Karnataka Times
Trending Stories, Viral News, Gossips & Everything in Kannada

New Ration Card: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ, ಇಂತವರಿಗೆ ಮಾತ್ರ ಅವಕಾಶ

advertisement

ಇಂದು ಸರಕಾರದಿಂದ ಯಾವುದೇ ಸೌಲಭ್ಯ ದೊರಕಬೇಕಾದ್ರೂ ಅದಕ್ಕೆ ಕೆಲವೊಂದು ಮುಖ್ಯ ದಾಖಲೆಗಳು ಕೂಡ ನಮ್ಮಲ್ಲಿರಬೇಕು. ಅಂತಹ ದಾಖಲೆಗಳಲ್ಲಿ ಪಡಿತರ ಚೀಟಿಯಾದ ರೇಷನ್ ಕಾರ್ಡ್ (Ration Card) ಕೂಡ ಒಂದಾಗಿದ್ದು, ok ಇಂದು ಈ ಕಾರ್ಡ್ ಗೆ ಬಹು ಬೇಡಿಕೆ ಇದೆ.‌ ಅದರಲ್ಲೂ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಆರಂಭವಾದ ಬಳಿಕ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಹಲವಷ್ಟು ಜನರು ಕಾಯುತ್ತಿದ್ದಾರೆ. ಸದ್ಯ ಪಡಿತರ ಚೀಟಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಹೊರಬೀಳುತ್ತಿದ್ದು ಆಹಾರ ಇಲಾಖೆ ಯ ಸಚಿವರು ಈ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ.

ಹಳೆ ಅರ್ಜಿಗಳ ಪರಿಶೀಲನೆ:

ಈಗಾಗಲೇ ವಿಧಾನಸಭೆ ಚುನಾವಣೆ ಮೊದಲು ಹೆಚ್ಚಿನ ಜನರು ಹೊಸ ರೇಷನ್ ಕಾರ್ಡ್ (Ration Card) ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಹೀಗಾಗಿ ಪಡಿತರ ಚೀಟಿಗಾಗಿ ಬಂದಿರುವ 2,95,986 ಅರ್ಜಿಗಳನ್ನು ಮಾರ್ಚ್ 31 ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸಚಿವರು ಸೂಚನೆ ನೀಡಿದ್ದಾರೆ. ಈ ಮೊದಲು ಅರ್ಜಿ ಸಲ್ಲಿಕೆ ಮಾಡಿದ್ದ ಅರ್ಜಿ ಗಳನ್ನು ಮಾರ್ಚ್ 31 ರೊಳಗೆ‌ ಎಲ್ಲ ಅರ್ಜಿಯನ್ನು ಪರಿಶೀಲಿಸಿ ವಿತರಣೆ ಮಾಡಲಾಗುವುದು ಎಂದು ಆಹಾರ ಇಲಾಖೆಯು ಮಾಹಿತಿ ನೀಡಿದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ:

 

Image Source: News Next Live

 

ಇನ್ನು ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗಬೇಕೆಂದು ಹೆಚ್ಚಿನ ಜನರು ಹೊಸ ರೇಷನ್ ಕಾರ್ಡ್ (Ration Card) ಗೂ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಕೆಲವೊಂದು‌ ತುರ್ತು ಅಗತ್ಯಗಳನ್ನು ಪೂರೈಸಲು ಸರ್ಕಾರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದೆ. ಏಪ್ರಿಲ್ 1 ರಿಂದ ಹೊಸ ಪಡಿತರ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಬಹುದು ಎನ್ನಲಾಗಿದೆ.

advertisement

ಒಂದು ದೇಶ ಒಂದು ಪಡಿತರ ಚೀಟಿ:

 

Image Source: DNA India

 

ಸರಕಾರವು ಒಂದು ದೇಶ ಪಡಿತರ ಚೀಟಿ (Ration Card) ಎನ್ನುವ ದ್ಯೇಯ ವಾಕ್ಯದ ಅಡಿ ಪಡಿತರ ಚೀಟಿಯನ್ನು ವಿತರಣೆ ಮಾಡಲು ಮುಂದಾಗುತ್ತಿದೆ. ಪಡಿತರ ಚೀಟಿಯನ್ನು ಪಡೆಯಲು ಸಾಕಷ್ಟು ಜನರು ಸರ್ಕಾರಕ್ಕೆ ಮೋಸ ಮಾಡುತ್ತಿದ್ದು ಅನರ್ಹರು ಕೂಡ ಈ ಕಾರ್ಡ್ ನ ಸೌಲಭ್ಯ ವನ್ನು ಸದುಪಯೋಗ ಮಾಡುತ್ತಿದ್ದಾರೆ. ಹಾಗಾಗಿ ಈ ನಿಯಮ‌ವನ್ನು ಜಾರಿಗೆ ತರಲಿದೆ.

ಈ ಷರತ್ತು ಇದೆ:

ರೇಷನ್ ಕಾರ್ಡ್ (Ration Card) ಪಡೆಯಲು ನೀಡಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿ ಅರ್ಹರಿಗೆ ಮಾತ್ರ ಆದ್ಯತಾ ಪಡಿತರ ಚೀಟಿ ನೀಡಲಾಗುತ್ತದೆ, ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿದ್ದರೆ‌ ಮತ್ತು ರಾಜ್ಯದಲ್ಲಿ ಈಗಾಗಲೇ ಪಡಿತರ ಚೀಟಿ ಹೊಂದಿರದ ಕುಟುಂಬಗಳು ಅರ್ಹರಾಗಿರುತ್ತಾರೆ, ಹೊಸ ಪಡಿತರ ಚೀಟಿಯು ಮನೆಯ ಆದಾಯ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿಗಳನ್ನು ಆಧರಿಸಿಕೊಂಡು‌ ಪಡಿತರ ಚೀಟಿ‌ವಿತರಣೆ ಮಾಡಲಾಗುತ್ತದೆ.

ಈ ದಾಖಲೆ ಬೇಕು

  • Aadhaar Card
  • Address Proof
  • Photo
  • Caste Certificate
  • Income Certificate etc

advertisement

Leave A Reply

Your email address will not be published.