Karnataka Times
Trending Stories, Viral News, Gossips & Everything in Kannada

RBI: ಈ ತಿಂಗಳಿಂದ ಪೇಟಿಎಂ ಬ್ಯಾಂಕಿಂಗ್ ಸೇವೆಗಳು ರದ್ದು; ಆರ್ ಬಿ ಐ ಕಟ್ಟುನಿಟ್ಟಿನ ಆದೇಶ!

advertisement

ಭಾರತೀಯ RBI ಫೆಬ್ರುವರಿ 29, 2024 ರಿಂದ ಜನರು ಹೆಚ್ಚಾಗಿ ಬಳಸುತ್ತಿರುವ Paytm ನಲ್ಲಿ ಬ್ಯಾಂಕಿಂಗ್ ಸೇವೆಯನ್ನು ಸ್ಥಗಿತಗೊಳಿಸಲಿದೆ ಇದಕ್ಕೆ ಕಾರಣ ಏನು ಗೊತ್ತಾ?

Pautm ಮೇಲೆ RBI ಕ್ರಮ ಕೈಗೊಂಡಿದ್ದಕ್ಕೆ ಕಾರಣ:

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (Paytm Payments Bank Limited) ಗೆ ಪ್ರಿಪೇಯ್ಡ್ ಸೇವೆ ಬ್ಯಾಲೆಟ್ ಫಾಸ್ಟ್ ಟ್ಯಾಗ್ ಮೊದಲಾದ ಪೇಮೆಂಟ್ ಗಳನ್ನು ಸ್ವೀಕರಿಸಲು ಅವಕಾಶ ನೀಡಲಾಗಿತ್ತು. ಆದ್ರೆ ಫೆಬ್ರವರಿ 29 2024 ರಿಂದ RBI ಎಲ್ಲಾ ಅನುಮತಿಯನ್ನು ಸ್ಥಗಿತಗೊಳಿಸಲಿದೆ. ಸಮಗ್ರ ಸಿಸ್ಟಮ್ ಆಡಿಟ್ ವರದಿಯ ಅನುಸಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ವಿರುದ್ಧ RBI ಈ ಕ್ರಮ ಕೈಗೊಂಡಿದೆ.

 

 

advertisement

ಬುಧವಾರ RBI ಈ ಬಗ್ಗೆ ಮಾಹಿತಿ ನೀಡಿದ್ದು, ಪೇಮೆಂಟ್ ಬ್ಯಾಂಕ್ ನಲ್ಲಿ ನಿಯಮಗಳ ಅನುಸರಣೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗಿರುವುದಕ್ಕೆ ಹೆಚ್ಚಿನ ಪರಿಶೀಲನೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ.

ಇನ್ನು ಮುಂದೆ ಪ್ರಿಪೇಯ್ಡ್ ಮೀಡಿಯಂ, ವಾಲೆಟ್, ಫಾಸ್ಟ್ ಟ್ಯಾಗ್, NCMC ಮೊದಲಾದ ಸೇವೆಗಳಿಗಾಗಿ ಗ್ರಾಹಕರ ಖಾತೆಯಲ್ಲಿ ಯಾವುದೇ ರೀತಿಯ ಠೇವಣಿ ಕ್ರೆಡಿಟ್ ವ್ಯವಹಾರ ಅಥವಾ ಟಾಪ್ ಅಪ್ ಮಾಡಲು ಅವಕಾಶ ಇಲ್ಲ ಎಂದು ಸೆಂಟ್ರಲ್ ಬ್ಯಾಂಕ್ ತಿಳಿಸಿದೆ. ಫೆಬ್ರವರಿ 29, 2024 ರಿಂದ ಯಾವುದೇ ರೀತಿಯ ಬಡ್ಡಿ, Cash Bank ಅಥವಾ ಮರುಪಾವತಿ ಕ್ರೆಡಿಟ್ ಪೇಟಿಎಂ ನಿಂದ ಸಿಗುವುದಿಲ್ಲ ಎಂದು RBI ಕಟ್ಟುನಿಟ್ಟಾಗಿ ತಿಳಿಸಿದೆ.

ಪೇಟಿಎಂನಲ್ಲಿ ಯಾವ ಸೇವೆ ಮುಂದುವರೆಯಲಿದೆ?

2022 ಮಾರ್ಚ್ ತಿಂಗಳಿನಿಂದಲೇ RBI ಪಿಪಿಬಿಎಲ್ ನಲ್ಲಿ ಹೊಸ ಗ್ರಾಹಕರ ಸೇರ್ಪಡೆಯನ್ನು ನಿಲ್ಲಿಸಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಗ್ರಾಹಕರು ತಮ್ಮ ಉಳಿತಾಯ ಬ್ಯಾಂಕ್ ಖಾತೆ ಅಥವಾ ಚಾಲ್ತಿ ಖಾತೆ ಫ್ರೀ ಪೇಯ್ಡ್ ಮೀಡಿಯಂ, FasTag, ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಸೇರಿದಂತೆ ಮೊದಲಾದ ಖಾತೆಗಳಿಂದ ಬಾಕಿ ಇರುವ ಹಣವನ್ನು ಹಿಂಪಡೆಯಲು ಅಥವಾ ಬಳಕೆ ಮಾಡಲು ಯಾವುದೇ ನಿರ್ಬಂಧ ಇಲ್ಲ ಎಂದು ಆರ್‌ಬಿಐ ತಿಳಿಸಿದೆ. ಒಟ್ಟಿನಲ್ಲಿ ಇನ್ನು ಮುಂದೆ paytm ಅಪ್ಲಿಕೇಶನ್ ಮೂಲಕ ನೀವು ಯಾವುದೇ ಹಣಕಾಸಿನ ವ್ಯವಹಾರವನ್ನ ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಅಥವಾ ಎಲ್ಲಾ ವ್ಯವಹಾರಗಳ ಮೇಲೆ ವಿಶೇಷ ನಿಯಮ ಪಾಲನೆ ಮಾಡಬೇಕು.

advertisement

Leave A Reply

Your email address will not be published.