Karnataka Times
Trending Stories, Viral News, Gossips & Everything in Kannada

Govt. Scheme: ಮೋದಿ ಸರ್ಕಾರದಿಂದ ಗ್ಯಾರೆಂಟಿ ಯೋಜನೆ, ಸಿಗಲಿದೆ 15,000ರೂಪಾಯಿ ಸೌಲಭ್ಯ

advertisement

ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ನಿಲುವು ಇಂದು ರಾಷ್ಟ್ರೀಯ ಮಟ್ಟದಲ್ಲಿ ಜಾರಿಯಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಪಂಚ ಗ್ಯಾರೆಂಟಿಗಳ ಭರವಸೆ ನೀಡಿತ್ತು. ಬಳಿಕ ಅದನ್ನು ಹಂತ ಹಂತವಾಗಿ ನಿಭಾಯಿಸಿ ಇನ್ನೊಂದು ಗ್ಯಾರೆಂಟಿ ಯೋಜನೆ ಜಾರಿಯಾದ ಬಳಿಕ ಜನರ ನಂಬಿಕೆ ಮತ್ತಷ್ಟು ಬಲಗೊಳ್ಳಲಿದೆ‌. ಈಗ ಇದೇ ತಂತ್ರವನ್ನು ದೇಶಾದ್ಯಂತ ಸಹ ಬಳಸಲಾಗುತ್ತಿದೆ. ಅದೇ ರೀತಿ ಮುಂಬರುವ ಲೋಕಸಭೆ ಚುನಾವಣೆಗೂ ಮೊದಲು ಜನ ಬೆಂಬಲ ಪಡೆಯಲು ಎಲ್ಲ ಪಕ್ಷಗಳು ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಕಾಂಗ್ರೆಸ್ ಅನ್ನು ಯೋಜನೆ ಮೂಲಕ ಮಣಿಸಲು BJP ಕೂಡ ತಯಾರಿ ನಡೆಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನೂತನ ಒಂದು ಯೋಜನೆಗೆ ಚಾಲನೆ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಒಂದು ಯೋಜನೆ ಭಾರಿ ಮಟ್ಟದ ಸುದ್ದಿಯಲ್ಲಿದ್ದು ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ 15 ಸಾವಿರ ರೂಪಾಯಿ ಮೊತ್ತದ ಟೂಲ್ ಕಿಟ್ (Toll Kit) ಸಿಗಲಿದೆ. ಈ ಯೋಜನೆ ಹೆಸರು ಇತರ ಮಹತ್ವದ ಮಾಹಿತಿ ಬಗ್ಗೆ ತಿಳಿಯಲು ಈ ಲೇಖನವನ್ನು ಸಂಪೂರ್ಣ ಓದಿ.

ಯಾವುದು ಈ ಯೋಜನೆ?

ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana). ಇದರ ಮೂಲಕ ನೀವು ಉಪಕರಣಗಳಿರುವ 15 ಸಾವಿರ ರೂಪಾಯಿ ಮೌಲ್ಯದ ಟೂಲ್ ಕಿಟ್ ಪಡೆಯಬಹುದು‌. ಇದರಲ್ಲಿ 18 ರೀತಿಯ ಸಾಂಪ್ರದಾಯಿಕ ಮತ್ತು ಕರಕುಶಲ ಕರ್ಮಿಗಳು (Traditional and Handicraft Workers) ಯೋಜನೆಯ ಫಲಾನುಭವಿಗಳಾಗಬಹುದು. ಅದಕ್ಕಾಗಿ ಕೆಲ ಅಗತ್ಯ ದಾಖಲಾತಿ ಸಹ ಅಗತ್ಯವಾಗಿದೆ. ಟೂಲ್ ಕಿಟ್ (Toll Kit) ಜೊತೆಗೆ ಸಾಲ ಸೌಲಭ್ಯ ಸಹ ಸಿಗಲಿದೆ.

 

advertisement

 

ಈ ಕೆಲಸದವರಿಗಾಗಿ ಈ ಯೋಜನೆ:

ಇದರಲ್ಲಿ ಬಡಿಗೆ, ದೋಣಿ ತಯಾರಿಕಾ, ಬುಟ್ಟಿ, ಚಾಪೆ, ಕಸಪೊರಕೆ ತಯಾರಿಕಾ, ಅಕ್ಕಸಾಲಿಗ, ಬೊಂಬೆತಯಾರಿಕ, ನಾರು ನೆಯ್ಗೆಗಾರ, ಕುಂಬಾರ, ಚಮ್ಮಾರ, ಸುತ್ತಿಗೆ ಮತ್ತು ಉಪಕರಣ ತಯಾರಿಕಾ, ಶಿಲ್ಪಿ, ಒಡ್ಡರು, ಗಾರೆ ಕೆಲಸದವ, ಹೂಮಾಲೆ ತಯಾರಿಕಾ, ಕ್ಷೌರಿಕ, ಮಡಿವಾಳ, ದರ್ಜಿ, ಮೀನುಗಾರಿಕೆ ಬಲೆ ಮಾಡುವವರು ಎಲ್ಲರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು ಇವರನ್ನು ಅಭಿವೃದ್ಧಿ ಪಡಿಸುವುದೇ ಈ ಯೋಜನೆ ಮುಖ್ಯ ಗುರಿಯಾಗಿದೆ.

ಈ ದಾಖಲೆಗಳು ಅಗತ್ಯ:

ಈ ಯೋಜನೆಗೆ ಅರ್ಜಿಸಲ್ಲಿಸುವವರು ಆಧರ್ ಕಾರ್ಡ್ (Aadhaar Card), ಬ್ಯಾಂಕ್ ಪಾಸ್ ಬುಕ್ (Bank Pass Book), ರೇಶನ್ ಕಾರ್ಡ್ (Ration Card), ಮೊಬೈಲ್ ಸಂಖ್ಯೆ (Mobile Number) ಇವೆಲ್ಲವೂ ಬಹಳ ಮುಖ್ಯವಾಗಿರುತ್ತದೆ. ಈ ಎಲ್ಲ ದಾಖಲಾತಿಗಳ ಮೂಲಕ ನಿಮ್ಮ ಹತ್ತಿರದ ಸಿಎಸ್ ಇ ಸೆಂಟರ್, ಗ್ರಾಮ ಒನ್ (Gram One) ಅಥವಾ ಕರ್ನಾಟಕ ಒನ್ ಸೆಂಟರ್ ಗೆ ಹೋಗಬೇಕಾಗುವುದು. ಅಲ್ಲಿ ನೀವು ನಾಲ್ಕು ರೀತಿಯಾಗಿ ಅರ್ಜಿ ಸಲ್ಲಿಸಬಹುದು. ಅದರಲ್ಲಿಯೇ ನಿಮಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಕೂಡ ಸಿಗಲಿದೆ. ಈ ರೀತಿ ನಿಮಗೆ ನಿಮ್ಮ ಕೆಲಸ ಕಾರ್ಯಗಳಿಗೆ ಟೂಲ್ ಕಿಟ್ ಪಡೆಯಲು ಈ ಯೋಜನೆ ಸಾಕಷ್ಟು ಸಹಕಾರಿ ಆಗಲಿದೆ ಎಂದು ಹೇಳಬಹುದು‌.

advertisement

Leave A Reply

Your email address will not be published.