Karnataka Times
Trending Stories, Viral News, Gossips & Everything in Kannada

Green Dot: ನಿಮ್ಮ ಫೋನ್ ನಲ್ಲಿ ಈ ಹಸಿರು ಲೈಟ್ ಕಾಣಿಸಿದರೆ ಅಪಾಯದ ಸಂಕೇತವಾಗಿರಬಹುದು, ತಕ್ಷಣ ಈ ಕೆಲಸ ಮಾಡಿ!

advertisement

ಇಂದು ಸ್ಮಾರ್ಟ್ ಫೋನ್ (Smartphone) ಇಲ್ಲದೆ ಯಾರು ಕೂಡ ಜೀವನ ನಡೆಸಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ನಿತ್ಯದ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ ಸ್ಮಾರ್ಟ್ ಫೋನ್. ಸ್ಮಾರ್ಟ್ ಫೋನ್ ನಲ್ಲಿ ನಮ್ಮ ಎಲ್ಲಾ ಗುಟ್ಟು, ರಹಸ್ಯ ಅಡಗಿರುತ್ತೆ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ವಿಚಾರಗಳು ಇರಬಹುದು ಅಥವಾ ಯಾವುದೇ Private, Photo, Video ಗಳಿರಬಹುದು, ಎಲ್ಲವನ್ನು ಸ್ಮಾರ್ಟ್ ಫೋನ್ ನಲ್ಲಿ ಹಿಡಿದಿಟ್ಟುಕೊಳ್ಳಬಹುದು.

ಆದರೆ ಇದೇ ನಮ್ಮ ಸೀಕ್ರೆಟ್ ಹ್ಯಾಕರ್ ಗಳಿಗೆ ಬಂಡವಾಡ ಆಗಿರುತ್ತೆ. ಹೀಗಾಗಿ ಸ್ಮಾರ್ಟ್ ಫೋನ್ ನಲ್ಲಿ ಇರುವ ಎಲ್ಲಾ ದಾಖಲೆಗಳು ಸೋರಿಕೆಯಾಗಿ ಬ್ಯಾಂಕ್ ಖಾತೆ ಖಾಲಿ ಆಗಿರುವುದು ಅಥವಾ ನಿಮ್ಮನ್ನು ಹೆದರಿಸಿ ಬೆದರಿಸಿ ಬ್ಲಾಕ್ ಮೇಲ್ (Blackmail) ಮಾಡುವುದು ಹೀಗೆ ಸಾಕಷ್ಟು ವಂಚನೆಯ ಪ್ರಕರಣಗಳು ಇಂದು ಬೆಳಕಿಗೆ ಬಂದಿದೆ.

How to Know if a Smartphone is Hacked?

advertisement

ಎಷ್ಟೋ ಬಾರಿ ನಾವು ಗುಪ್ತವಾಗಿ ಯಾರ ಬಳಿಯಾದರೂ ಮಾತನಾಡುತ್ತಿರುವಾಗ ನಮ್ಮ ಫೋನ್ ಟ್ಯಾಪ್ ಮಾಡುವ ಸಾಧ್ಯತೆ ಇರುತ್ತದೆ. ಇದು ಕೇವಲ ಹ್ಯಾಕರ್ (Hacker) ಗಳಿಂದ ಮಾತ್ರ ಸಾಧ್ಯ. ಎಷ್ಟೋ ಸಂದರ್ಭದಲ್ಲಿ ಆಂಟಿವೈರಸ್ ಇದ್ದಾಗಲೂ ಕೂಡ ಸ್ಮಾರ್ಟ್ ಫೋನ್ (Smartphone) ಗಳು ಹ್ಯಾಕ್ ಆಗುತ್ತವೆ. ಈ ರೀತಿ ನಿಮ್ಮ ಫೋನನ್ನು ಯಾರಾದ್ರೂ ಕದ್ದಾಲಿಕೆ ಮಾಡಿದರೆ ಅಥವಾ ಸ್ಮಾರ್ಟ್ ಫೋನ್ ಹ್ಯಾಕ್ ಆಗಿದ್ರೆ ಅದನ್ನ ತಿಳಿದುಕೊಳ್ಳುವುದು ಹೇಗೆ ಗೊತ್ತಾ? ಇದಕ್ಕೂ ಇದೆ ಒಂದು ಟ್ರಿಕ್ಸ್!

ಫೋನ್ ಪರದೆಯ ಮೇಲೆ ಹಸಿರುಚುಕ್ಕಿ ಕಾಣಿಸುತ್ತದೆ ಗಮನಿಸಿ:

 

 

ಸ್ಮಾರ್ಟ್ ಫೋನ್ನಲ್ಲಿ ಸಾಕಷ್ಟು ಫೀಚರ್ ಗಳು ಇರುತ್ತವೆ. ಬಳಕೆದಾರರು ಅದನ್ನೇ ಬಳಸಿಕೊಂಡು ಹ್ಯಾಕಿಂಗ್ ಆಗಿರುವ ಬಗ್ಗೆ ಮಾಹಿತಿ ಪಡೆಯಬಹುದು. ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ಮೈಕ್ ಭಾಗದಲ್ಲಿ ಹಸಿರು ಡಾಟ್ ಆಯ್ಕೆ ಇರುತ್ತದೆ. ನೀವು ಫೋನ್ ಬಳಸದೆ ಇದ್ದರೂ ಅಥವಾ ಮೈಕ್ ಗೆ ಪ್ರವೇಶ ಮಾಡದೆ ಇದ್ದರೂ ಕೂಡ ಬಲಭಾಗದಲ್ಲಿ Green Dot ಅಥವಾ ಸಣ್ಣ ಮೈಕ್ ಐಕಾನ್ ಕಾಣಿಸಿಕೊಂಡರೆ ಯಾರು ನಿಮ್ಮ ಮಾತನ್ನು ಕದ್ದು ಕೇಳುತ್ತಿದ್ದಾರೆ ಎಂದು ಅರ್ಥ. ನೀವು ನಿಮ್ಮ ರಹಸ್ಯ ಕರೆಗಳು ಅಥವಾ ಸಂಭಾಷಣೆಗಳನ್ನು ಬೇರೆಯವರು ಕೇಳುತ್ತಿದ್ದಾರೆ ಎನ್ನುವುದನ್ನು ಈ ರೀತಿಯಾಗಿ ಪತ್ತೆ ಹಚ್ಚಬಹುದು. ಒಂದು ವೇಳೆ ಈ ರೀತಿ ಗ್ರೀನ್ ಸಿಗ್ನಲ್ ನಿಮಗೆ ಕಾಣಿಸಿದರೆ ತಕ್ಷಣ ನಿಮ್ಮ ಫೋನ್ ಸಂಭಾಷಣೆಯನ್ನು ನಿಲ್ಲಿಸಿ ಹಾಗೂ ಆ ಫೋನ್ ನಿಂದ ಸೆಕ್ಯೂರ್ಡ್ ಆಗುವವರೆಗೆ ಕರೆ ಮಾಡಬೇಡಿ.

advertisement

Leave A Reply

Your email address will not be published.