Karnataka Times
Trending Stories, Viral News, Gossips & Everything in Kannada

BPL-APL Card: ಹೊಸ ಬಿಪಿಎಲ್ ಎಪಿಎಲ್ ಕಾರ್ಡ್ ಬೇಕಿದ್ದವರಿಗೆ ಗುಡ್ ನ್ಯೂಸ್; ಹೊಸ ರೂಲ್ಸ್ ಜಾರಿಗೆ!

advertisement

ರೇಷನ್ ಕಾರ್ಡ್ (Ration Card) ಹೊಂದಿದ್ರೆ ಮಾತ್ರ ಸರ್ಕಾರದ ಯೋಜನೆಯ ಪ್ರಯೋಜನ ಸಿಗುತ್ತೆ ಎನ್ನುವುದು ಗೊತ್ತಿರುವ ವಿಚಾರ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕೂಡ ಜಾತಕ ಪಕ್ಷಿಯಂತೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಕಾದು ಕುಳಿತಿದ್ದಾರೆ. ಮೂರು ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ವಿತರಣೆ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆಯಾದರೂ ಈವರೆಗೆ ವಿತರಣೆ ಆಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರ ಇಲಾಖೆಯಿಂದ ಗುಡ್ ನ್ಯೂಸ್ ಒಂದು ಸಿಕ್ಕಿದೆ.

ವಿತರಣೆಯಾಗಲಿದೆ ಹೊಸ ಪಡಿತರ ಚೀಟಿ:

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ (Minister KH Muniyappa) ಅವರು ತಿಳಿಸಿರುವಂತೆ, ಸರ್ಕಾರಕ್ಕೆ ಒಟ್ಟು ಮೂರು ಲಕ್ಷ ಹೊಸ ಪಡಿತರ ಚೀಟಿ (Ration Card) ಪಡೆದುಕೊಳ್ಳಲು ಅರ್ಜಿ ಸ್ವೀಕರಿಸಲಾಗಿದೆ. ಅದರಲ್ಲೂ ಇತ್ತೀಚಿಗೆ ಆದ್ಯತೆ ಮೇರೆಗೆ ಆರೋಗ್ಯ ಕಾರಣಕ್ಕೆ ಬಿಪಿಎಲ್ ಕಾರ್ಡ್ (BPL Card) ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದಾಗ ಒಂದು ಲಕ್ಷದಷ್ಟು ಅರ್ಜಿ ಸಂದಾಯವಾಗಿದೆ. ಈಗಾಗಲೇ ಸುಮಾರು ಒಂದು ಲಕ್ಷ ಕಾರ್ಡ್ ಅರ್ಜಿಯನ್ನು ಅನರ್ಹರು ಎಂದು ಗುರುತಿಸಿ ತಿರಸ್ಕರಿಸಲಾಗಿದೆ.

 

 

advertisement

ಸುಮಾರು 20 ಸಾವಿರ ಪಡಿತರ ಚೀಟಿ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಪರಿಶೀಲನೆ ನಡೆಸಲಾಗಿದ್ದು 20 ಸಾವಿರ ಫಲಾನುಭವಿಗಳು ಸದ್ಯದಲ್ಲಿಯೇ ಬಿಪಿಎಲ್ ಎಪಿಎಲ್ (BPL-APL Card) ಅಂತ್ಯೋದಯ ಕಾರ್ಡ್ (Antyodaya Card) ಪಡೆಯಲಿದ್ದಾರೆ.

 

 

ಪ್ರತಿ ತಿಂಗಳು ತಿದ್ದುಪಡಿಕೆ ಅವಕಾಶ:

ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ (Guarantee Scheme) ಗಳ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಪಡಿತರ ಚೀಟಿಯಲ್ಲಿ ಕೆಲವು ಬದಲಾವಣೆಗಳು ಆಗುವುದು ಅನಿವಾರ್ಯವಾಗಿತ್ತು. ಆದರೆ ಈವರೆಗೆ ಪ್ರಯತ್ನ ಪಟ್ಟರು ಕೂಡ ಸರ್ವರ್ ಸಮಸ್ಯೆಯಿಂದಾಗಿ ಸಾಕಷ್ಟು ಜನ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಈ ಹಿನ್ನೆಲೆಯಲ್ಲಿ ಇನ್ನೂ ಮುಂದೆ ಪ್ರತಿ ತಿಂಗಳು ಒಂದನೇ ತಾರೀಖಿನಿಂದ 10ನೇ ತಾರೀಖಿನವರೆಗೆ ತಿದ್ದುಪಡಿ ಮಾಡಲು ಅವಕಾಶ ಕೊಡಲಾಗುವುದು ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ ಆದ್ಯತೆಯ ಮೇರೆಗೆ ಹೊಸ ಪಡಿತರ ಚೀಟಿಗೆ (Ration Card) ಅರ್ಜಿ ಸಲ್ಲಿಸಲು ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಮೈಸೂರು ಮಂಗಳೂರು ಸೇರಿದಂತೆ ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ 10ನೇ ತಾರೀಖಿನವರೆಗೆ ತಿದ್ದುಪಡಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ 16,79,604 ಅಷ್ಟು ಅರ್ಜಿಗಳ ತಿದ್ದುಪಡಿ ಮಾಡಲಾಗಿದೆ ಆದರೆ ತಾಂತ್ರಿಕ ಸಮಸ್ಯೆ ಇರುವುದರಿಂದಾಗಿ ಸಾಕಷ್ಟು ಅರ್ಜಿಗಳನ್ನು ಸ್ವೀಕರಿಸಲು ಸಾಧ್ಯವಾಗಿಲ್ಲ. ಸ್ವೀಕರಿಸುವ ಅರ್ಜಿಯಲ್ಲಿ ತಿದ್ದುಪಡಿಯೂ ಆಗಿಲ್ಲ. ಸದ್ಯದಲ್ಲಿಯೇ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪಡಿತರ ಚೀಟಿ ತಿದ್ದುಪಡಿ ಹಾಗೂ ಹೊಸ ಪಡಿತರ ಚೀಟಿ ವಿತರಣೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

advertisement

Leave A Reply

Your email address will not be published.