Karnataka Times
Trending Stories, Viral News, Gossips & Everything in Kannada

ATM: ಎಟಿಎಂ ನಿಂದ ಹಣ ಪಡೆಯುವ ಗ್ರಾಹಕರಿಗೆ ಹೊಸ ರೂಲ್ಸ್, ಇನ್ಮುಂದೆ ಹೆಚ್ಚುವರಿ ಶುಲ್ಕ ಪಾವತಿ ಕಡ್ಡಾಯ!

advertisement

ಇಂದು ಡಿಜಿಟಲ್ ಪಾವತಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ.ಇಂದು ಜನರು ಸಣ್ಣ ವಹಿವಾಟು ಗಳನ್ನು ಕೂಡ ಡಿಜಿಟಲ್ ‌ಪಾವತಿ (Digital Payment) ಮೂಲಕವೇ ಮಾಡುತ್ತಾರೆ.ಅದರಲ್ಲೂ ಎಟಿಎಮ್ ವಹಿವಾಟುಗಳು (ATM Transactions) ಆರಂಭವಾದ ನಂತರ ಜನರು ಬ್ಯಾಂಕ್ ಗೆ ತೆರಳಿ ವಹಿವಾಟು ನಡೆಸುವುದು ಕಡಿಮೆ ಯಾಗಿ ಬಿಟ್ಟಿದೆ, ಇದೀಗ ಅನ್ ಲೈನ್ ವಹಿವಾಟು (Online Transaction) ಗಳಿಗೆ ಬ್ಯಾಂಕ್ ಗಳು ಕೂಡ ಹೆಚ್ಚಿನ ಒತ್ತು ನೀಡುತ್ತಿದ್ದು, ಕೆಲವು ಬ್ಯಾಂಕ್‌ಗಳು ಈಗ ಡೆಬಿಟ್ ಕಾರ್ಡ್ (Debit Card) ಇಲ್ಲದೆಯೂ ಎಟಿಎಂನಿಂದ ಹಣ ಪಡೆಯಲು ಗ್ರಾಹಕರಿಗೆ ಅವಕಾಶ ನೀಡಿದೆ. ಇಂದು ಎಟಿಎಂ (ATM) ಬಳಕೆ ಉಚಿತ ಮಿತಿಗೆ RBI ಕಡಿವಾಣ ಹಾಕಿದ ಮೇಲೆ ಕೆಲವೊಂದು ಬ್ಯಾಂಕುಗಳು ಸಹ ನಿರ್ವಹಣಾ ವೆಚ್ಚವನ್ನು ಏರಿಕೆ ಮಾಡಿದೆ.

ATM ಬಳಕೆಗೆ ಶುಲ್ಕ ಪಾವತಿ:

 

 

ಗ್ರಾಹಕರು ಒಂದು ತಿಂಗಳಿನಲ್ಲಿ ತಮ್ಮ ಬ್ಯಾಂಕುಗಳ ಎಟಿಎಂ (ATM) ಗಳನ್ನು 5 ಕ್ಕಿಂತ ಹೆಚ್ಚು ಬಾರಿ ಬಳಕೆ ಮಾಡಿದರೆ ಅಥವಾ ಇತರೆ ಬ್ಯಾಂಕ್ ಎಟಿಎಂನಲ್ಲಿ 3 ಕ್ಕಿಂತ ಹೆಚ್ಚು ಬಾರಿ ವ್ಯವಹಾರ ನಡೆಸಿದರೆ 20 ರು ಅಧಿಕ ವೆಚ್ಚ ತೆರಬೇಕಾಗುತ್ತದೆ.

ಎಷ್ಟು ಮಿತಿ ಹೆಚ್ಚಳ:

ಈಗ ನೀವು ಎಸ್‌ಬಿಐ (SBI), ಪಿಎನ್‌ಬಿ (PNB), ಎಚ್‌ಡಿಎಫ್‌ಸಿ (HDFC) ಮತ್ತು ಐಸಿಐಸಿಐ ಬ್ಯಾಂಕ್‌ (ICICI Bank) ಗಳ ಎಟಿಎಂಗಳಿಂದ ಹಣವನ್ನು ಪಡೆಯಬೇಕಾದರೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಹೆಚ್ಚಿನ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಪ್ರತಿ ತಿಂಗಳು ನಿರ್ದಿಷ್ಟ ಸಂಖ್ಯೆಯ ಉಚಿತ ಎಟಿಎಂ (ATM) ವಹಿವಾಟುಗಳನ್ನು ನೀಡುತ್ತವೆ, ಒಂದು ವೇಳೆ ಈ ಮಿತಿ ಒಂದು ತಿಂಗಳೊಳಗೆ ಮೀರಿದರೆ, ಎಟಿಎಂ ವಹಿವಾಟಿನ ಮೇಲೆ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ

ಯಾವೆಲ್ಲ ಬ್ಯಾಂಕ್?

advertisement

ಪಂಜಾಬ್ ನ್ಯಾಷ್ ನಲ್ ಬ್ಯಾಂಕ್ (Punjab National Bank) ಪ್ರತಿ ತಿಂಗಳು 5 ಉಚಿತ ವಹಿವಾಟುಗಳನ್ನು ನೀಡುತ್ತದೆ. ಇದಕ್ಕಿಂತ ಹೆಚ್ಚಾದರೆ ಗ್ರಾಹಕರು ಹಣ ವಿತ್ ಡ್ರಾ ಮಾಡುವ ವಹಿವಾಟಿನ ಮೇಲೆ 10 ರೂ.ಪಾವತಿ ಮಾಡಬೇಕಾಗುತ್ತದೆ.

SBI Bank:

 

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಕೂಡ ಹೆಚ್ಚುವರಿ ಶುಲ್ಕ ವನ್ನು ವಿಧಿಸುತ್ತಿದೆ. ಈ ಬ್ಯಾಂಕ್ ತನ್ನ ಎಟಿಎಂಗಳಲ್ಲಿ 25,000 ರೂ.ಗಿಂತ ಹೆಚ್ಚಿನ ವಹಿವಾಟು ಗಳಿಗೆ 5 ಉಚಿತ ವಹಿವಾಟುಗಳನ್ನ ನೀಡುತ್ತದೆ. ಹೆಚ್ಚಿನ ವಹಿವಾಟು ಗಳಿಗೆ ಎಸ್‌ಬಿಐ 10 ರೂ. ಇತರ ಬ್ಯಾಂಕ್ ಎಟಿಎಂಗಳಲ್ಲಿ, ಪ್ರತಿ ವಹಿವಾಟಿಗೆ 20 ರೂ ಶುಲ್ಕ ವಿಧಿಸಬೇಕಾಗುತ್ತದೆ.

HDFC Bank:

 

 

ಅದೇ ರೀತಿ HDFC ಬ್ಯಾಂಕ್ ನಲ್ಲಿಯು ಶುಲ್ಕ ವಿಧಿಸಬೇಕಾಗುತ್ತದೆ. ಇಲ್ಲಿ ಕೂಡ ಪ್ರತಿ ತಿಂಗಳು 5 ಉಚಿತ ವಹಿವಾಟುಗಳ ಮಿತಿ ಇರಲಿದ್ದು 5 ವಹಿವಾಟುಗಳ ಮಿತಿ ಮೀರಿದ ನಂತರ ಗ್ರಾಹಕರಿಗೆ ಪ್ರತಿ ವಹಿವಾಟಿಗೆ ರೂ 21 ಮತ್ತು ಪ್ರತಿ ಹಣಕಾಸೇತರ ವಹಿವಾಟಿಗೆ ರೂ 8.5 ರೂ ಶುಲ್ಕ ವಿಧಿಸಬೇಕಾಗುತ್ತದೆ.

advertisement

Leave A Reply

Your email address will not be published.