Karnataka Times
Trending Stories, Viral News, Gossips & Everything in Kannada

LPG Insurance: ಎಲ್ಪಿಜಿ ಸಿಲಿಂಡರ್ ಅಪಘಾತ ಆದರೆ ಸಿಗುತ್ತೆ ಲಕ್ಷಗಟ್ಟಲೆ ವಿಮಾ ಹಣ, ಹೇಗೆ ಗೊತ್ತೇ?

advertisement

ಇದು ಬಹುತೇಕ ಎಲ್ಲರ ಮನೆಯಲ್ಲಿಯೂ ಎಲ್ಪಿಜಿ ಸಿಲೆಂಡರ್ ಬಳಸಿಯೇ ಬಳಸುತ್ತಾರೆ. ಆದರೆ ಎಲ್ಪಿಜಿ ಸಿಲಿಂಡರ್ (LPG Cylinder) ಬಳಸುವಾಗ ಸಾಕಷ್ಟು ಮುರುವರ್ಜಿಯನ್ನ ವಹಿಸಬೇಕು. ಇಲ್ಲವಾದರೆ ಎಷ್ಟೋ ಬಾರಿ ಇದರಿಂದ ಅಪಘಾತಗಳು ಕೂಡ ಆಗುವ ಸಾಧ್ಯತೆ ಇರುತ್ತೆ. ಇದೇ ಕಾರಣಕ್ಕೆ ಜನರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ವಿಮಾ ಕೊಡುಗೆ ನೀಡಲು ಮುಂದಾಗಿದೆ.

ಇತ್ತೀಚಿಗೆ ಎಲ್ ಪಿ ಜಿ ಸಿಲಿಂಡರ್ (LPG Cylinder) ಗಳ ಮೇಲೆ ಕೇಂದ್ರ ಸರಕಾರ ಸಬ್ಸಿಡಿ ನೀಡುತ್ತಿದ್ದು ಎಲ್ ಪಿ ಜಿ ಸಿಲಿಂಡರ್ ದರವು ಕೂಡ ಇಳಿಕೆ ಆಗಿದೆ. ಗ್ಯಾಸ್ ಸಿಲೆಂಡರ್ (Gas Cylinder) ಅನ್ನು ಮೊದಲಿಗಿಂತಲೂ ಕಡಿಮೆ ಬೆಲೆ ಜನ ಖರೀದಿ ಮಾಡಬಹುದು. ಸಬ್ಸಿಡಿ (Subsidy) ನೀಡುತ್ತಿರುವುದರಿಂದ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ಬೆಲೆ 903 ರೂಪಾಯಿಗಳಿಗೆ ಇಳಿದಿದೆ. ಅದೇ ರೀತಿ ಉಜ್ವಲ ಯೋಜನೆ (Ujjwala Yojana) ಯ ಫಲಾನುಭವಿಗಳು 300 ರೂಪಾಯಿಗಳ ಸಹಾಯಧನ ಪಡೆಯಬಹುದು. ಹಾಗಾಗಿ ಪ್ರತಿ LPG Cylinder ಗೆ 603 ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಬಹುದು. ಸಬ್ಸಿಡಿ ಪಡೆದುಕೊಳ್ಳುವುದು ಮಾತ್ರವಲ್ಲದೆ ಗ್ರಾಹಕರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡಲು ಸರ್ಕಾರ ಮುಂದಾಗಿದೆ.

LPG Cylinder ಬಳಸುವವರಿಗೆ ಇನ್ನಷ್ಟು ಸೌಲಭ್ಯ!

 

 

advertisement

ಇದು ಬಹುತೇಕ ಎಲ್ಲರಿಗೂ ಗೊತ್ತಿರುವುದಿಲ್ಲ. ಆದರೆ ತೈಲ ಮಾರುಕಟ್ಟೆ ಕಂಪನಿಗಳು ಎಲ್ಲಾ ಗ್ಯಾಸ ಸಿಲೆಂಡರ್ ಗ್ರಾಹಕರಿಗೂ ಕೂಡ ವಿಮಾ ರಕ್ಷಣೆಯನ್ನು ನೀಡುತ್ತದೆ. ಉದಾಹರಣೆಗೆ ಎಲ್‍ಪಿಜಿ ಗ್ಯಾಸ್ ಸಿಲೆಂಡರ್ (LPG Cylinder) ಬೆಂಕಿ ತಗುಲಿ, ಬ್ಲಾಸ್ಟ್ ಆಗಿ ಯಾವುದೇ ವ್ಯಕ್ತಿ ಪ್ರಾಣ ಬಿಟ್ಟರೆ ಅಂತಹ ವ್ಯಕ್ತಿ ಕುಟುಂಬಕ್ಕೆ ಆರು ಲಕ್ಷ ರೂಪಾಯಿಗಳ ಅಪಘಾತ ವಿಮಾ (Insurance) ನೀಡಲಾಗುವುದು. ಅಷ್ಟೇ ಅಲ್ಲ ಪ್ರತಿ ವ್ಯಕ್ತಿಗೆ ಗರಿಷ್ಠ ಎರಡು ಲಕ್ಷ ರೂಪಾಯಿಗಳನ್ನು ಆಸ್ತಿ ಹಾನಿಗಾಗಿ, ಹಾಗೂ ಪ್ರತಿ ಘಟನೆಗೆ 30 ಲಕ್ಷದ ವರೆಗೂ ವೈದ್ಯಕೀಯ ವೆಚ್ಚವನ್ನು ಮಾರುಕಟ್ಟೆ ಕಂಪನಿ ಹಾಗೂ ಕೇಂದ್ರ ಸರ್ಕಾರ ಬರಿಸಲಿದೆ.

ಇನ್ನು ಆಸ್ತಿ ಹಾನಿ ಉಂಟಾದರೆ ಎರಡು ಲಕ್ಷ ರೂಪಾಯಿಗಳ ವಿಮಾನ ರಕ್ಷಣೆ ಕೊಡಲಾಗುವುದು. ಸರ್ಕಾರ ನೀಡುವ ಈ ವಿಮಾ (Insurance) ಪ್ರಯೋಜನವನ್ನು ಪಡೆದುಕೊಳ್ಳಲು ಕೆಲವು ಪ್ರಮುಖ ನಿಯಮಗಳು ಕೂಡ ಅವುಗಳನ್ನು ತಿಳಿದುಕೊಂಡು ನೀವು ವಿಮೆಗೆ ಅಪ್ಲೈ ಕೂಡ ಮಾಡಬಹುದು.

Gas Cylinder Subsidy ಪಡೆದುಕೊಳ್ಳುವುದು ಹೇಗೆ?

LPG ಗ್ಯಾಸ್ ಅಪಘಾತವಾದರೂ ಕೂಡ ಮೊದಲು ಪೊಲೀಸರಿಗೆ ಹಾಗೂ ಆ ಗ್ಯಾಸ್ ಸಿಲಿಂಡರ್ ವಿತರಕರಿಗೆ ಮಾಹಿತಿ ತಿಳಿಸಬೇಕು. ನಂತರ ಇತರರಿಂದ ಮಾರ್ಕೆಟಿಂಗ್ ಕಂಪನಿಯು ಮಾಹಿತಿ ಪಡೆದು ವಿಮಾ ಕಂಪನಿಗೆ ವಿಷಯ ತಿಳಿಸುತ್ತದೆ. ವಿಮಾ ಕಂಪನಿ ನಿಯಮಗಳ ಅನುಸಾರ ಅಪಘಾತವಾದ ಸ್ಥಳ ಪರಿಶೀಲನೆ ಮಾಡಿ ಫಲಾನುಭವಿ ಗ್ರಾಹಕರಿಗೆ ವಿಮೆ ಸೌಲಭ್ಯ ಒದಗಿಸುತ್ತದೆ.

ಗ್ಯಾಸ್ ಸಿಲಿಂಡರ್ ಆಕಸ್ಮಿಕ ಸ್ಪೋಟಗೊಂಡು ವ್ಯಕ್ತಿ ನಿಧನ ಹೊಂದಿದರೆ ಅಥವಾ ಆಸ್ತಿಪಾಸ್ತಿ ಹಾನಿ ಉಂಟಾದರೆ ಮಾತ್ರ ಈ ವಿಮಾ ಸೌಲಭ್ಯ ದೊರೆಯುತ್ತದೆ ಘಟನೆ ನಡೆದ ತಕ್ಷಣವೇ ಪೊಲೀಸರಿಗೆ ಹಾಗೂ ಗ್ಯಾಸ್ ವಿತರಕರಿಗೆ ಮಾಹಿತಿ ತಿಳಿಸಬೇಕು ಜೊತೆಗೆ ಈ ಘಟನೆಗೆ ಸಂಬಂಧಿಸಿದ ಹಿನ್ನೆಲೆ ಹಾಗೂ ಸಂಬಂಧ ಪಟ್ಟ ಎಲ್ಲಾ ಮಾಹಿತಿಗಳನ್ನು ಕೂಡ ಒದಗಿಸಬೇಕು. ಸಿಲಿಂಡರ್ ಗ್ಯಾಸ್ ಉಪಯೋಗಿಸುತ್ತಿದ್ದ ಗ್ರಾಹಕರ ವಿವರವನ್ನು ನೀಡಬೇಕು. ಈ ರೀತಿ ಮಾಡಿದರೆ ಕೇವಲ ಏಳರಿಂದ 14 ದಿನಗಳ ಒಳಗೆ ವಿಮಾ ಕಂಪನಿ ಅರ್ಹ ಗ್ರಾಹಕರಿಗೆ ವೈಯಕ್ತಿಕ ಅಪಘಾತ ವಿಮೆ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಗ್ಯಾಸ್ ವಿತರಕರನ್ನು ಸಂಪರ್ಕಿಸಬಹುದು.

advertisement

Leave A Reply

Your email address will not be published.