Karnataka Times
Trending Stories, Viral News, Gossips & Everything in Kannada

Electric Car: ಇನ್ನು 3 ವರ್ಷದಲ್ಲಿ ಪೆಟ್ರೋಲ್ ಕಾರಿಗಿಂತ ಎಲೆಕ್ಟ್ರಿಕ್ ಕಾರಿನ ಬೆಲೆ ಕುಗ್ಗಲಿದೆಯೇ! ಇಲ್ಲಿದೆ ಸಿಹಿಸುದ್ದಿ

advertisement

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಯಾವಾಗ ಏರುಗತಿಯತ್ತ ಸಾಗುತ್ತಾ ಹೋಯಿತೋ ಅಲ್ಲಿಂದ ವಾಹನ ಸವಾರರು ಪರದಾಡುವಂತಾಯಿತು. ಹೌದು ಪೆಟ್ರೋಲ್‌ (Petrol), ಡೀಸೆಲ್‌ (Diesel) ದರ ಏರಿಕೆಯಿಂದಾಗಿ ಸರಕು ಸಾಗಣೆಯ ಬಾಡಿಗೆ ಹಣದಿಂದಲೇ ಬದುಕು ಕಟ್ಟಿಕೊಂಡಿರುವವರು ಏನ್ ಮಾಡೋದು ಜೀವನವೇ ಸಾಕಾಗಿ ಹೋಗಿದೆ ಅಂದುಕೊಳ್ಳುವಾಗ ನಿಧಾನವಾಗಿ ಎಲೆಕ್ಟ್ರಿಕ್‌ ವಾಹನಗಳತ್ತ ಮುಖ ಮಾಡ ತೊಡಗಿದರು. ಹಾಗಾಗಿ, ದೇಶದ ಹಲವೆಡೆ ಅದ್ರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್‌ ವಾಹನಗಳು (Electric Vehicles) ಓಡಾಡಲು ಆರಂಭ ಮಾಡಿದವು. ಅಲ್ಲದೇ ಪೆಟ್ರೋಲ್‌, ಡೀಸೆಲ್‌ ದರವು ತುಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ರಸ್ತೆಗಿಳಿಯುತ್ತಿರುವ ವಿದ್ಯುತ್‌ ಚಾಲಿತ ವಾಹನಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಲೇ ಇದೆ.

ಅಗ್ಗವಾಗಲಿದೆಯೇ ಎಲೆಕ್ಟ್ರಿಕಲ್ ವಾಹನಗಳ ಬೆಲೆ ?

 

Image Source: ThePrint

 

ಪ್ರಸ್ತುತ, ಯಾವುದೇ ಎಲೆಕ್ಟ್ರಿಕ್ ಕಾರು (Electric Car) ಖರೀದಿಸುವಾಗ ಜನರಿಗೆ ಎರಡು ದೊಡ್ಡ ಸವಾಲುಗಳು ಎದುರಾಗುತ್ತವೆ. ಮೊದಲನೆಯದಾಗಿ, ಎಲೆಕ್ಟ್ರಿಕ್ ಕಾರುಗಳು ಈಗಿರುವ ICE ಕಾರುಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಇನ್ನೊಂದು ಒಂದೇ ಚಾರ್ಜ್‌ನಲ್ಲಿ ಹೆಚ್ಚಿನ ರೇಂಜ್ ನೀಡುವುದು ಈ ಕಾರುಗಳಿಗೆ ಸಾಧ್ಯವಾಗುವುದಿಲ್ಲ. ಆದರೆ ಈಗ ತಂತ್ರಜ್ಞಾನ ಕ್ರಮೇಣ ಸುಧಾರಿಸುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ರೇಂಜ್ (Electric Cars Range) ಹೆಚ್ಚಿಸುವಲ್ಲಿ ಯಶಸ್ಸನ್ನು ಸಾಧಿಸಲಾಗುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ 800 ಕಿಲೋ ಮೀಟರ್ ಗಿಂತ ಹೆಚ್ಚು ರೇಂಜ್ ನೀಡುವ ಕಾರುಗಳು ಲಭ್ಯವಿದೆ.  ಆದರೆ ಅದರ ಬೆಲೆ ಕೂಡಾ ದುಬಾರಿಯಾಗಿರುತ್ತದೆ. ಆದರೆ ಮುಂದಿನ ಮೂರು ವರ್ಷಗಳಲ್ಲಿ ಈ ವಾಹನಗಳ ದರ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಮಿತವ್ಯಯ ಎಲೆಕ್ಟ್ರಿಕ್ ವಾಹನಗಳು:

advertisement

ಮಿತವ್ಯಯ ಎಲೆಕ್ಟ್ರಿಕ್ ವಾಹನಗಳು (Electric Vehicles) ಕೊಳ್ಳುವಾಗ ಪೆಟ್ರೋಲ್ ಡೀಸೆಲ್ ವಾಹನಗಳಿಗಿಂತ ಕೊಂಚ ರೇಟ್ ಹೆಚ್ಚು ಎಂದು ಎನಿಸಿದರೂ ಕೂಡಾ ಬಳಕೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (Cheapest Electric Car) ಬಹಳ ಚೀಪ್. ಹಾಗಾಗಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಪ್ರಾರಂಭಿಸಿವೆ. ಹೆಚ್ಚಿನ ಗ್ರಾಹಕರು ಈಗ ಅವುಗಳನ್ನು ಇಷ್ಟಪಡುತ್ತಿದ್ದಾರೆ. ಆದರೆ ಅವುಗಳಲ್ಲಿ ಹೆಚ್ಚಿನವು ಖರೀದಿಗೆ ಸ್ವಲ್ಪ ಹೆಚ್ಚು ವೆಚ್ಚವಾಗುತ್ತವೆ. ಆದಾಗ್ಯೂ ಒಂದು ಕಾರನ್ನು ಮಿತವ್ಯಯ ಎಂದೂ ಕರೆಯಲಾಗುತ್ತಿದೆ. ಇದು ಒಂದೇ ಒಂದು ಚಾರ್ಜ್‌ನಲ್ಲಿ ಬಹು ದೂರದವರೆಗೆ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಮುಂದಿನ ದಿನಗಳಲ್ಲಿ Electric Car ಬೆಲೆ ಇನ್ನಷ್ಟು ಇಳಿಕೆ:

 

Image Source: Cartoq

 

ನೀವು ಕಾರನ್ನು ಹೆಚ್ಚು ಬಳಸುವಿರಾದರೆ ಎಲೆಕ್ಟ್ರಿಕ್ ಕಾರು (Electric Car) ತುಸು ಸೂಕ್ತ ಎನಿಸಬಹುದು. ಆದರೆ ಹೆಚ್ಚು ಓಡಿಸುವುದಿಲ್ಲ ಎನ್ನುವುದಿದ್ದರೆ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಕನಿಷ್ಠ 10 ವರ್ಷವಾದರೂ ಬೇಕಾದೀತು. 10 ವರ್ಷವಾದ ಬಳಿಕ ಕಾರನ್ನು ಇಟ್ಟುಕೊಳ್ಳುವವರು ಕಡಿಮೆಯೇ. ಹೀಗಾಗಿ, ನೀವು ಸದ್ಯದ ಬೆಲೆ ಸ್ಥಿತಿಯಲ್ಲಿ ಉಳಿತಾಯದ ದೃಷ್ಟಿಯಿಂದ ಎಲೆಕ್ಟ್ರಿಕ್ ಕಾರು ಕೊಳ್ಳಲು ಮುಂದಾಗುವುದು ಒಳ್ಳೆಯದು, ಈ ಮೇಲೆ ತಿಳಿಸಿದ ಅಂಕಿ ಅಂಶಗಳನ್ನು ಸದ್ಯದ ವೆಚ್ಚಗಳನ್ನು ಆಧಾರವಾಗಿಟ್ಟುಕೊಂಡು ಅಂದಾಜಿಸಲಾಗಿದೆ.

ಮುಂಬರುವ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಇನ್ನಷ್ಟು ಅಗ್ಗವಾಗಿ ದೊರಕಬಹುದು. ಬಿಡಿ ಭಾಗಗಳನ್ನು ಈಗ ಆಮದು ಮಾಡಿಕೊಳ್ಳಲಾಗುತ್ತಿದೆ ಆದರೆ ಮುಂದಿನ ದಿನಗಳಲ್ಲಿ ಅವುಗಳನ್ನು ಇಲ್ಲಿಯೇ ತಯಾರಿಸಿ ಅಳವಡಿಸಿದರೆ ಆಗ ಪೆಟ್ರೋಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಸೂಕ್ತ ಅನ್ನಿಸುವುದರಲ್ಲಿ ಎರಡು ಮಾತಿಲ್ಲ.

advertisement

Leave A Reply

Your email address will not be published.