Karnataka Times
Trending Stories, Viral News, Gossips & Everything in Kannada

Electric Cars: ಒಂದೇ ಚಾರ್ಜ್ ನಲ್ಲಿ 465 km ಓಡಬಲ್ಲ 5 ಅಗ್ಗದ ಎಲೆಕ್ಟ್ರಿಕ್ ಕಾರುಗಳ ಲಿಸ್ಟ್ ಇಲ್ಲಿದೆ!

advertisement

ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ತಯಾರಿಕೆ ಹಾಗೂ ಬೇಡಿಕೆ ಎರಡೂ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ ಆದರೂ, ಎಲೆಕ್ಟ್ರಿಕ್ ಕಾರುಗಳು (Electric Cars) ಇತರ ಇಂಧನ ವಾಹನಗಳಿಗೆ ಹೋಲಿಸಿದರೆ ಹೆಚ್ಚು ದುಬಾರಿ ಆಗಿದೆ ಹಾಗಾಗಿ ಈ ಕಾರುಗಳನ್ನ ಖರೀದಿಸಲು ಸಾಮಾನ್ಯರಿಗೆ ಸಾಧ್ಯವಾಗುವುದಿಲ್ಲ.

ಆದರೆ ನಿಮಗೆ ಇನ್ನು ಮುಂದೆ ಈ ಚಿಂತೆ ಬೇಡ. ದೇಶದಲ್ಲಿ ಅಗ್ಗದ ಬೆಲೆಯಲ್ಲಿ ಸಿಗಬಲ್ಲ ಟಾಪ್ 5 ಎಲೆಕ್ಟ್ರಿಕ್ ಕಾರುಗಳ (Top 5 Electric Cars) ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ಎಂಜಿ ಮೋಟಾರ್ಸ್ (MG Motors) ನಿಂದ ಟಾಟಾ ಮೋಟಾರ್ಸ್ವರೆಗಿನ ಅಗ್ಗದ ಎಲೆಕ್ಟ್ರಿಕ್ ಕಾರಿನ ಬಗ್ಗೆ ಇಲ್ಲಿದೆ ಮಾಹಿತಿ. ಇದರಲ್ಲಿ ನೀವು ನಿಮ್ಮ ಆಯ್ಕೆಯ ಅನುಸಾರ ಕಾರ್ ಖರೀದಿ ಮಾಡಬಹುದು.

Tata Tiago EV:

 

 

ಟಾಟಾ ಈವರೆಗೆ ದೇಶದಲ್ಲಿ ಅತ್ಯುತ್ತಮ ಮೋಟಾರ್ ವಾಹನಗಳನ್ನು ತಯಾರಿಸಿ ಕೊಟ್ಟಿದ್ದು ಇದೀಗ ಟಾಟಾ ಟಿಯಾಗೋ ಇವಿ (Tata Tiago EV) ಬಿಡುಗಡೆ ಆಗಿದೆ. ಇದರಲ್ಲಿ ಎರಡು ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. 19.2 kWh ಬ್ಯಾಟರಿಯೊಂದಿಗೆ, 60.3 ಬಿ ಹೆಚ್ ಪಿ ಪವರ್, 10 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 250 ಕಿಲೋ ಮೀಟರ್ ರೇಂಜ್ ಹೊಂದಿದೆ.

ಎರಡನೇ ಬ್ಯಾಟರಿ ಪ್ಯಾಕ್, 24kwh ಬ್ಯಾಟರಿ ಹೊಂದಿದ್ದು, 74bhp ಪವರ್ ಮತ್ತು 114Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ . ಇನ್ನು ಈ ಕಾರಿನ ಬೆಲೆ ನೋಡುವುದಾದರೆ ಎಕ್ಸ್ ಶೋರೂಮ್ ಬೆಲೆ 8.49 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ ಹಾಗೂ ಉತ್ತಮ ಶ್ರೇಣಿಗೆ 12.4 ಲಕ್ಷ ರೂಪಾಯಿಗಳ ವರೆಗೂ ಪಾವತಿಸಬೇಕು.

Tata Tigor EV:

 

 

ಟಾಟಾ ಕಂಪನಿಯ ಇನ್ನೊಂದು ವೈಶಿಷ್ಟ್ಯತೆಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಕಾರು ಇದಾಗಿದೆ. ಇದರ ಆರಂಭಿಕ ಬೆಲೆ 12.49 ಲಕ್ಷ ರೂಪಾಯಿಗಳು (ಎಕ್ಸ್ ಶೋರೂಮ್ ಬೆಲೆ). ಈ ಕಾರಿನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಬಗ್ಗೆ ಮಾತನಾಡುವುದಾದರೆ, 74 ಬಿ ಎಚ್ ಪಿ ಪವರ್ ಹಾಗೂ 110 nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಂದು ಚಾರ್ಜ್ ಗೆ 315 ಕಿ.ಮೀ ವ್ಯಾಪ್ತಿ ನೀಡುವ ಸಾಮರ್ಥ್ಯ ಹೊಂದಿದೆ.

advertisement

Tata Nexon EV:

 

 

ಈ ಕಾರಿನಲ್ಲಿ ಎರಡು ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ, ಮೊದಲನೆಯದು 40.5kwh ಬ್ಯಾಟರಿಯೊಂದಿಗೆ ಬರುತ್ತದೆ. ಇದು 143bhp ಮತ್ತು 215nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಎರಡನೆಯದು 123bhp ಮತ್ತು 215nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 100kmpl ಮೈಲೇಜ್ ನೀಡಬಲ್ಲ Tata Nexon EV 465 km ವ್ಯಾಪ್ತಿ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರಿನ ಆರಂಭಿಕ ಎಕ್ಸ್ ಶೋರೂಮ್ ಬೆಲೆ 14.74 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಹಾಗೂ ಟಾಪ್ ಎಂಡ್ ಕಾರಿನ ಬೆಲೆ 19.94 ಲಕ್ಷ ರೂಪಾಯಿಗಳು.

MG Comet EV:

 

 

ಇಂದು ದೇಶದಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಕಾರುಗಳಲ್ಲಿ ಎಂಜಿ ಮೋಟರ್ಸ್ ನ ವೆಹಿಕಲ್ ಗಳು ಕೂಡ ಸೇರಿಕೊಂಡಿವೆ. 17.3kwh ಬ್ಯಾಟರಿಯನ್ನು ಹೊಂದಿದ್ದು, 42bhp ಮತ್ತು 110nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ವೇಗವಾಗಿ ಚಾರ್ಜ್ ಮಾಡಬಹುದಾದ ಬ್ಯಾಟರಿ ಇದಾಗಿದ್ದು, ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 230 ಕಿಲೋಮೀಟರ್ ವ್ಯಾಪ್ತಿ ಪಡೆದುಕೊಳ್ಳುತ್ತದೆ. ಈ ಕಾರಿನ ಎಕ್ಸ್ ಶೋರೂಮ್ ಬೆಲೆ 7.98 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ.

Citroen C3:

 

 

ದೇಶದ ಜನಪ್ರಿಯ ಕಾರುಗಳಲ್ಲಿ Citroen C3 ಕಾರು ಕೂಡ ಒಂದು. 3 ಕಿಲೋಮೀಟರ್ ವ್ಯಾಪ್ತಿ ನೀಡಬಲ್ಲ ಈ ಕಾರಿನಲ್ಲಿ, 76bhp ಪವರ್ ಮತ್ತು 143nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 29.2kwh ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಈ ಕಾರಿನ ಎಕ್ಸ್ ಶೋರೂಮ್ ಬೆಲೆ 11.61 ಲಕ್ಷ ರೂ. ಗಳಿಂದ ಆರಂಭವಾಗುತ್ತದೆ.

ಈಗ ಈ ಮೇಲೆ ತಿಳಿಸಲಾದ ಅಗ್ಗದ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಎಲೆಕ್ಟ್ರಿಕ್ ಕಾರುಗಳಲ್ಲಿ ನಿಮ್ಮಿಷ್ಟದ ಕಾರನ್ನು ಕಾಯ್ದು ಪರ್ಚೇಸ್ ಮಾಡಿ.

advertisement

Leave A Reply

Your email address will not be published.