Karnataka Times
Trending Stories, Viral News, Gossips & Everything in Kannada

Vivo: ಅದ್ಭುತ ಫೀಚರ್ಸ್ ಹಾಗೂ ಲುಕ್ ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೊ ಸ್ಮಾರ್ಟ್ ಫೋನ್!

advertisement

ವಿವೋ ಕಂಪೆನಿ ಯೂ ಸ್ಮಾರ್ಟ್ ಫೋನ್ ಪ್ರಿಯರಿಗೆ ಸದಾ ಒಂದಲ್ಲ ಒಂದು ಸಿಹಿ ಸುದ್ದಿಯನ್ನು ನೀಡುವ ಮೂಲಕ ಖುಷಿ ಪಡಿಸುತ್ತ ಇರುತ್ತದೆ. ಈಗಾಗಲೇ ಕಂಪೆನಿಯೂ ಗ್ರಾಹಕರ ಅಭಿರುಚಿಗೆ ತಕ್ಕುದಾದ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸ್ಮಾರ್ಟ್ ಫೋನ್ ಪ್ರಿಯರ ಮನಸ್ಸನ್ನು ಗೆದ್ದುಕೊಂಡಿದೆ. ಇದೀಗ ವಿವೋ ಕಂಪೆನಿಯ Vivo X100 ಮತ್ತು Vivo X100 Pro ಈ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಬರಲಿದ್ದು, ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಒಮ್ಮೆ ಓದಿ.

ಯಾವಾಗ ಈ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಎಂಟ್ರಿ

ವಿವೋ ಕಂಪೆನಿಯೂ Vivo X100 ಮತ್ತು Vivo X100 Pro ಸ್ಮಾರ್ಟ್ ಫೋನ್ ಗಳನ್ನು ವರ್ಷದ ಕೊನೆಯ ತಿಂಗಳಿನಲ್ಲಿ ಅಂದರೆ ಡಿಸೆಂಬರ್ 14 ರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿವೆ. ಅದಲ್ಲದೇ ಮುಂದಿನ ವರ್ಷದ 2024 ಜನವರಿ14 ಕ್ಕೆ Vivo X100 ಮತ್ತು Vivo X100 Pro ಈ ಸ್ಮಾರ್ಟ್ ಫೋನ್ ಗಲಿ ಭಾರತೀಯ (India) ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಕಳೆದ ತಿಂಗಳು ನವೆಂಬರ್ 14 ಕ್ಕೆ ಈ ಎರಡು ಸ್ಮಾರ್ಟ್ ಫೋನ್ ಗಳು ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು.

advertisement

ವಿವೋದ ಈ ಎರಡು ಸ್ಮಾರ್ಟ್ ಫೋನ್ ಗಳ ವಿಶೇಷತೆಗಳೇನು?

ವಿವೋ X100 ಮತ್ತು ವಿವೋ X100 ಪ್ರೊ (Vivo X100 and Vivo X100 Pro) ಆಂಡ್ರಾಯ್ಡ್ 14-ಆಧಾರಿತ Origin OS 4 ನಲ್ಲಿ ರನ್ ಆಗಲಿದ್ದು, ಇದು 6.78-ಇಂಚಿನ AMOLED 8T LTPO ಡಿಸ್ಪ್ಲೇಯೊಂದಿಗೆ 120Hz ವರೆಗಿನ ರಿಫ್ರೆಶ್ ದರವನ್ನು ಹೊಂದಿದೆ. ಈ ಎರಡೂ ಫೋನ್‌ಗಳು 4nm ಡೈಮೆನ್ಸಿಟಿ 9300 ಚಿಪ್‌ಸೆಟ್‌ನಿಂದ 16GB RAM ನೊಂದಿಗೆ ಜೋಡಿಸಲ್ಪಟ್ಟಿದ್ದು, ಗ್ರಾಹಕರನ್ನು ತನ್ನ ಫೀಚರ್ಸ್ ಗಳಿಂದಲೇ ಗಮನ ಸೆಳೆಯಲಿದೆ.

ವಿವೋ X100 ಮತ್ತು ವಿವೋ X100 ಪ್ರೊ ಕ್ಯಾಮೆರಾ ಹಾಗೂ ಬ್ಯಾಟರಿ ಸಾಮರ್ಥ್ಯ

ವಿವೋ X100 ಮತ್ತು ವಿವೋ X100 ಪ್ರೊ ಸ್ಮಾರ್ಟ್​ಫೋನ್​ಗಳು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ಗಳನ್ನು ಹೊಂದಿದೆ. ವಿವೋ X100 50-ಮೆಗಾಪಿಕ್ಸೆಲ್ ಪ್ರಾಥಮಿಕ Sony IMX920 VCS ಬಯೋನಿಕ್ ಮುಖ್ಯ ಕ್ಯಾಮೆರಾ ಮತ್ತು 64-ಮೆಗಾಪಿಕ್ಸೆಲ್ Zeiss ಪೆರಿಸ್ಕೋಪ್ ಟೆಲಿಫೋಟೋ (Periscope Telephoto) ಕ್ಯಾಮೆರಾವನ್ನು ಹೊಂದಿದೆ.

ಪ್ರೊ ಮಾದರಿಯು 50-ಮೆಗಾಪಿಕ್ಸೆಲ್ ಸೋನಿ IMX989 1-ಇಂಚಿನ ಸಂವೇದಕ ಮತ್ತು 50-ಮೆಗಾಪಿಕ್ಸೆಲ್ ಝೈಸ್ APO ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದ್ದು ಈ ಎರಡೂ ಮಾದರಿಗಳಲ್ಲಿ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ (Ultra Wide Angle) ಕ್ಯಾಮೆರಾವಿದೆ. ಇನ್ನು ಈ ವಿವೋ X100 ಮತ್ತು ವಿವೋ X100 ಪ್ರೊ ಎರಡೂ 1TB ವರೆಗಿನ UFS 4.0 ಅಂತರ್ಗತ ಸಂಗ್ರಹಣೆಯೊಂದಿಗೆ ಲಭ್ಯವಿರಲಿದ್ದು, ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ (In Display FingerPrint Scanner) ಅನ್ನು ಕಾಣಬಹುದು. ವಿವೋ X100 ಮತ್ತು ವಿವೋ X100 ಪ್ರೊವು 5,000mAh (120W ಚಾರ್ಜಿಂಗ್‌) ಮತ್ತು 5,400mAh (100W ಚಾರ್ಜಿಂಗ್) ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

 

advertisement

Leave A Reply

Your email address will not be published.