Karnataka Times
Trending Stories, Viral News, Gossips & Everything in Kannada

Toyota Corolla Cross: 7 ಏರ್ ಬ್ಯಾಗ್ ಇರುವ ಹೊಸ SUV ಕಾರು ಪರಿಚಯಿಸಿದ ಟೊಯೋಟಾ, ಉತ್ತಮ ಫೀಚರ್ಸ್ ಹಾಗೂ ಕಡಿಮೆ ಬೆಲೆ!

advertisement

ಟೊಯೋಟಾ ಕಾರಿನ ಮ್ಯಾನುಫ್ಯಾಕ್ಚರಿಂಗ್ ಬಗ್ಗೆ ಮಾತನಾಡುವ ಹಾಗೆ ಇಲ್ಲ. ಯಾಕೆಂದರೆ ಟೊಯೋಟಾ ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಉತ್ತಮ ಸೇಫ್ಟಿ ಫೀಚರ್ ಗಳನ್ನು ಅಳವಡಿಸುವುದರಲ್ಲಿ ಹೆಸರುವಾಸಿಯಾಗಿದೆ. ಇದೀಗ ಟೊಯೋಟಾದ ಕೊರೊಲ್ಲಾ ಕ್ರಾಸ್ ಎಸ್ ಯುವಿ ಫೇಸ್ ಲಿಫ್ಟ್ (Toyota Corolla Cross SUV Facelift) ಆವೃತ್ತಿ ಅನಾವರಣಗೊಂಡಿದ್ದು, ಸುರಕ್ಷತೆಯ ದೃಷ್ಟಿಯಲ್ಲಿ ಸದ್ಯ ಈ ಕಾರನು ಮೀರಿಸುವ ಕಾರು ಮತ್ತೊಂದಿಲ್ಲ ಎನ್ನಬಹುದು!

Toyota Corolla Cross Facelift:

 

 

ಜಾಗತಿಕ ಮಟ್ಟದಲ್ಲಿ ಎಸ್ಯುವಿ ಫೇಸ್ ಲಿಫ್ಟ್ ಆವೃತ್ತಿಯನ್ನು ಟೊಯೋಟಾ ಬಿಡುಗಡೆ ಮಾಡಿದೆ ಕ್ರಾಸ್ ಫೇಸ್ ಲಿಫ್ಟ್ ಅನಾವರಣಗೊಂಡಿದೆ. 4 ಟ್ರಿಮ್ ಆಯ್ಕೆಗಳನ್ನು ನೀಡಲಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕರೋಲ್ಲ ಕಾರಿನ ಚಿತ್ರಗಳು ಬಿಡುಗಡೆ ಆಗಿದ್ದು, ಜನರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿವೆ.

Toyota Corolla Engine:

ಹೈಬ್ರಿಡ್ ಪವರ್ ಟ್ರೇನ ಸೆಟ್ ಅಪ್ ನೀಡಲಾಗಿದ್ದು, 2ZR-FBE 1.8 ಲೀಟರ್ ನ್ಯಾಚುರಲ್ ಅಸ್ಪೇಶನ್ ಪೆಟ್ರೋಲ್ ಎಂಜಿನ್ ಕಾಣಬಹುದು. ಇದು 140 ಬಿ ಎಚ್ ಪಿ ಪವರ್ ಹಾಗೂ 117 ಎನ್ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಎರಡನೆಯದಾಗಿ ಹೈಬ್ರಿಡ್ 2ZR-FBE 1.8 ಇಂಜಿನ್, 98 ಬಿಎಚ್‌ಪಿ ಪವರ್ ಹಾಗೂ 142 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಎಲೆಕ್ಟ್ರಿಕ್ ಮೋಟಾರ್ ಕೂಡ ಅಳವಡಿಸಲಾಗಿದ್ದು ಅದು 72 ಬಿ ಎಚ್ ಪಿ ಪವರ್ ಹಾಗೂ 163 ಎನ್ ಎಮ್ ಗರಿಷ್ಠ ಟಾರ್ಕ್ ಉತ್ಪಾದಿಸಬಲ್ಲದು.

advertisement

ಸುರಕ್ಷತೆಯ ದೃಷ್ಟಿಯಿಂದ ಕೊರೊಲ್ಲಾ ಕ್ರಾಸ್ ಫೇಸ್ ಲಿಫ್ಟ್ ಬೆಸ್ಟ್ ಆಯ್ಕೆ:

ಟೊಯೋಟಾ (Toyota)  ತನ್ನ ಇತರ ಕಾರಿನಲ್ಲಿಯೂ ಕೂಡ ಅತ್ಯುತ್ತಮ ತಂತ್ರಜ್ಞಾನ ಹಾಗೂ ಸೇಫ್ಟಿ ಫೀಚರ್ ಗಳನ್ನು ಅಳವಡಿಸಿಕೊಂಡು ಬಂದಿದೆ. ಇದೀಗ ಕರೋಲ್ಲ ಕ್ರಾಸ್ ಫೇಸ್ ಲಿಫ್ಟ್ ನೋಡುವುದಾದರೆ ಬ್ಲೈಂಡ್ ಸ್ಪೋರ್ಟ್ ಮೋನಿಟರಿಂಗ್ ಹಾಗೂ ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಅಳವಡಿಸಲಾಗಿದ್ದು ಎಡಿಎಎಸ್ ಟೆಕ್ನಾಲಜಿ, ABS, EBD ಹಿಲ್ ಸ್ಪಾಟ್ ಅಸಿಸ್ಟ್ ಜೊತೆಗೆ ಏಳು ಏರ್ ಬ್ಯಾಗ್ ಗಳನ್ನು ಕೊಡಲಾಗಿದೆ.

Toyota Corolla Cross Facelift Features:

 

 

ಈ ಕಾರಿನಲ್ಲಿ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಆಟೋ ಹೋಲ್ಡ್ ಫಂಕ್ಷನ್ ನೊಂದಿಗೆ ಅಳವಡಿಸಲಾಗಿದೆ. 12.3 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಸಲಾಗಿದ್ದು 10.1 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಪಡೆಯಬಹುದು. ಅಷ್ಟೇ ಅಲ್ಲದೆ ವಯರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಕಾರಿನಲ್ಲಿ ಕಾರ್ಯ ನಿರ್ವಹಿಸುತ್ತದೆ.

Toyota Corolla Cross Facelift Price:

ಟೊಯೋಟಾ ಕಂಪನಿ ಸದ್ಯ ಥೈಲ್ಯಾಂಡ್ ನಲ್ಲಿ ಅನಾವರಣಗೊಳಿಸಿರುವ ಎಸ್ಯುವಿ ಫೇಸ್ ಲಿಫ್ಟ್ ಆವೃತ್ತಿ, ಮೂಲ ರೂಪಾಂತರದ ಬೆಲೆ ಅಂದಾಜು 23.10 ಲಕ್ಷ ರೂಪಾಯಿಗಳು. ಹಾಗೂ 29 ಲಕ್ಷ ರೂಪಾಯಿಗಳ ವರೆಗೆ ಮುಂದುವರೆಯಬಹುದು. ಈ ಕಾರು ಭಾರತಕ್ಕೆ ಯಾವಾಗ ಎಂಟ್ರಿ ಕೊಡಬಹುದು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

advertisement

Leave A Reply

Your email address will not be published.