Karnataka Times
Trending Stories, Viral News, Gossips & Everything in Kannada

Swavalambi Sarathi: ಸರಕು ವಾಹನ, ಟ್ಯಾಕ್ಸಿ ಖರೀದಿಗೆ ಸರ್ಕಾರದಿಂದ 1.50 ಲಕ್ಷ ಸಾಲ ಸೌಲಭ್ಯ, ಹೀಗೆ ಅರ್ಜಿ ಸಲ್ಲಿಸಿ.

advertisement

ಇತ್ತೀಚಿನ ದಿನದಲ್ಲಿ ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಬೆಂಬಲಿಸುತ್ತಾ ಬಂದಿದೆ. ಸ್ವಾವಲಂಬಿ ಯೋಜನೆಗೆ ಪ್ರೋತ್ಸಾಹಿಸುವ ಸಲುವಾಗಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಹಾಗಾಗಿ ಸ್ವ ಉದ್ಯೋಗ ಮಾಡುತ್ತಾರೆ ಅಥವಾ ಸ್ವಾವಲಂಬಿ ಕೆಲಸ ಕಾರ್ಯ ನಿರ್ವಹಿಸುತ್ತಾರೆ ಅನ್ನೊರಿಗೆ ಇದೊಂದು ಉತ್ತಮ ಅವಕಾಶ ಸಿಗುತ್ತಿದೆ.

ಸರಕು ವಾಹನ ಮತ್ತು ಟ್ಯಾಕ್ಸಿ (Taxi) ಖರೀದಿಗೆ ಸಹಾಯಧನ ಮತ್ತು ಸಾಲಸೌಲಭ್ಯವನ್ನು ಸೇವಾ ಸಿಂಧು ಪೋರ್ಟಲ್ (Seva Sindhu Portal) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ (B. R. Ambedkar) ಅಭಿವೃದ್ಧಿ ನಿಗಮದ ವತಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಅರ್ಹ ಫಲಾನುಭವಿಗಳು ಈ ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆಗೆ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಗಳ ಅಡಿಯಲ್ಲಿ ಸಾಲ (Loan) ಸೌಲಭ್ಯ ನೀಡಲಾಗುತ್ತಿದೆ.

ಯಾಕಾಗಿ ಈ ಸಾಲ ಯೋಜನೆ?

ಸರಕು ವಾಹನ, ಟ್ಯಾಕ್ಸಿ (Yellow Board) ಬಾಡಿಗೆಗೆ ಖರೀದಿ ಮಾಡಲು ಈ ಒಂದು ಸಾಲಸೌಲಭ್ಯ ನೀಡಲಾಗುತ್ತಿದೆ. ಅದೇ ರೀತಿ ವಾಹನ ನಿಲುಗಡೆ ಘಟಕ ಸ್ಥಾಪನೆಗೆ 75% ಸಹಾಯಧನ ನೀಡಲಾಗುವುದು. ಅದೇ ರೀತಿ ಮಹಿಳೆ ಚಟುವಟಿಕೆಗೆ ಆರ್ಥಿಕ ಚಟುವಟಿಕೆಗೆ ಉತ್ತೇಜನೆ ನೀಡುವ ಸಲುವಾಗಿ ಆದಾಯ ಗಳಿಸಲು ಅನುಕೂಲವಾಗುವ ನೆಲೆಯಲ್ಲಿ ಕೆಲ ಯೋಜನೆ ಸಹ ರೂಪಿಸಲಾಗುತ್ತಿದೆ.

advertisement

ಅರ್ಹತೆ ಏನು?

  • ಭಾರತೀಯ ಪ್ರಜೆ ಆಗಿರಬೇಕು.
  • ಸರಕಾರಿ ಇತರ ಸಾಮಾನ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗಿರಬಾರದು.
  • ಈ ಸಾಲ (Loan) ವನ್ನು ಟ್ಯಾಕ್ಸಿ (Taxi) ಅಥವಾ ಇತರ ಸರಕು ಸಾಗಾಟದ ವಾಹನ ಖರೀದಿ ಮಾಡಲು ಮಾತ್ರವೇ ಬಳಸಬೇಕು.
  • ಯಾವುದೇ ಕಾನೂನು ಮೊಕದಮ್ಮೆಯಲ್ಲಿ ಇರುವವರು ಈ ಯೋಜನೆಗೆ ಅರ್ಹರಾಗಿರಲಾರರು.

10 ಜನ ಕನಿಷ್ಟ ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ 2.50ಲಕ್ಷ ರೂಪಾಯಿ ಮಂಜೂರು ಮಾಡಲಾಗುವುದು. 1.50 ಲಕ್ಷ ರೂಪಾಯಿ ಸಹಾಯ ಧನ ಸಹ ಇದರಲ್ಲಿ ನೀಡಲಾಗುವುದು ಅದರ ಹೊರತಾಗಿ 4% ದಷ್ಟು ಬಡ್ಡಿ ದರಕ್ಕೆ 1 ಲಕ್ಷ ರೂಪಾಯಿ ಸಾಲ ಸೌಲಭ್ಯ ಕೂಡ ನೀಡಲಾಗುವುದು.

ಬಡವರಿಗೆ ಅನುಕೂಲ:

ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಯೋಜನೆ (Swavalambi Sarathi Scheme) ಸಿದ್ಧವಾಗಿದ್ದು ಇದರ ಜೊತೆಗೆ ಸ್ವಾವಲಂಬಿ ಸಾರಥಿ ಯೋಜನೆಯು ಬಡ ವರ್ಗದ ಪುರುಷರಿಗೆ ಹಾಗೂ ಯುವ ಸಮುದಾಯಕ್ಕೆ ಸಾಕಷ್ಟು ನಡರವಾಗಿದೆ ಎನ್ನಬಹುದು. ಇದರಲ್ಲಿ ಕಡಿಮೆ ಬಡ್ಡಿದರದ ಸಾಲ ಸಿಗುವ ಕಾರಣ ಸುಲಭಕ್ಕೆ ತೀರಿಸಬಹುದು. ಅದರ ಜೊತೆಗೆ ಸಬ್ಸಿಡಿ (Subsidy) ಸಹ ಸಿಗುವ ಕಾರಣಕ್ಕೆ ಆರ್ಥಿಕ ಉತ್ತೇಜನೆ ಸಹ ದೊರೆತಂತಾಗುವುದು. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.

advertisement

Leave A Reply

Your email address will not be published.