Karnataka Times
Trending Stories, Viral News, Gossips & Everything in Kannada

Dinesh Gundu Rao: ಆರೋಗ್ಯದ ವಿಷಯವಾಗಿ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ! ಹೊಸ ಘೋಷಣೆ

advertisement

ಇಂದು ಧಾರವಾಡದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ರವರು ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಅಂತವರಿಗೆ ತ್ವರಿತ ಗತಿಯಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ಹೊಸ ಯೋಜನೆ (New Scheme) ಒಂದನ್ನು ಜಾರಿಗೊಳಿಸಿದರು. ಅದರಲ್ಲಿಯೂ ವಿಶೇಷವಾಗಿ ಜಾರಿಯಾಗಿರುವ ಯೋಜನೆಗೆ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ (Puneeth Rajkumar Hrudaya Jyothi Yojana) ಎಂಬ ಹೆಸರನ್ನು ಸೂಚಿಸಲಾಗಿದೆ.

 

Image Source: Indian Express

 

ಇನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರು ಪುನೀತ್ ರಾಜಕುಮಾರ್ (Puneeth Rajkumar) ಅವರನ್ನು ನೆನಪಿಸಿಕೊಳ್ಳುತ್ತಾ ಬಡವರಿಗೆ ಮತ್ತು ಆರೋಗ್ಯದ ಸಮಸ್ಯೆಯಲ್ಲಿ ಇದ್ದವರಿಗೆ ಪುನೀತ್ ರಾಜಕುಮಾರ್ ಅವರು ಬಹಳಷ್ಟು ನೆರವು ನೀಡಿದ್ದಾರೆ ಎಂದು ಮತ್ತು ಇಂತಹ ಕಾರ್ಯಕ್ರಮಗಳಿಗೆ ಅವರ ಆಶೀರ್ವಾದ ಯಾವಾಗಲೂ ಇದ್ದೇ ಇರುತ್ತದೆ ಎಂದು ಹೇಳುವ ಮೂಲಕ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಿದರು.

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯ ಕಾರ್ಯನಿರ್ವಹಣೆ ಹೇಗಿರುತ್ತದೆ?

 

advertisement

Image Source: Power TV

 

ಈ ಯೋಜನೆಯೂ ಹಬ್ಸ್ ಮತ್ತು ಸ್ಪೋಕ್ಸ್ (Hubs and Spokes) ಎಂಬ ಎರಡು ಹಂತದಲ್ಲಿ ಕಾರ್ಯ ನಿರ್ವಹಿಸಲಿದ್ದು. ಇದರಲ್ಲಿ 86 ಸರ್ಕಾರಿ ಮತ್ತು ತಾಲೂಕು ಆಸ್ಪತ್ರೆಗಳನ್ನು ಸ್ಪೋಕ್ಸ್ ಎಂದು 11 ಸೂಪರ್ ಸ್ಪೆಷಲಿಸ್ಟ್ ಆಸ್ಪತ್ರೆಗಳನ್ನು ಹಬ್ಸ್ ಎಂದು ವರ್ಗಾಯಿಸಲಾಗಿದೆ. ಮತ್ತು ಇಲ್ಲಿ ಎರಡು ಹಂತಗಳಲ್ಲಿ ಚಿಕಿತ್ಸೆ ಜರುಗಿಸಲಾಗುತ್ತದೆ. ಇನ್ನು ಸ್ಪೋಕ್ಸ್ ಕೇಂದ್ರಗಳಲ್ಲಿ Tricog ಸಂಸ್ಥೆಯ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಇನ್ನು ಹೃದಯಘಾತ ಸಂಬಂಧದಿಂದ ಆಸ್ಪತ್ರೆಗೆ ಬರುವವರಿಗೆ ಮೊದಲಿಗೆ ಪ್ರಾಥಮಿಕ ಚಿಕಿತ್ಸೆ ಆದ ಚುಚ್ಚುಮದ್ದನ್ನು ನೀಡಿ ನಂತರ AI ನ ತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿ ಕ್ರಿಟಿಕಲ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಸಲಾಗುತ್ತದೆ. ಇನ್ನು ಕ್ರಿಟಿಕಲ್ ಎಂಬ ಪರಿಸ್ಥಿತಿ ಬಂದಲ್ಲಿ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ (Tenecteplase Injection) ನೀಡಲಾಗುತ್ತದೆ. ಇನ್ನೂ ಹೆಚ್ಚಿನ ರೀತಿಯಾದಂತಹ ಚಿಕಿತ್ಸೆ ಬೇಕಾಗಿದ್ದಲ್ಲಿ ಅವರನ್ನು ಹಬ್ಸ್ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತದೆ. ಇನ್ನು ಈ ರೀತಿಯಾಗಿ ವರ್ಗಾವಣೆ ಆದಂತಹ ವ್ಯಕ್ತಿಗಳಿಗೆ ಗೋಲ್ಡನ್ ಅವರ ಒಳಗಡೆ ಉಚಿತ ಶಾಸ್ತ್ರ ಚಿಕಿತ್ಸೆಯನ್ನು ಕೂಡ ಮಾಡಲಾಗುತ್ತದೆ.

ಯೋಜನೆಯ ಮೊದಲನೇ ಹಂತದಲ್ಲಿ ಈಗಾಗಲೇ 1,23,600 ಮಂದಿ ತಪಾಸಣೆಗೆ ಒಳಗಾಗಿದ್ದು ಈ ಮೊದಲು ಯಾವುದೇ ರೀತಿಯಾದಂತಹ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ (Tenecteplase Injection) ಲಭ್ಯವಿರಲಿಲ್ಲ , ಆದರೆ ಈ ಯೋಜನೆ ಅಡಿಯಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆ ಅಲ್ಲಿಯೂ ಕೂಡ ಟೆನೆಕ್ಟೆಪ್ಲೇಸ್ (20 mg &30 mg) ಚುಚ್ಚುಮದ್ದು ಲಭ್ಯವಾಗಿರಲಿದೆ. ಇನ್ನು ಈ ಯೋಜನೆ ಅಡಿಯಲ್ಲಿ ಈಗಾಗಲೇ 2000 ಕ್ಕೂ ಅಧಿಕ ಮಂದಿಗೆ ಹಬ್ ಕೇಂದ್ರಗಳಲ್ಲಿ 500 ಥಂಬೋಲಿಸಿಸ್, 371 ಆಂಜಿಯೋಪ್ಲಾಸ್ಟಿ, ಮತ್ತು 05 ಬೈಪಾಸ್ ಸರ್ಜರಿಗಳನ್ನು ನಡೆಸಲಾಗಿದೆ.

ಇನ್ನು ಈ ರೀತಿಯಾದಂತಹ ಚಿಕಿತ್ಸೆ ಮೊದಲನೇ ಹಂತದಲ್ಲಿ ನಡೆಯಲಾಗುತ್ತಿದ್ದು ಇನ್ನೂ ವಿವಿಧ ಹಂತಗಳಲ್ಲಿ ಹೊಸ ರೀತಿಯಾದಂತಹ ಬದಲಾವಣೆಯನ್ನು ಕೂಡ ಅಳವಡಿಸಿ ಮುಂಬರುವ ದಿನಗಳಲ್ಲಿ ಹೃದಯಘಾತ (Heart Attack) ಸಮಸ್ಯೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬರುವವರಿಗೆ ಹೊಸ ರೀತಿಯಾದಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.

advertisement

Leave A Reply

Your email address will not be published.