Karnataka Times
Trending Stories, Viral News, Gossips & Everything in Kannada

Amrit Kalash Yojana: ಎಸ್ ಬಿ ಐ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗಲಿದೆ 7.6% ನಷ್ಟು ಬಡ್ಡಿ!

advertisement

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ಅತಿ ಉತ್ತಮವಾಗಿರುವ ಹಾಗೂ ಲಾಭದಾಯಕ ಯೋಜನೆಗಳನ್ನು ಪರಿಚಯಿಸಿದೆ. ಅಂತಹ ಉಳಿತಾಯ ಯೋಜನೆಗಳಲ್ಲಿ SBI ನ ಅಮೃತ ಕಲಶ್ ಯೋಜನೆ (Amrit Kalash Yojana) ಕೂಡ ಒಂದು. ಈ ಯೋಜನೆಯ ಗಡುವನ್ನು ಗ್ರಾಹಕರ ಒತ್ತಾಯದ ಮೇರೆಗೆ ವಿಸ್ತರಿಸಲಾಗಿದ್ದು ಇನ್ನೂ ಕೇವಲ ಏಳು ದಿನಗಳು ಮಾತ್ರ ಬಾಕಿ ಇದೆ ಹೂಡಿಕೆ ಮಾಡುವವರು ತಕ್ಷಣ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

ಏನಿದು ಎಸ್ ಬಿ ಐನ Amrit Kalash Yojana?

 

 

ಹೂಡಿಕೆಯ ಮೊತ್ತಕ್ಕೆ ಅತ್ಯುತ್ತಮ ಆದಾಯ ತಂದು ಕೊಡುವ ಯೋಜನೆ ಇದಾಗಿದ್ದು, ಹೆಚ್ಚಾಗಿ ಹಿರಿಯ ನಾಗರಿಕರಿಗಾಗಿಯೇ ಈ ಯೋಜನೆಯನ್ನು SBI ವಿನ್ಯಾಸಗೊಳಿಸಿದೆ. ಸಾಮಾನ್ಯರಿಗೆ 7.1% ಬಡ್ಡಿ ದರದಲ್ಲಿ ಹೂಡಿಕೆಯ ಲಾಭ ಪಡೆಯಬಹುದಾಗಿದ್ದರೆ ಹಿರಿಯ ನಾಗರಿಕರಿಗೆ ಈ ಯೋಜನೆಯ ಅಡಿಯಲ್ಲಿ 7.6% ನಷ್ಟು ಬಡ್ಡಿ ನೀಡಲಾಗುವುದು. 400 ದಿನಗಳ ಅವಧಿಗೆ ಎರಡು ಕೋಟಿ ರೂಪಾಯಿಗಳ ಒಳಗಿನ ಮೊತ್ತವನ್ನು ನೀವು ಹೂಡಿಕೆ ಮಾಡಬಹುದು.

advertisement

SBI ನ Amrit Kalash Yojana ಅಗಸ್ಟ್ 2023 ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ ಜನರ ಬೇಡಿಕೆಯ ಮೇರೆಗೆ ಡಿಸೆಂಬರ್ 31ರವರೆಗೆ ಈ ಯೋಜನೆಯ ಹೂಡಿಕೆಯನ್ನು ಮುಂದುವರಿಸಲಾಗಿದೆ.

 

 

ಎಸ್ ಬಿ ಐ ಅಮೃತ್ ಕಲಶ್ ಯೋಜನೆ ಪ್ರಯೋಜನಗಳು:

  • ಯೋಜನೆಯಲ್ಲಿ ಭಾರತೀಯರು ಮಾತ್ರವಲ್ಲದೆ NRI ಗಳು ಕೂಡ ಹೂಡಿಕೆ ಮಾಡಬಹುದು.
  • 400 ದಿನಗಳ ಹೂಡಿಕೆ ಆಗಿದ್ದು ಹಿರಿಯ ನಾಗರಿಕರಿಗೆ 7.6% ಬಡ್ಡಿ ದರದಲ್ಲಿ ಲಾಭ ಸಿಗುತ್ತದೆ.
  • ಈ ವಿಶೇಷ ಯೋಜನೆಯೆಲ್ಲಿ ಮೆಚ್ಯೂರ್ ಆದ ನಂತರ ಅಸಲು ಹಾಗೂ ಬಡ್ಡಿ ದರವನ್ನು ಸೇರಿಸಿ ಒಟ್ಟಿಗೆ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯಬಹುದು.
  • ಠೇವಣಿ ಹಣದಿಂದ ಬರುವ ಬಡ್ಡಿಯನ್ನು ತಿಂಗಳಿಗೆ ಮೂರು ತಿಂಗಳಿಗೆ ಅಥವಾ ಅರ್ಧ ವಾರ್ಷಿಕ ಸಮಯಕ್ಕೆ ಪಡೆದುಕೊಳ್ಳಬಹುದು. ಬಡ್ಡಿ ಹಣ ಗ್ರಾಹಕರ ಖಾತೆಗೆ ಜಮಾ ಆಗುತ್ತದೆ.
  • ಈ ಯೋಜನೆಯಲ್ಲಿ ಬಡ್ಡಿ ಹಣಕ್ಕೆ TDS ಪಾವತಿ ಹಾಕಬೇಕು. ಟಿಡಿಎಸ್ ರಿಟರ್ನ್ TDS Return ನಂತರ ನೀವು ಕಟ್ಟಿರುವ ಹಣವನ್ನು ಹಿಂಪಡೆಯಬಹುದು.
  • ಈ ಯೋಜನೆಯ ಅಡಿಯಲ್ಲಿ FD ಇಟ್ಟರೆ ಠೇವಣಿ ಹಣದ ಮೇಲೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುತ್ತದೆ.
  • ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭವನ್ನು ಪಡೆದುಕೊಳ್ಳಲು SBI ನ Amrit Kalash Yojana ಹೆಚ್ಚು ಪ್ರಯೋಜನಕಾರಿಯಾಗಿದ್ದು, ಹೂಡಿಕೆ ಮಾಡುವ ಮೊದಲು ಹೆಚ್ಚಿನ ಮಾಹಿತಿಗಾಗಿ SBI ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

advertisement

Leave A Reply

Your email address will not be published.