Karnataka Times
Trending Stories, Viral News, Gossips & Everything in Kannada

Agricultural Loan: ಸಾಲ ಮರುಪಾವತಿಗೆ ಕಷ್ಟ ಪಡುತ್ತಿರುವ ರೈತರಿಗೆ ಸಿಹಿಸುದ್ದಿ, ಸರ್ಕಾರದ ಮಹತ್ವದ ಆದೇಶ.

advertisement

ಇತ್ತೀಚಿನ ದಿನದಲ್ಲಿ ಕೃಷಿ ಚಟುವಟಿಕೆ ಮಾಡುವವರ ಸಂಖ್ಯೆ ಕಡಿಮೆ ಆಗಿದೆ ಹಾಗಾಗಿ ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವ ಅನೇಕ ಸರಕಾರಿ ಜನಪರ ಕಾರ್ಯಕ್ರಮ ಪರಿಚಯಿಸಲಾಗುತ್ತಿದೆ. ಅದೇ ರೀತಿ ಯೋಜನೆ, ಸಾಲ, ಸಬ್ಸಿಡಿ (Subsidy) ಸೇರಿದಂತೆ ಅನೇಕ ರೈತಪರ ಕಾರ್ಯಕ್ರಮ ಪರಿಚಯಿಸಲಾಗುತ್ತಿದೆ. ಅದೇ ರೀತಿ ಕೃಷಿ ಕಾರ್ಯ ಚಟುವಟಿಕೆಗೆ ನೀಡಲಾಗುವ ಸಾಲ ಸೌಲಭ್ಯವನ್ನು ಅನೇಕ ಸಂದರ್ಭಗಳಲ್ಲಿ ಮನ್ನ ಮಾಡಿದ್ದು ಇದೆ. ಹಾಗೇ ಕಾಲಾವಕಾಶ ನೀಡಿ ಬದಲಾಯಿಸಿದ್ದು ಇದೆ. ಹಾಗಾಗಿ ಈ ಬಗ್ಗೆ ಕಂದಾಯ ಸಚಿವರ ನಿರ್ಣಯವನ್ನು ನಾವಿಂದು ಈ ಲೇಖನದ ಮೂಲಕ ತಿಳಿಸಲಿದ್ದೇವೆ.

ಕಂದಾಯ ಸಚಿವರ ನಿರ್ಣಯ:

ಕೃಷಿ ಸಾಲ (Agricultural Loan) ನೀತಿ ನಿರೂಪಣೆ ಆಗಾಗ ಬದಲಾಗುತ್ತಿರುವುದು ಕಾಣಬಹುದು. ಅನೇಕ ಸಂದರ್ಭಗಳಲ್ಲಿ ಸಾಲದ ಮೇಲೆನೇ ಸಬ್ಸಿಡಿ ಸಹ ನೀಡಲಾಗುತ್ತಿದೆ‌ ಈ ಮೂಲಕ ಆರ್ಥಿಕ ಉತ್ತೇಜನ ನೀಡಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದೇ ರೀತಿ ಒಂದು ಕಾಲದಲ್ಲಿ ಕೃಷಿಗಾಗಿ ಸಾಲ ಮಾಡಿ ಫಸಲು ಬರದೇ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಈಗ ಕಂದಾಯ ಸಚಿವರು ತೆಗೆದುಕೊಂಡ ನಿರ್ಣಯ ನಿಟ್ಟುಸಿರು ಬಿಡುವಂತೆ ಆಗಿದೆ‌.

 

 

advertisement

ಕಂದಾಯ ಸಚಿವರು ಹೇಳಿದ್ದೇನು:

ಕಂದಾಯ ಸಚಿವರಾದ ಕೃಷ್ಣಬೈರೇಗೌಡ (Krishna Byre Gowda) ಅವರು ರೈತರ ಸಾಲ (Agricultural Loan) ಮರುಪಾವತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಮರುಪಾವತಿ ಅವಧಿ ಪರಿವರ್ತಿಸಲು ಸರಕಾರ ತೀರ್ಮಾನ ಕೈಗೊಂಡ ಬಗ್ಗೆ ಅವರು ಮಾಧ್ಯಮದ ಮುಂದೆ ಮಾತಾಡಿದ್ದಾರೆ. ಮರುಪಾವತಿ ಅವಧಿ ಪರಿವರ್ತಿಸಲು ಕ್ರಮ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಅಲ್ಪಾವಧಿ ಸಾಲದ ಅವಧಿಯನ್ನು ಮಧ್ಯಮ ಅವಧಿಗೆ, ಮಧ್ಯಮ ಅವಧಿ ಸಾಲವನ್ನು ದೀರ್ಘಾವಧಿಗೆ ಪರಿವರ್ತಿಸಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಹಾಗಾಗಿ ರೈತರಿಗೆ ಈ ಯೋಜನೆ ಸಾಕಷ್ಟು ನೆರವಾಗುತ್ತಿದೆ‌ ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಪರಿಹಾರ ಘೋಷಣೆ:

ರಾಜ್ಯದ ರೈತರಿಗೆ ಬರ ಪರಿಹಾರ ಘೋಷಣೆ ಮಾಡಲಾಗುತ್ತಿದೆ. ಅದು ಕಂತಿನ ಪ್ರಕಾರ ನೀಡುವ ಕಾರಣ ಸಾಕಷ್ಟು ರೈತರಿಗೆ ನೆರವಾಗಲಿದೆ. 2000 ರೂಪಾಯಿ ಹಣ ಡಿಬಿಟ್ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಇದರ ಚಾಲನೆಯನ್ನು ಚಳ್ಳಕೆರೆ ತಾಲೂಕಿನಲ್ಲಿ ಚಾಲನೆ ನೀಡಲಾಗುವುದು ಬಳಿಕ ಹಣ ರೈತರ ಖಾತೆಗೆ ಜಮೆ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಕಂದಾಯ ಸಚಿವರ ಈ ನಿರ್ಣಯದಿಂದ ಸಾಲ (Loan) ಮರುಪಾವತಿಗೆ ಕಷ್ಟ ಪಡುತ್ತಿರುವ ಜನರಿಗೆ ಅನುಕೂಲ ಆಗಲಿದೆ ಎಂದು ಹೇಳಬಹುದು. ಸಾಲ ಮರುಪಾವತಿ ಅವಧಿ ವಿಸ್ತರಣೆ ಮಾಡಿರುವ ಕಾರಣಕ್ಕೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಲು ಸಮಯಾವಕಾಶ ನೀಡಿದಂತಾಗುತ್ತಿದೆ‌. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.

advertisement

Leave A Reply

Your email address will not be published.