Karnataka Times
Trending Stories, Viral News, Gossips & Everything in Kannada

Nominee: ಮೃತಪಟ್ಟ ವ್ಯಕ್ತಿಯ ಖಾತೆಯಲ್ಲಿ ನಾಮಿನಿ ಹೆಸರು ಇಲ್ಲ, ಹಣವನ್ನು ಈ ವಿಧಾನದಿಂದ ತೆಗೆಯಬಹುದು.

advertisement

ಪ್ರತಿಯೊಬ್ಬರ ಬಳಿಯೂ ಯಾವುದಾದರೊಂದು ಖಾತೆಯೂ (Account) ಇದ್ದೆ ಇರುತ್ತದೆ. ಆದರೆ ಬ್ಯಾಂಕ್ ಖಾತೆಯಿರಲಿ ಅಥವಾ ಯಾವುದೇ ಖಾತೆಯಿರಲಿ ಅದರಲ್ಲಿ ನಾಮಿನಿ (Nominee) ಹೆಸರು ಸೇರಿಸುವುದು ಬಹಳ ಮುಖ್ಯ. ಬ್ಯಾಂಕ್ (Bank) ಅಥವಾ ಸೊಸೈಟಿ (Society) ಯಲ್ಲಿ ಖಾತೆಯನ್ನು ಹೊಂದಿದ್ದರೆ ಕಡ್ಡಾಯವಾಗಿ ನಾಮಿನಿಯ ಹೆಸರನ್ನು ಉಲ್ಲೇಖಿಸಬೇಕು. ಒಂದು ವೇಳೆ ನಾಮಿನಿ ಹೆಸರನ್ನು ಹೊಂದಿಲ್ಲದೇ ಹೋದರೆ ಖಾತೆಯನ್ನು ಹೊಂದಿದ ವ್ಯಕ್ತಿಯ ಮರಣದ ನಂತರದಲ್ಲಿ ಸಮಸ್ಯೆಗೆ ದಾರಿ ಮಾಡಿಕೊಟ್ಟಂತೆ. ವ್ಯಕ್ತಿಯ ಖಾತೆಯಲ್ಲಿ ನಾಮಿನಿ ಹೆಸರು ಯಾಕೆ ಮುಖ್ಯ ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

ಖಾತೆಯಲ್ಲಿ ನಾಮಿನಿ ಹೆಸರು ಎಷ್ಟು ಮುಖ್ಯ

ಬ್ಯಾಂಕ್ ಖಾತೆಯಲ್ಲಿ ನಾಮಿನಿಯನ್ನು ಸೇರಿಸುವುದು ಎಲ್ಲಾ ಬ್ಯಾಂಕ್ ಗಳಲ್ಲಿ ಕಡ್ಡಾಯವಲ್ಲ. ಆದರೆ ಹೀಗೆ ಮಾಡುವುದರಿಂದ ನಿಮ್ಮ ಕುಟುಂಬವನ್ನು ತೊಂದರೆಯಿಂದ ರಕ್ಷಿಸಬಹುದಾಗಿದೆ. ಒಂದು ವೇಳೆ ನಾಮಿನಿ ಇಲ್ಲದಿದ್ದರೆ ವಾರಸುದಾರರು ಹಣ ಪಡೆಯಲು ತೊಂದರೆ ಪಡಬೇಕಾಗುತ್ತದೆ. ಖಾತೆಯಲ್ಲಿ ನಾಮಿನಿ ಹೆಸರು ಉಲ್ಲೇಖ ಮಾಡಿದರೆ ವ್ಯಕ್ತಿಯೂ ಮೃತ ಪಟ್ಟ ನಂತರ ಆ ಹಣವನ್ನು ನಾಮಿನಿಯೂ ಸುಲಭವಾಗಿ ಪಡೆಯಬಹುದು.

advertisement

ನಾಮಿನಿ ಹೆಸರು ಇಲ್ಲದೆ ಹೋದರೆ ಏನಾಗುತ್ತದೆ?

ಒಂದು ಬ್ಯಾಂಕ್ ಖಾತೆಗೆ ನಾಮಿನಿಯೇ ಇಲ್ಲದಿದ್ದರೆ ವ್ಯಕ್ತಿ ಮೃತ ಪಟ್ಟಾಗ ಹಣ ಪಡೆಯಲು ವಾರಸುದಾರರು ಒಂದಷ್ಟು ಪ್ರಕ್ರಿಯೆಗೆ ಒಳಪಡಬೇಕು. ನಾಮಿನಿ ಇಲ್ಲದಿದ್ದರೆ ಮೃತ ಖಾತೆದಾರನ ಬ್ಯಾಂಕ್ ಹಣಕ್ಕಾಗಿ ವಾರಸುದಾರರು, ವಾರಸುದಾರ ಪ್ರಮಾಣಪತ್ರ, ಅಫಿಡವಿಟ್ ಹಾಗೂ ವಿವಿಧ ಪ್ರಮಾಣ ಪತ್ರಗಳನ್ನು ಬ್ಯಾಂಕ್ ಗೆ ಸಲ್ಲಿಸಬೇಕಾಗುತ್ತದೆ. ಪತ್ರಿಕೆಗಳಲ್ಲಿ ನೋಟೀಸ್ ಮುದ್ರಿಸಬೇಕು ಹಾಗೂ ವಾರಸುದಾರರು ಪ್ರೊಬೇಟ್ ಪಡೆಯಬೇಕು. ಈ ಎಲ್ಲಾ ಕಾನೂನು ಕ್ರಮ ಅನುಸರಿಸಿದ ಬಳಿಕವಷ್ಟೇ ಮೃತ ವ್ಯಕ್ತಿಯ ಖಾತೆಯ ಹಣವನ್ನು ವಾರಸುದಾರ ಪಡೆಯಬಹುದಾಗಿದೆ.

ಖಾತೆಗೆ ನಾಮಿನಿ ಹೆಸರನ್ನು ಸೇರಿಸುವುದು ಹೇಗೆ?

ಖಾತೆಯನ್ನು ಹೊಂದಿರುವ ಬ್ಯಾಂಕಿನ ಶಾಖೆಗೆ ಭೇಟಿ ನೀಡುವ ಮೂಲಕ ಖಾತೆಯಲ್ಲಿ ನಾಮಿನಿ ಇದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. ಒಂದು ವೇಳೆ ನಾಮಿನಿ ಇಲ್ಲದಿದ್ದರೆ ಬ್ಯಾಂಕಿನಲ್ಲಿ ನಾಮಿನಿ ಹೆಸರನ್ನು ಸೇರಿಸಲು ಇರುವ ಫಾರ್ಮ್ (Form) ಅನ್ನು ಭರ್ತಿ ಮಾಡಬೇಕು. ಈ ಫಾರ್ಮ್ ನಲ್ಲಿರುವ ಕಾಲಂನಲ್ಲಿ ನಾಮಿನಿ ಬಗ್ಗೆ ಮಾಹಿತಿ ನೀಡಬೇಕು. ಮಕ್ಕಳು, ಪತ್ನಿ ಅಥವಾ ಕುಟುಂಬದ ಯಾವುದೇ ಸದಸ್ಯರನ್ನು ನಾಮಿನಿಯಾಗಿ ಮಾಡಬಹುದು.

advertisement

Leave A Reply

Your email address will not be published.