Karnataka Times
Trending Stories, Viral News, Gossips & Everything in Kannada

Sadhguru: ಸದ್ಗುರು ಜಗ್ಗಿ ವಾಸುದೇವ್ ಗೆ ತಲೆಯಲ್ಲಿ ರಕ್ತಸ್ರಾವ; ತುರ್ತು ಬ್ರೇನ್ ಸರ್ಜರಿಗೆ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ದಾಖಲು

advertisement

ಅಧ್ಯಾತ್ಮ ಗುರು, ಈಶ ಫೌಂಡೇಷನ್‌ (Isha Foundation) ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ದೆಹಲಿಯಲ್ಲಿ ಮೆದುಳಿನ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ದೆಹಲಿಯ ಅಪೋಲೊ ಆಸ್ಪತ್ರೆಯಲ್ಲಿ ಜಗ್ಗಿ ವಾಸುದೇವ್‌ ಅವರಿಗೆ ಮೆದುಳಿನ ತುರ್ತು ಸರ್ಜರಿ ಮಾಡಲಾಗಿದೆ. ಈಗ ಜಗ್ಗಿ ವಾಸುದೇವ್‌ ಅವರ ಆರೋಗ್ಯ ಸ್ಥಿತಿಯು ಸುಧಾರಣೆ ಕಂಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹಾಗಾಗಿ, ಅನುಯಾಯಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಈಶ ಫೌಂಡೇಷನ್‌ ತಿಳಿಸಿದೆ.

ಸದ್ಗುರುಗೆ (Sadhguru) ಕಾಡಿದ ಆರೋಗ್ಯ ಸಮಸ್ಯೆ:

ಕಳೆದ ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಜಗ್ಗಿ ವಾಸುದೇವ್ ಅವರು, ತೀವ್ರ ನೋವಿನ ಹೊರತಾಗಿಯೂ, ಅವರು ತಮ್ಮ ಸಾಮಾನ್ಯ ದೈನಂದಿನ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರೆಸಿದ್ದರು. ಪೇನ್‌ ಕಿಲ್ಲರ್‌ ಮಾತ್ರೆಗಳನ್ನು ತೆಗೆದುಕೊಂಡು ಸದ್ಗುರು ಜಗ್ಗಿ ವಾಸುದೇವ್‌ ಅವರು ಇಂಡಿಯಾ ಟುಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

 

advertisement

ಮಾರ್ಚ್ 17 ರ ಹೊತ್ತಿಗೆ ತಲೆನೋವು ತೀವ್ರವಾದ ನಂತರ ಅವರು ಆಸ್ಪತ್ರೆಯ ಹಿರಿಯ ಸಲಹೆಗಾರ ನರರೋಗ ತಜ್ಞ ಡಾ ವಿನಿತ್ ಸೂರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಸೂರಿ ಅವರು ತಕ್ಷಣವೇ ಎಂಆರ್ ಐ (MRI) ಮಾಡಿಸುವಂತೆ ಸಲಹೆ ನೀಡಿದ್ದಾರೆ. ಎಂಆರ್ ಐನಲ್ಲಿ ತಲೆಯಲ್ಲಿ ರಕ್ತಸ್ರಾವ ಆಗುತ್ತಿರುವುದು ಕಂಡುಬಂದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಮಾಜಿಕ ಕಾರ್ಯಗಳಲ್ಲಿ ಸದ್ಗುರು:

66 ವರ್ಷದ ಆಧ್ಯಾತ್ಮಿಕ ಗುರು, ಇಶಾ ಫೌಂಡೇಶನ್‌ನ ಸಂಸ್ಥಾಪ ಸದ್ಗುರು ಜಗ್ಗಿ ವಾಸುದೇವ್ ಅವರು ಪರಿಸರ ಸಂರಕ್ಷಣೆಗಾಗಿ ‘ಮಣ್ಣು ಉಳಿಸಿ’ ಮತ್ತು ‘ನದಿಗಳನ್ನು ಉಳಿಸಿ’ ಸೇರಿದಂತೆ ಹಲವು ಅಭಿಯಾನಗಳನ್ನು ಕೈಗೊಂಡಿದ್ದರು.
ಮಾರ್ಚ್‌ 8ರ ಶಿವರಾತ್ರಿ ಕಾರ್ಯಕ್ರಮದಲ್ಲೂ ಜಗ್ಗಿ ವಾಸುದೇವ್‌ ಪಾಲ್ಗೊಂಡಿದ್ದರು. ಲಕ್ಷಾಂತರ ಭಕ್ತರನ್ನು ಒಂದುಗೂಡಿಸಿದ್ದರು.

advertisement

Leave A Reply

Your email address will not be published.