Karnataka Times
Trending Stories, Viral News, Gossips & Everything in Kannada

Flex Fuel: ಪೆಟ್ರೋಲ್ ಬದಲು ಈ ಇಂಧನ ಬಳಸಿ; ಒಂದು ಲೀಟರ್ ಇಂಧನದಲ್ಲಿ ಎಷ್ಟು ಹಣ ಉಳಿಸಬಹುದು ಗೊತ್ತಾ?

advertisement

ಇಂದು ಪೆಟ್ರೋಲ್ ಹಾಗೂ ಡೀಸೆಲ್ ಇಂಧನದ ಬೆಲೆ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಇರೋದು, ಪ್ರತಿಯೊಬ್ಬ ವಾಹನ ಚಾಲಕನಿಗೂ ಕೂಡ ಬಹಳ ಸಂಕಷ್ಟದ ಪರಿಸ್ಥಿತಿ ಎದುರಿಸುವಂತೆ ಮಾಡಿದೆ. ಇದೇ ಕಾರಣಕ್ಕೆ ಪರ್ಯಾಯ ಇಂಧನಗಳ ಹುಡುಕಾಟ ಆರಂಭವಾಗಿದೆ.

Flex Fuel Consumption:

ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2024 ಕೊನೆಗೊಂಡಿದ್ದು ಈ ಸಮಯದಲ್ಲಿ ಫ್ಲೆಕ್ಸ್ ಇಂಧನ ಹೆಚ್ಚು ಚರ್ಚೆ ನಡೆದಿದೆ. ಫ್ಲೆಕ್ಸ್ ಇಂಧನ ಅಂದರೆ ಏನು ಎನ್ನುವ ಪ್ರಶ್ನೆ ಮೂಡುವುದು ಸಹಜ. ಸರಳವಾಗಿ ಹೇಳುವುದಾದರೆ ಪೆಟ್ರೋಲ್ ನಲ್ಲಿ ಮೆಥನಾಲ್ ಮತ್ತು ಎಥನೋಲ್ ಸೇರಿಸಿ ತಯಾರಿಸುವ ಇಂಧನವಾಗಿದೆ. ದಿನಗಳಲ್ಲಿ E20 ಯನ್ನು E50 ಆಗಿ ಪರಿವರ್ತಿಸಲಾಗುವುದು.

ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ ದಲ್ಲಿ ಮಾರುತಿ ವ್ಯಾಗನಾರ್ (Maruti Wagon R) ನಿಂದ ಹಿಡಿದು ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ವರೆಗೆ ಭಾಗವಹಿಸಿದ್ದು ಕಾರು ಮತ್ತು ದ್ವಿಚಕ್ರ ವಾಹನಗಳಿಗೂ ಕೂಡ ಫ್ಲೆಕ್ಸ್ ಇಂಧನ (Flex Fuel) ಬಳಸುವ ಬಗ್ಗೆ ಪ್ರಯೋಗ ನಡೆಸಲಾಗಿದೆ.

What is E20 Fuel??

advertisement

E20 ಪೆಟ್ರೋಲ್ ಇಂಧನ (Flex Fuel) ದಲ್ಲಿ 20% ನಷ್ಟು ಎಥನಾಲ್ ಬೆರಕೆ ಮಾಡಲಾಗುತ್ತದೆ. ಎಥನಾಲ್ ಎನ್ನುವುದು ನೈಸರ್ಗಿಕವಾಗಿ ಸಕ್ಕರೆ ಹುದುಗಿಸುವ, ನೈಸರ್ಗಿಕವಾಗಿಯೇ ತಯಾರಿಸಲಾಗುವ ಜೈವಿಕ ಇಂಧನದ ರೂಪವಾಗಿದೆ. ನಶಿಸಿಹೋಗುವಂತಹ ಅಥವಾ ಪಳೆಯುಳಿಕೆ ಇಂಧನವನ್ನು ಬಳಸುವ ಬದಲು ಪೆಟ್ರೋಲ್ ಜೊತೆಗೆ ಈ ಜೈವಿಕ ಇಂಧನವನ್ನು ಬಳಸಿ ಹೊಸ ರೂಪದ ಇಂಧನವನ್ನು ತಯಾರಿಸಿ ವಾಹನಗಳಿಗೆ ಬಳಕೆ ಮಾಡುವ ಪ್ರಯೋಗ ನಡೆದಿದೆ. ಇದೀಗ ಜಿಯೋ ಬಿಪಿ ಕಂಪನಿ, ದೇಶದಲ್ಲಿಯೇ ಮೊಟ್ಟ ಮೊದಲ E20 ಬಳಕೆ ಮಾಡಿದ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದು ಲೀಟರ್ E20 ಪೆಟ್ರೋಲ್ ಬೆಲೆ ಎಷ್ಟಾಗಬಹುದು?

 

 

ಸದ್ಯ ಜಿಯೋ ಬಿಪಿ, ಸಿದ್ಧಪಡಿಸಿರುವ ಫ್ಲೆಕ್ಸ್ ಇಂಧನದಲ್ಲಿ ಶೇಕಡಾ 80% ಪೆಟ್ರೋಲ್ ಹಾಗೂ 20% ನಷ್ಟು ಎಥನಾಲ್ ಬಳಸಲಾಗಿದೆ. ದೆಹಲಿಯಲ್ಲಿ ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಬೆಲೆ 96 ರೂಪಾಯಿಗಳು. ಒಂದು ಲೀಟರ್ ಏಥನಾಲ್ ಗೆ 55 ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಈಗ ಫ್ಲೆಕ್ಸ್ ಇಂಧನದ ವಿಚಾರಕ್ಕೆ ಬಂದರೆ, 80% ನಷ್ಟು ಪೆಟ್ರೋಲ್ ಇದಕ್ಕೆ 76.80ಗಳು. 20 % ನಷ್ಟು ಎಥೆನಾಲ್ ಅಂದರೆ 11 ರೂಪಾಯಿಗಳು. ಅಂದರೆ ಫ್ಲೆಕ್ಸ್ ಇಂಧನವನ್ನು ಒಂದು ಲೀಟರ್ಗೆ 87.80ಗಳಿಗೆ ಖರೀದಿ ಮಾಡಬಹುದು.

ಈಗಿರುವ ಪೆಟ್ರೋಲ್ ಬೆಲೆಗೆ ಹೋಲಿಸಿದರೆ 8.20 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಫ್ಲೆಕ್ಸ್ ಇಂಧನವನ್ನು ಖರೀದಿಸಬಹುದು. ಅಲ್ಲಿಗೆ ಪ್ರತಿ ತಿಂಗಳು ನೀವು ಎಷ್ಟು ಹಣವನ್ನು ಉಳಿತಾಯ ಮಾಡಬಹುದು ಎನ್ನುವುದನ್ನು ನೀವೇ ಲೆಕ್ಕಾಚಾರ ಮಾಡಿ ನೋಡಿ! ಈಗ ಹೇಳಿ ಖಾಲಿ ಆಗುವ ಪೆಟ್ರೋಲ್ ಇಂಧನಕ್ಕಿಂತ ಫ್ಲೆಕ್ಸ್ ಇಂಧನ ಬಳಕೆ ಉತ್ತಮ ಅಲ್ಲವೇ?

advertisement

Leave A Reply

Your email address will not be published.