Karnataka Times
Trending Stories, Viral News, Gossips & Everything in Kannada

SBI: ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ 3 ಬಂಪರ್ ಸಿಹಿಸುದ್ದಿ! ಬ್ಯಾಂಕ್ ಅಧಿಕೃತ ಘೋಷಣೆ

advertisement

ಗ್ರಾಹಕರ ಒಳಿತಿಗಾಗಿ ನೂತನ ಯೋಜನೆ ಜಾರಿಗೆ ತರುವುದು ಸಾಮಾನ್ಯವಾಗಿದೆ. ಈ ವಿಚಾರ ಬ್ಯಾಂಕ್ ಆಡಳಿತ ವೈಖರಿಗೆ ಕೂಡ ಸೇರಿದೆ. ಎಲ್ಲ ಬ್ಯಾಂಕುಗಳಿಗೂ ತಮ್ಮ ಗ್ರಾಹಕರ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಿದ್ದು, ಜನರ ಆರ್ಥಿಕ ವ್ಯವಹಾರ ಉತ್ತಮವಾಗಿರುವಂತೆ ನೋಡಿಕೊಳ್ಳುವ ನೆಲೆಯಲ್ಲಿ ಆಗಾಗ ನೂತನ ಯೋಜನೆ ಪರಿಚಯಿಸುತ್ತಲೇ ಇರಲಾಗುತ್ತದೆ.ಈ ನೆಲೆಯಲ್ಲಿ ಭಾರತದ ಪ್ರತಿಷ್ಠಿತ ಬ್ಯಾಂಕ್ ಆದ SBI ಕೂಡ ನೂತನ ಯೋಜನೆ ಘೋಷಣೆ ಮಾಡಿದ್ದು, SBI ಬ್ಯಾಂಕ್ ಖಾತೆ ಹೊಂದಿದ್ದವರಿಗೆ ಈ ವಿಚಾರ ದೊಡ್ಡ ಗುಡ್ ನ್ಯೂಸ್ ಆಗಿದೆ.

SBI ಹೊಸ ಯೋಜನೆ:

ಭಾರತದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ SBI Bank ತನ್ನ ಗ್ರಾಹಕರಿಗೆ ಹೊಸ ಯೋಜನೆ ಘೋಷಣೆ ಮಾಡಿದೆ. ಹಾಗಾಗಿ SBI ಬ್ಯಾಂಕಿನ ಗ್ರಾಹಕರಿಗೆ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಉಪಯೋಗ ಆಗಲಿದೆ. ಮಾರ್ಚ್ ತಿಂಗಳು ಬಂದರೆ ಬಹುತೇಕ ಬ್ಯಾಂಕುಗಳಿಗೆ ಹಣಕಾಸಿನ ಅಂತಿಮ ಅವಧಿ ಎಂದು ಆಗಲಿದೆ. ಬ್ಯಾಂಕ್ ನ ವಹಿವಾಟುಗಳ ಲೆಕ್ಕಾಚಾರ ಕೂಡ ಇದೆ ಅವಧಿಯಲ್ಲಿ ನಡೆಯಲಿದ್ದು, ಎಪ್ರಿಲ್ ನಂತರ ಬಹುತೇಕ ಹೊಸ ಕ್ರಮಗಳನ್ನು ಅಳವಡಿಸಿಕೊಂಡು ಆಡಳಿತ ಕಾರ್ಯ ವೈಖರಿ ಸಿದ್ಧಪಡಿಸಲಾಗುವುದು. ಅದರಂತೆ SBI ಕೂಡ ತನ್ನ ಗ್ರಾಹಕರಿಗಾಗಿ ಅಮೃತ್ ಕಲಶ ಮತ್ತು ಹಿರಿಯ ನಾಗರಿಕರಿಗೆ FD ಮತ್ತು ಕಡಿಮೆ ಬಡ್ಡಿದರದ ಗೃಹಸಾಲ ಯೋಜನೆಯನ್ನು ಜಾರಿಗೆ ತಂದಿದ್ದು ಅವುಗಳ ಅರ್ಜಿಗೆ ಅಂತಿಮ ದಿನ ವಿಸ್ತರಣೆ ಆಗಿದೆ.

Image Source: Business today

ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಅಮೃತ್ ಕಲಶ ಯೋಜನೆ (Amrit Kalash Yojana)ಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ಅಮೃತ್ ಕಲಶ ಯೋಜನೆ ಎಂದರೆ ಹಣಕಾಸಿನ ಹೂಡಿಕೆಯಾಗಿದ್ದು 7.10% ನಷ್ಟು ಬಡ್ಡಿದರ ಬರಲಿದೆ. ಹಣ ಹೂಡಿಕೆ ಮಾಡಿ ಅವಧಿಗಿಂತ ಮೊದಲೇ ವಾಪಾಸ್ಸು ಪಡೆಯಲು ಭಯಸಿದರೆ ನಿಮ್ಮ ಮೊತ್ತದಿಂದ 0.50% ನಷ್ಟು ದಂಡ ಪಾವತಿ ಮಾಡಬೇಕು. ದೀರ್ಘಾವಧಿಯ ಉಳಿತಾಯ ಯೋಜನೆಯಲ್ಲಿ ಈ ಒಂದು ಅಮೃತ್ ಕಲಶ ಯೋಜನೆ ಬಹಳ ಉಪಯುಕ್ತ ಆಗಲಿದೆ.

advertisement

Image Source: Minolta

ಕಡಿಮೆ ಬಡ್ಡಿದರಕ್ಕೆ ಗೃಹಸಾಲ

ಮನೆ ನಿರ್ಮಾಣಕ್ಕೆ ಉತ್ತೇಜನೆ ನೀಡಲು ಅತೀ ಕಡಿಮೆ ಬಡ್ಡಿದರಕ್ಕೆ ಗೃಹ ಸಾಲ (Home Loan)ನೀಡಲಾಗುತ್ತಿದೆ. ಇದು ಕೂಡ ಮಾರ್ಚ್ 31ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಿಬಿಲ್ ಸ್ಕೋರ್ 750-800 ಇದ್ದರೆ ಅಂತಹ ವ್ಯಕ್ತಿಗೆ SBI ನಲ್ಲಿ 8.60% ನಂತೆ ಸಾಲ ಸೌಲಭ್ಯ ನೀಡಲಾಗುವುದು. ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ 9% ನಂತೆ ಬಡ್ಡಿದರ ವಿಧಿಸಲಾಗುವುದು.

Image Source: Zee Business

ಹಿರಿಯ ನಾಗರಿಕರಿಗೆ ಉತ್ತೇಜನೆ

SBI ಬ್ಯಾಂಕ್ ಮೂಲಕ ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಬೆಂಬಲ ನೀಡಲಾಗುತ್ತಿದೆ. ಸೀನಿಯರ್ ಸಿಟಿಜನ್ FD ಕೇರ್ ಅಡಿಯಲ್ಲಿ ಕನಿಷ್ಠ 5 ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಹೂಡಿಕೆ ಮಾಡಬಹುದು. ಹಿರಿಯ ನಾಗರಿಕರು ಈ ಯೋಜನೆ ಅಡಿಯಲ್ಲಿ 7.50%ನ ವರೆಗೆ ಬಡ್ಡಿದರ ಪಡೆಯಲಿದ್ದಾರೆ. ಇದಕ್ಕಾಗಿ ಅರ್ಜಿ ಸಲ್ಲಿಸುವವರು ಮಾರ್ಚ್ 31 2024ರ ಒಳಗೆ ಅರ್ಜಿ ಸಲ್ಲಿಸಬೇಕು.

advertisement

Leave A Reply

Your email address will not be published.