಆದರೆ ಮನೆ ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ ಎಲ್ಲಾ ವಸ್ತುಗಳು ದುಬಾರಿ ಆಗಿರುವ ಹಿನ್ನೆಲೆಯಲ್ಲಿ ಒಂದೇ ಸಲ ಅಷ್ಟು ದೊಡ್ಡ ಬಂಡವಾಳ ಹಾಕುವುದು ಕಷ್ಟವಾಗಬಹುದು. ಇದಕ್ಕಾಗಿ ಬೇರೆ ಬೇರೆ ಬ್ಯಾಂಕ್ ನಲ್ಲಿ ಗೃಹ ಸಾಲ (Home Loan) ಯೋಜನೆಯನ್ನು ಪರಿಚಯಿಸಲಾಗಿದೆ.

ಬೇರೆ ಬೇರೆ ಬ್ಯಾಂಕ್ಗಳು ಬೇರೆ ಬೇರೆ ಬಡ್ಡಿ ದರದಲ್ಲಿ ಶರತ್ತು ಬದ್ಧ ಗೃಹ ಸಾಲವನ್ನು ನೀಡುತ್ತವೆ. ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ಸಿಗುತ್ತದೆ ಎಂಬುದನ್ನ ತಿಳಿದುಕೊಂಡು ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಸದ್ಯ PNB ಬ್ಯಾಂಕ್ ಹಾಗೂ SBI ಗೃಹ ಸಾಲದ ಮೇಲೆ ಉತ್ತಮ ಕೊಡುಗೆಯನ್ನು ನೀಡುತ್ತಿವೆ. ಈ ಕೊಡುಗೆಗಳ ಬಗ್ಗೆ ಇಲ್ಲಿದೆ ಮಾಹಿತಿ.

PNB Bank Home Loan Offers:

 

 

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು ಇಲ್ಲಿ ಗ್ರಾಹಕರು ಸಂಸ್ಕರಣ ಶುಲ್ಕ ಹಾಗೂ ದಾಖಲೆ ಶುಲ್ಕದ ರಿಯಾಯಿತಿಯೊಂದಿಗೆ ಗೃಹ ಸಾಲವನ್ನು ಪಡೆದುಕೊಳ್ಳಬಹುದು. PNB ಎಲ್ಲಿ ಯಾವುದೇ ಮುಂಗಡ ಶುಲ್ಕ ಅಥವಾ ದಾಖಲೆ ಶುಲ್ಕವನ್ನು ವಿಧಿಸದೆ 8.4% ಬಡ್ಡಿ ದರದಲ್ಲಿ ಗೃಹ ಸಾಲವನ್ನು ಪಡೆದುಕೊಳ್ಳಬಹುದು. ಬಡ್ಡಿದರ ನೀವು ಪಡೆದುಕೊಳ್ಳುವ ಸಾಲದ ಮೊತ್ತ ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ವ್ಯತ್ಯಾಸ ಆಗಬಹುದು. ನೀವು ನೇರವಾಗಿ PNB ಬ್ಯಾಂಕ್ ನ ವೆಬ್ಸೈಟ್ನಲ್ಲಿಯೇ ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

SBI Bank Home Loan Offers:

 

advertisement

 

ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿರುವ SBI ಸೆಪ್ಟೆಂಬರ್ 1 2023 ರಿಂದ ಗೃಹ ಸಾಲದ ಮೇಲೆ ವಿಶೇಷ ಆಫರ್ ಬಿಡುಗಡೆ ಮಾಡಿದೆ. ಇದು ಕೆಲವೇ ದಿನಗಳಲ್ಲಿ ಮುಗಿದು ಹೋಗಬಹುದಾದ ಕೊಡುಗೆ ಆಗಿದ್ದು ಎಸ್ ಬಿ ಐ ನ ಟರ್ಮ್ ಹಾಗೂ ಕಂಡಿಶನ್ ಗಳಿಗೆ ಬದ್ಧವಾಗಿದ್ದರೆ ಸುಲಭವಾಗಿ ಗೃಹ ಸಾಲ ಪಡೆಯಬಹುದು. ಎಸ್ ಬಿ ಐ ನಲ್ಲಿ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನೀಡಲಾಗುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ 65bps ವರೆಗೆ ಬಡ್ಡಿ ದರದ ರಿಯಾಯಿತಿ ಪಡೆಯಬಹುದು.

ಇನ್ನು ಸಿಬಿಲ್ ಸ್ಕೋರ್ 700 ರಿಂದ 749ರ ಆಸು ಪಾಸಿನಲ್ಲಿ ಇದ್ದರೆ, ಶೇಕಡಾ 8.7% ನಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಗೃಹ ಸಾಲದ ಬಡ್ಡಿದರ ಈ ಮೊದಲು 9.35% ಇತ್ತು. 750 ರಿಂದ 799ರ ನಡುವಿನ ಸಿಬಿಲ್ ಸ್ಕೋರ್ ಇದ್ದರೆ 8.6% ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯಬಹುದು.

BOB Bank Home Loan Offers:

 

 

ಬ್ಯಾಂಕ್ ಆಫ್ ಬರೋಡ (BOB) ಕೂಡ ಗೃಹ ಸಾಲದ (Home Loan) ಮೇಲೆ ಉತ್ತಮ ಕೊಡುಗೆಯನ್ನು ಘೋಷಿಸಿದೆ. ಈ ಬ್ಯಾಂಕ್ 2024ರಲ್ಲಿ ವಿಶೇಷ ಅಭಿಯಾನ ನಡೆಸುತ್ತಿದ್ದು ಕೇವಲ 8.4% ಬಡ್ಡಿ ದರದ ಆರಂಭದೊಂದಿಗೆ ಗೃಹ ಸಾಲ ನೀಡುತ್ತಿದೆ. ಇದಕ್ಕೆ ಯಾವುದೇ ಸಂಸ್ಕರಣಾ ಶುಲ್ಕವನ್ನು ವಿಧಿಸುವುದಿಲ್ಲ. ಸಿಬಿಲ್ ಸ್ಕೋರ್ (CIBIL Score) ಆಧಾರದ ಮೇಲೆ 8.7% ಗೆ ಕಾರ್ ಲೋನ್ ಕೂಡ ಪಡೆಯಬಹುದು.
ಈ ಮೂರು ಬ್ಯಾಂಕ್ ಗಳು ಕೂಡ ಉತ್ತಮವಾಗಿರುವ ಗೃಹ ಸಾಲದ ಕೊಡುಗೆಯನ್ನು ಘೋಷಿಸಿವೆ. ಇದರ ಬ್ಯಾಂಕ್ಗಳಿಗೆ ಹೋಲಿಸಿದರೆ ಅತಿ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು ಈ ಬ್ಯಾಂಕ್ಗಳಲ್ಲಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನೀವು ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು ಅಥವಾ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.