Karnataka Times
Trending Stories, Viral News, Gossips & Everything in Kannada

RBI Deputy Governor: ದೇಶದ ಎಲ್ಲಾ ಬ್ಯಾಂಕುಗಳಿಗೆ ಹೊಸ ಸೂಚನೆ ಕೊಟ್ಟ RBI ಡೆಪ್ಯುಟಿ ಗವರ್ನರ್

advertisement

ನಿಮಗೆ ಒಟಿಪಿ ಬಂದಿದೆ, ನಿಮ್ಮ ಗಿಫ್ಟ್ ಪಡೆಯಿರಿ ಎಂದು ಹೇಳಿ ಕಳ್ಳ ಮಾರ್ಗದ ಮೂಲಕ ಜನರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿ ಮೋಸ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಗಿಫ್ಟ್, ಪಾರ್ಟ್ ಟೈಂ ಜಾಬ್, ಟಾರ್ಗೆಟ್ ಎಂಬ ಮೂಲಕ ಜನರನ್ನು ಸಾಕಷ್ಟು ಮೋಸಗೊಳಿಸಲಾಗುತ್ತಿದೆ. ಹಾಗಾಗಿ ಎಲ್ಲ ಬ್ಯಾಂಕುಗಳಿಗೆ ಆನ್ಲೈನ್ ವಂಚನೆ ತಡೆ ಹಿಡಿಯುವ ನೆಲೆಯಲ್ಲಿ ಮಾರ್ಗ ಸೂಚಿ ನೀಡುವ ಜೊತೆಗೆ ಭವಿಷ್ಯದಲ್ಲಿ ಬರಬಹುದಾದ ಸೈಬರ್ ಕ್ರೈಮ್ ಬಗ್ಗೆ RBI ಮನದಟ್ಟು ಮಾಡಲು ಸತತ ಪರಿಶ್ರಮ ಪಡುತ್ತಿದೆ.

ತಪಾಸಣೆ ನಡೆಯುತ್ತಿದೆ:

ಆನ್ಲೈನ್ ವಂಚನೆ ಹಾಗೂ ಬ್ಯಾಂಕಿನ ಭದ್ರತಾ ವೈಫಲ್ಯ ಹೆಚ್ಚಾಗುತ್ತಿರುವ ಕಾರಣ RBI ಬ್ಯಾಂಕಿನ ನ್ಯೂನ್ಯತೆ ತಪಾಸಣೆ ನಡೆಸುತ್ತಿದೆ. ಇತ್ತೀಚೆಗಂತೂ ಕೃತಕ ಬುದ್ಧಿ ಮತ್ತೆ ಬಳಕೆ ಮಾಡಿ ವ್ಯವಸ್ಥೆ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ತಿಳಿದು ಬಂದಿದೆ. ಹಾಗಾಗಿ ಈ ಎಲ್ಲ ವ್ಯವಸ್ಥೆಯ ಅಪಾಯ ಪ್ರಮಾಣ ಕಡಿಮೆ ಮಾಡುವ ಜೊತೆಗೆ ಬ್ಯಾಂಕಿನ ಎನ್ ಕ್ರಿಪ್ಟ್ ವ್ಯವಸ್ಥೆ ಅಪಾಯಕಾರಿ ಪರಿಸ್ಥಿತಿ ತಗ್ಗಿಸಲು ಯೋಚನೆ ಮಾಡಲಾಗಿದೆ. ಎನ್ ಕ್ರಿಪ್ಟ್ ವ್ಯವಸ್ಥೆ ಮರು ನಿರ್ಮಾಣ ಮಾಡಲು ಸೂಚನೆ ನೀಡಲಾಗುತ್ತಿದೆ.

ತಂತ್ರಜ್ಞಾನದ ಬಳಕೆ:

ಕೇಂದ್ರ ಬ್ಯಾಂಕಿನ ಅಧೀನದಲ್ಲಿ ಅನೇಕ ಬ್ಯಾಂಕ್ ನ ಮೇಲೆ ಸೈಬರ್ ಕ್ರೈಂ ಆಗುವ ಪ್ರಮಾಣ ಅಧಿಕ ಆಗುತ್ತಲೇ ಇದೆ. ಹಾಗಾಗಿ ಇದನ್ನು ತಡೆ ಹಿಡಿಯುವ ಸಲುವಾಗಿ RBI ನಿಂದ ನೂತನ CSITE ಎಂಬ ತಂತ್ರಜ್ಞಾನ ಅಭಿವೃದ್ಧಿ ಗೊಳಿಸಲಾಗುತ್ತಿದೆ. Cyber Security and Information Technology Examination ಇದರ ಮೂಲಕ ಬ್ಯಾಂಕಿನ ಭದ್ರತಾ ವಿಚಾರ ಬಲಪಡಿಸಲಾಗಿದೆ. ಇದರ ಮೂಲಕ ಬ್ಯಾಂಕಿನ ಲೋಪ ದೋಷ ಕಂಡು ಹಿಡಿದು ಸುರಕ್ಷತಾ ಕ್ರಮ ಪಾಲಿಸುವತ್ತ ಕೂಡ ತುಂಬಾ ಚಿಂತನೆ ನಡೆಸಲಾಗುತ್ತದೆ.

advertisement

RBI Deputy Governor ಅವರಿಂದಲೂ ಸಲಹೆ:

 

Image Source: Business Standard

 

ಬ್ಯಾಂಕಿನಲ್ಲಿ ಉಂಟಾಗುವ ಸೈಬರ್ ಕ್ರೈಮ್ (Cyber Crime) ದಾಳಿ ತಗ್ಗಿಸುವ ಸರಕಾರದ ಆಲೋಚನೆ ಬಗ್ಗೆ ಸ್ವತಃ RBI Deputy Governor ಅವರು ಇತ್ತೀಚೆಗೆ ಮುಂಬೈನಲ್ಲಿ ನಡೆದ ಬ್ಯಾಂಕಿನ ತಂತ್ರಜ್ಞಾನ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. RBI Deputy Governor ಆದ ಟಿ, ರವಿಶಂಕರ್ (T. Rabi Sankar) ಅವರು ಮಾತನಾಡಿ, RBI ಅಧೀನದ ಪ್ರತೀ ಬ್ಯಾಂಕಿಗೂ ಗ್ರಾಹಕರ ಹಿತದೃಷ್ಟಿಯೇ ಮೂಲ ಉದ್ದೇಶ ಆಗಿದೆ. ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಸರಿ ಹೊಂದುವಂತಹ ಸೇವೆ ನೀಡಬೇಕು ಎಂದು ಹೇಳಿದರು.

ಸೈಬರ್ ಅಪಾಯ ತಡೆಯುವ ಗುರಿ:

ಬಳಿಕ ಮಾತನಾಡಿದ ರವಿಶಂಕರ್ (T. Rabi Sankar) ಅವರು, ಕೃತಕ ಬುದ್ಧಿಮತ್ತೆ ಅಪಾಯ ತಗ್ಗಿಸಲು ಎನ್ ಕ್ರಿಪ್ಟ್ ಮಾಡಿದ್ದ ವ್ಯವಸ್ಥೆ ಮರು ನಿರ್ಮಾಣ ಮಾಡಬೇಕು. ಪೇಟಿಎಂ ಮೇಲೆ ಈಗಾಗಲೇ RBI ಅಧಿಕ ನಿಯಮ ವಿಧಿಸಿದೆ ಮುಂದಿನ ದಿನದಲ್ಲಿ ಫೋನ್ ಪೇ (Phone Pe), ಗೂಗಲ್ ಪೇ (Google Pay) ನಲ್ಲೂ ಇದೆ ವ್ಯವಸ್ಥೆ ಮುಂದುವರಿಯಲಿದ್ದು ಆನ್ಲೈನ್ ಬ್ಯಾಂಕಿಂಗ್ ವಹಿವಾಟಿನಲ್ಲಿ ನ್ಯೂನ್ಯತೆ ತೊಡೆದುಹಾಕಿ ಉತ್ತಮ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಬೇಕು. ಡೇಟಾ ಸೋರಿಕೆ ತಡೆಗಟ್ಟುವ ಮೂಲಕ ಸೈಬರ್ ಸುರಕ್ಷತೆಗೆ ಅಧಿಕ ಕ್ರಮ ವಹಿಸುವತ್ತ ಕೂಡ ಚಿಂತನೆ ನಡೆಸಲಾಗಿದೆ. ಮುಂದಿನ ದಿನದಲ್ಲಿ ಬ್ಯಾಂಕಿನ ಕಾರ್ಯ ವೈಖರಿಗಳು ಹೊಸ ಸೈಬರ್ ಭದ್ರತಾ ಅಪಾಯಗಳಿಗೆ ಈಗಲೇ ಸಿದ್ಧವಾಗಬೇಕು ಎಂದು ಅವರು ಹೇಳಿದರು.

advertisement

Leave A Reply

Your email address will not be published.