Karnataka Times
Trending Stories, Viral News, Gossips & Everything in Kannada

Investment Plans: ಅಧಿಕ ಲಾಭಕ್ಕಾಗಿ ಹಣವನ್ನು ಈ 4 ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಎಲ್ಲವುದಕ್ಕಿಂತ ಬೆಸ್ಟ್!

advertisement

ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅನೇಕರು ಹೂಡಿಕೆ (Investment) ಯಂತಹ ನಾನಾ ರೀತಿಯ ಯೋಜನೆಗಳಿಗೆ ಕೈ ಹಾಕುತ್ತಿದ್ದಾರೆ. ಈ ಹೂಡಿಕೆ ಹಾಗೂ ಉಳಿತಾಯ ಎನ್ನುವುದು ಬಹಳ ಮುಖ್ಯವಾಗಿದ್ದು, ಈ ಹಣವು ಕಷ್ಟದ ಕಾಲದಲ್ಲಿ ನೆರವಿಗೆ ಬರುತ್ತೆ. ಈಗಾಗಲೇ ನಾನಾ ರೀತಿಯ ಹೂಡಿಕೆ ಯೋಜನೆ (Investment Plans) ಗಳಿದ್ದು ಅಂತಹ ಯೋಜನೆಗಳ ಪೈಕಿ ಈ ಕೆಳಗಿನ ಯೋಜನೆಗಳು ಬೆಸ್ಟ್ ಎನ್ನಬಹುದು. ಹಾಗಾದ್ರೆ ಉತ್ತಮ ಆದಾಯವನ್ನು ನೀಡುವ ನಾನಾ ರೀತಿಯ ಹೂಡಿಕೆ ಯೋಜನೆಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

Public Provident Fund:

 

 

ಸಾರ್ವಜನಿಕ ಭವಿಷ್ಯ ನಿಧಿ (PPF) ಕಡಿಮೆ ರಿಸ್ಕ್ ನಲ್ಲಿ ಹೂಡಿಕೆ ಮಾಡಬಹುದಾದ ಯೋಜನೆಗಳಲ್ಲಿ ಇದು ಕೂಡ ಒಂದು. 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಆದರೆ ಹೂಡಿಕೆಯ ಅವಧಿಯು ಸರಿಸುಮಾರು ಹದಿನೈದು ವರ್ಷಗಳಾಗಿದ್ದು, ತ್ರೈಮಾಸಿಕದ ಆಧಾರದ ಮೇಲೆ ಬಡ್ಡಿದರಗಳನ್ನು ನೀಡಲಾಗುತ್ತದೆ. ಈ ಖಾತೆಗಳಲ್ಲಿ ವರ್ಷಕ್ಕೆ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. 7.1% ಬಡ್ಡಿದರದಲ್ಲಿ ಅಧಿಕ ಆದಾಯವನ್ನು ಪಡೆಯಬಹುದಾಗಿದ್ದು, ತೆರಿಗೆ ಮುಕ್ತವಾಗಿದೆ.

National Pension Scheme:

 

 

ಇದೊಂದು ನಿವೃತ್ತಿ ನಂತರದ ಯೋಜನೆಯಾಗಿದ್ದು, ಇದನ್ನು ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್‌ಮೆಂಟ್‌ ಅಥಾರಿಟಿ (PFRDA) ಸಂಸ್ಥೆಯು ಇದನ್ನು ನಿರ್ವಹಿಸುತ್ತದೆ. ಈ ಯೋಜನೆಯ ಪ್ರಯೋಜನವನ್ನು 18 ವರ್ಷದಿಂದ 70 ವರ್ಷದವರೆಗಿನವರು ಪಡೆಯಬಹುದಾಗಿದೆ. ಇದು ಮಾರುಕಟ್ಟೆಯೊಂದಿಗೆ ಜೋಡಿತವಾಗಿರುವ ಯೋಜನೆ (Market Linked Scheme) ಯಾಗಿರುವ ಕಾರಣ ಹೂಡಿಕೆದಾರರಿಗೆ ಅಧಿಕ ಆದಾಯವನ್ನು ನೀಡಬಲ್ಲದು.

advertisement

Systematic Investment Plan:

ಈ ಯೋಜನೆಯಲ್ಲಿ ಗರಿಷ್ಠ ಮೊತ್ತವನ್ನು ಹೂಡಿಕೆ ಮಾಡಬೇಕಾಗಿಲ್ಲ. ನಿಯಮಿತವಾಗಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿ ಆದಾಯವನ್ನು ಗಳಿಸಬಹುದು. ಸಿಸ್ಟಮ್ಯಾಟಿಕ್ ಹೂಡಿಕೆ ಪ್ಲಾನ್ ಆಯ್ಕೆ ಮಾಡಿದ ತಕ್ಷಣವೇ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿನಿಂದ ಆಟೋಮ್ಯಾಟಿಕ್ ಆಗಿ ಡೆಬಿಟ್ ಮಾಡಲಾಗುತ್ತದೆ. ಈ ಹೂಡಿಕೆದಾರ ಖರೀದಿಸುವ ಮ್ಯೂಚುಯಲ್ ಫಂಡ್‌ನಲ್ಲಿ ಹಣವನ್ನು ಮರುಹೂಡಿಕೆ ಮಾಡಲಾಗುತ್ತದೆ. ಹೀಗಾಗಿ ಸಣ್ಣ ಮೊತ್ತದಿಂದ ಅಧಿಕ ಲಾಭ ಪಡೆಯಬೇಕೆನ್ನುವವ ರು ಈ ಹೂಡಿಕೆಯತ್ತ ಗಮನ ಹರಿಸಬಹುದು.

Equity Linked Saving Scheme:

 

 

ಈಗಾಗಲೇ ನಾನಾ ರೀತಿಯ ಮ್ಯೂಚುಯಲ್ ಫಂಡ್ ಯೋಜನೆಗಳಿದ್ದು, ಇಕ್ವಿಟಿ ಲಿಂಕ್ಡ್‌ ಸೇವಿಂಗ್‌ ಸ್ಕೀಮ್‌ ಕೂಡ ಮ್ಯೂಚುಯಲ್ ಫಂಡ್ ಯೋಜನೆಯಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಮುಕ್ತ ಪ್ರಯೋಜನಗಳನ್ನು ಪಡೆಯಬಹುದು. ಅದಲ್ಲದೇ ಸರಿಸುಮಾರು ಮೂರು ವರ್ಷಗಳು ಲಾಕ್ ಇನ್ ಅವಧಿಯಿದ್ದು, ಹೆಚ್ಚಿನ ಆದಾಯವನ್ನು ಗಳಿಸಬಹುದು.

Fixed Deposit:

 

 

ಹೆಚ್ಚಿನವರಿಗೆ ಚಿರಪರಿಚಿತರಾಗಿರುವ ಯೋಜನೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಕೂಡ ಒಂದು. ಯಾವುದೇ ರಿಸ್ಕ್ ಇಲ್ಲದಿರುವ ಯೋಜನೆಯಾಗಿರುವ ಕಾರಣ ಹೆಚ್ಚಿನವರು ಈ ಎಫ್ ಡಿ ಯತ್ತ ಒಲವು ತೋರಿಸುತ್ತಾರೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನಿಮ್ಮ ಹೂಡಿಕೆ ಹಣವನ್ನು ಇಟ್ಟು ಅಧಿಕ ಬಡ್ಡಿಯೊಂದಿಗೆ ಆದಾಯವನ್ನು ಪಡೆಯಬಹುದು. ಬಡ್ಡಿಯನ್ನು ಮುಕ್ತಾಯದ ವೇಳೆಯಲ್ಲಿ ಪಡೆಯಬಹುದು, ಇಲ್ಲವಾದರೆ ಪ್ರತಿ ತಿಂಗಳು ಬಡ್ಡಿಯ ಹಣವು ಖಾತೆಗೆ ಜಮಾ ಮಾಡಲಾಗುತ್ತದೆ.

advertisement

Leave A Reply

Your email address will not be published.