Karnataka Times
Trending Stories, Viral News, Gossips & Everything in Kannada

Electric Car: ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ಲಾಂಚ್ ಮಾಡಿದ ಚೀನಾ ಕಂಪನಿ! 670Km ರೇಂಜ್, ಫಾರ್ಚುನರ್ ಗಿಂತ ಕಡಿಮೆ ಬೆಲೆ

advertisement

ಚೀನಾದ ಖ್ಯಾತ ಕಾರು ನಿರ್ಮಾಣ ಕಂಪನಿ ಆಗಿರುವಂತಹ BYD ಭಾರತದಲ್ಲಿ ಕೂಡ ಒಂದು ಎಲೆಕ್ಟ್ರಿಕ್ ಕಾರ್ (Electric Car) ಅನ್ನು ಲಾಂಚ್ ಮಾಡಿದ್ದು ಅದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ. ಹೌದು ನಾವ್ ಮಾತಾಡ್ತಿರೋದು BYD Seal EV ಎಲೆಕ್ಟ್ರಿಕ್ ಕಾರಿನ ಬಗ್ಗೆ. BYD Seal EV ಕಾರು ಭಾರತದಲ್ಲಿ ಲಾಂಚ್ ಆದ ಕೆಲವೇ ಸಮಯದಲ್ಲಿ ಪ್ರೇಕ್ಷಕರ ಮನೆಗೆ ಗೆಲ್ಲೋದಕ್ಕೆ ಯಶಸ್ವಿಯಾಗಿದ್ದು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಇದೇ ಕಾರಿನದ್ದೇ ಮಾತು. ಚೈನೀಸ್ ಕಂಪನಿ ಈ ಕಾರನ್ನು ಎರಡು ವೇರಿಯಂಟ್ ಗಳಲ್ಲಿ ಭಾರತದಲ್ಲಿ ಲಾಂಚ್ ಮಾಡಿದ್ದು ವಿಶೇಷ.

BYD Seal Electric Car Battery:

 

Image Source: Stratstone

 

ಚೈನೀಸ್ ಕಂಪನಿ ಭಾರತಕ್ಕಾಗಿಯೇ, ಈ ಕಾರನ್ನು ಎರಡು ವೇರಿಯಂಟ್ ಗಳಲ್ಲಿ ಮಾಡಿದೆ. ಮೊದಲನೇದಾಗಿ 61.44 ರ ಬ್ಯಾಟರಿಯನ್ನು ಉಪಯೋಗಿಸಲಾಗಿದ್ದು ಇದು ಸಿಂಗಲ್ ಚಾರ್ಜ್ ನಲ್ಲಿ 580 ಕಿಲೋಮೀಟರ್ಗಳ ರೇಂಜ್ ನೀಡುತ್ತದೆ. 310Nm ಟಾರ್ಕ್ ಹಾಗೂ 204Hp ಪವರ್ ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಇದು ಹೊಂದಿದೆ. ಅದೇ ರೀತಿಯಲ್ಲಿ ಇನ್ನೊಂದು ವೇರಿಯಂಟ್ ಬಗ್ಗೆ ಮಾತನಾಡುವುದಾದರೆ 82.56 ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವಂತಹ ಎರಡನೇ ವೆರಿಯಂಟ್ ಕಾರು 665 km ಗಳ ರೇಂಜ್ ನೀಡುತ್ತದೆ. ಈ ಕಾರು ಪೂರ್ಣ ಪ್ರಮಾಣದಲ್ಲಿ ಡಸ್ಟ್ ಪ್ರೂಫ್ ಹಾಗೂ ವಾಟರ್ ಪ್ರೂಫ್ ಆಗಿದೆ.

BYD Seal EV Modern Technology:

 

advertisement

Image Source: Electrek

 

BYD Seal EV ಕಾರಿನಲ್ಲಿ ಸಾಕಷ್ಟು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು (Electric Car) ಗಳ ಸೆಗ್ಮೆಂಟ್ ನಲ್ಲಿ ಈ ಕಾರನ್ನು ಹಿಂದಿಕ್ಕೋದು ಸಾಕಷ್ಟು ಕಷ್ಟ ಸಾಧ್ಯವೇ ಸರಿ. ಸೇಫ್ಟಿಯ ದೃಷ್ಟಿಯಲ್ಲಿ 10 ಏರ್ ಬ್ಯಾಗ್ ಗಳನ್ನು ಕೂಡ ಈ ಕಾರಿನಲ್ಲಿ ಅಳವಡಿಸಲಾಗಿದೆ. ಆಟೋಮೆಟಿಕ್ ವೈಪರ್ ಜೊತೆಗೆ ಹಿಂಭಾಗದಲ್ಲಿ 360 ಡಿಗ್ರಿ ಕ್ಯಾಮೆರಾವನ್ನು ಕೂಡ ಅಳವಡಿಸಲಾಗಿದ್ದು ಇದು ಕೂಡ ಈ ಕಾರನ್ನು ಖರೀದಿ ಮಾಡುವಂತಹ ಗ್ರಾಹಕರಿಗೆ ಮತ್ತೊಂದು ರೀತಿಯಲ್ಲಿ ಲಾಭಕರವಾಗಲಿದೆ. ಇವುಗಳ ಜೊತೆಗೆ ಆಂಟಿ ಬ್ರೇಕಿಂಗ್ ಲಾಕ್ ಸಿಸ್ಟಮ್ ನಂತಹ ಸಾಕಷ್ಟು ಅಡ್ವಾನ್ಸ್ ಫೀಚರ್ಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.

BYD Seal EV Price:

 

Image Source: Autocar India

 

BYD Seal EV ಈ ಎಲೆಕ್ಟ್ರಿಕ್ ಸೂಪರ್ ಕಾರನ್ನು (Electric Car) ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಿದೆ. ಭಾರತದ ಮಾರುಕಟ್ಟೆಯಲ್ಲಿ ಈ ಕಾರಿನ ಬೇಸ್ ವೇರಿಯಂಟ್ ಕಾರಿನ ಬೆಲೆ 41 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯನ್ನು ಹೊಂದಿದೆ. ಇನ್ನು ಈ ಕಾರಿನ ಟಾಪ್ ವೇರಿಯಂಟ್ ಬೆಲೆ 53 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯನ್ನು ಹೊಂದಿದೆ. ಇನ್ನು ಇದರ ಜೊತೆಗೆ ಈ ಕಾರಿನಲ್ಲಿ ಅಳವಡಿಸಲಾಗಿರುವಂತಹ ಬ್ಯಾಟರಿ ಹಾಗೂ ಮೋಟರ್ ಮೇಲೆ ಬರೋಬ್ಬರಿ ಎಂಟು ವರ್ಷಗಳ ವಾರೆಂಟಿಯನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವಂತಹ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಾರಣದಿಂದಾಗಿ ಪ್ರತಿಯೊಬ್ಬರೂ ಕೂಡ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಖಂಡಿತವಾಗಿ ಈ ಕಾರಿನ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.