Karnataka Times
Trending Stories, Viral News, Gossips & Everything in Kannada

Electric Car: ಟಾಟಾ ನೆಕ್ಸಾನ್ ಇವಿಗೆ ಟಕ್ಕರ್ ನೀಡಲು ಮಾರುಕಟ್ಟೆಗೆ ಬರಲಿದೆ ಮಹೀಂದ್ರಾ XUV300 EV, ಬೆಂಕಿ ಲುಕ್

advertisement

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಅಧಿಪತ್ಯ ವನ್ನು ಸಾಧಿಸಿರುವ ವಾಹನ ತಯಾರಕ ಕಂಪೆನಿಗಳಲ್ಲಿ ಮಹಿಂದ್ರಾ (Mahindra) ಕೂಡ ಒಂದು. ಈಗಾಗಲೇ ಹಲವು ವಿಶೇಷತೆಗಳನ್ನೊಳಗೊಂಡ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಮಹೀಂದ್ರಾ ಹೆಚ್ಚು ಎಲೆಕ್ಟ್ರಿಕ್ ಕಾರ (Electric Car)ನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಮುಂದಿನ ವರ್ಷ ಮಹೀಂದ್ರಾ XUV300 EV ಯನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಹಾಗಾದ್ರೆ ಈ ಹೊಸ ಇವಿ ಕಾರಿನ ವಿಶೇಷತೆಗಳು ಹಾಗೂ ಬೆಲೆಯ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಮಹೀಂದ್ರಾ XUV300 EV ನಲ್ಲಿ ಏನೆಲ್ಲಾ ವಿಶೇಷತೆಗಳಿವೆ?

ಮಾರುಕಟ್ಟೆಗೆ ಬರಲಿರುವ ಹೊಸ ಮಹೀಂದ್ರಾ XUV300 EV (Mahindra XUV300 EV) ಮಾದರಿಯು 150bhp ಮತ್ತು 310Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಕಾರಿನ ಮುಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಸಣ್ಣ 35kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ. ಅದಲ್ಲದೇ ಇವಿಯಲ್ಲಿ ಪವರ್‌ಟ್ರೇನ್ ಸೆಟಪ್ ಅನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 375 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ ಅನ್ನು 50kW DC ಫಾಸ್ಟ್ ಚಾರ್ಜರ್ ಬಳಸಿಕೊಂಡು 50 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

advertisement

ಈ ಕಾರಿನ ಮುಂಭಾಗದಲ್ಲಿ ಏರ್ ಟೆಕ್, ಪರಿಷ್ಕೃತ ಹೆಡ್‌ಲ್ಯಾಂಪ್‌ಗಳು, ಹೊಸ LED DRL ಗಳು ಹಾಗೂ ನೂತನ ಎರಡು-ಭಾಗದ ಗ್ರಿಲ್ ಅನ್ನು ಒಳಗೊಂಡಿದೆ. ಅದಲ್ಲದೆ, ಅಲಾಯ್ ವ್ಹೀಲ್ ಗಳು (Alloy Wheel), ಪೂರ್ಣ-ಅಗಲದ ಎಲ್‌ಇಡಿ ಲೈಟ್ ಬಾರ್ ( LED Light Bar) ಗಳೊಂದಿಗೆ ಟೈಲ್ಗೇಟ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪರಿಷ್ಕರಿಸಿದ ಸೆಂಟರ್ ಕನ್ಸೋಲ್ ಮತ್ತು ಡ್ಯಾಶ್‌ಬೋರ್ಡ್ (Dashboard) ನಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಲಾಗಿದ್ದು, ಈ ಕಾರು ಆಕರ್ಷಕ ಲುಕ್ ನೊಂದಿಗೆ ವಾಹನ ಪ್ರಿಯರ ಗಮನ ಸೆಳೆಯಲಿದೆ.

ಮಹೀಂದ್ರಾ XUV300 ಇವಿ ಬೆಲೆ

ಮಹೀಂದ್ರಾ XUV300 ಇವಿಯನ್ನು ಮುಂದಿನ ವರ್ಷ 2024ರಲ್ಲಿ ಬಿಡುಗಡೆಯಾಗಬಹುದು. ಈ ಕಾರು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಇದರ ಬೆಲೆಯೂ 15.99 ಲಕ್ಷದಿಂದ ರೂ ನಿಂದ 19.39 ಲಕ್ಷ ರೂಯೊಳಗೆ ಇರಲಿದ್ದು ಅಧಿಕೃತ ಬೆಲೆಯೂ ಎಷ್ಟಿರಬಹುದು ಎನ್ನುವ ಬಗ್ಗೆ ಅಧಿಕೃತ ಮಾಹಿತಿಯೂ ತಿಳಿದು ಬಂದಿಲ್ಲ.

advertisement

Leave A Reply

Your email address will not be published.