Karnataka Times
Trending Stories, Viral News, Gossips & Everything in Kannada

HDFC Bank: HDFC ಬ್ಯಾಂಕ್ ನಲ್ಲಿ ಯಾವುದೇ ಸಾಲ ಇದ್ದವರಿಗೆ ಹೊಸ ಸೂಚನೆ! ಬ್ಯಾಂಕ್ ನಿಂದ ಈ ನಿರ್ಧಾರ

advertisement

ಭಾರತದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC Bank ಇದೀಗ ಹತ್ತರಿಂದ ಹದಿನೈದು ಬೇಸಿಸ್ ಪಾಯಿಂಟಗಳಿಂದ ಅಂದರೆ 9.5% ನಿಂದ 9.8% ವರೆಗೆ ಬಡ್ಡಿದರವನ್ನ ಹೆಚ್ಚಿಸಿದ್ದು, ಇದರಿಂದ ರೆಪೋ ಲಿಂಕ್ಡ್ ಹೋಂ ಲೋನ್ ತೆಗೆದುಕೊಳ್ಳುವವರಿಗೆ ಬಡ್ಡಿದರ ಮೊದಲಿಗಿಂತ ಹೆಚ್ಚು ಪಾವತಿ ಮಾಡಬೇಕಾಗುತ್ತದೆ. ಈ ಬಗ್ಗೆ ಹೆಚ್ ಡಿ ಎಫ್ ಸಿ ಬ್ಯಾಂಕ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಎಚ್ ಡಿ ಎಫ್ ಸಿ ಮತ್ತು HDFC Bank ವಿಲೀನಗೊಂಡ ನಂತರ ಬಡ್ಡಿ ದರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆ ಜುಲೈ 1, 2023 ರಂದು ಹೆಚ್ ಡಿ ಎಫ್ ಸಿ ವಿಲೀನದ ನಂತರ ಅನ್ವಯವಾಗಿದೆ.

 

Image Source: The Economic Times

 

ಗ್ರಾಹಕರ ಖಾತೆಗೆ ಅನ್ವಯಿಸುವ ಬಡ್ಡಿ ದರವನ್ನು RPLR (Retail Prime Landing Rate) ಬದಲಿಗೆ EBLR (External Benchmark Landing Rate) ನೊಂದಿಗೆ ಲಿಂಕ್ ಮಾಡಲಾಗುತ್ತದೆ.

RBI Linked Lending Rates:

advertisement

RBI ರಿಪೋ ದರಕ್ಕೆ ರೆಪೋ ಲಿಂಕ್ಡ್ ಲೈನ್ಡಿಂಗ್ ದರವನ್ನ ಮರ್ಜ್ ಮಾಡಲಾಗಿದೆ. ಹಣದುಬ್ಬರದ ಪರಿಣಾಮದ ಕಾರಣದಿಂದಾಗಿ ಏಪ್ರಿಲ್ 2023ರ ನಂತರ 6.50 ಪರ್ಸೆಂಟ್ ಇದ್ದ ರೆಪೋ ದರದಲ್ಲು ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಕೇಂದ್ರ ವ್ಯಕ್ತಿಯ ನೀತಿ ಸಮಿತಿ 2022 ಮೇ ತಿಂಗಳಿನಲ್ಲಿ ರೆಪೋ ದರವನ್ನು 250 ಬೇಸಿಸ್ ಪಾಯಿಂಟ್ ಗಳಿಗೆ ಹೆಚ್ಚಿಸಿತ್ತು.

ಇದೀಗ ಬ್ಯಾಂಕುಗಳು ತಿಳಿಸಿರುವಂತೆ ಹೊಸ ಇಂಟ್ರೆಸ್ಟ್ ರೇಟ್ ಹೊಸ ಕಸ್ಟಮರ್ಗಳಿಗೆ ಮಾತ್ರ ಅನ್ವಯವಾಗುತ್ತದೆ. ಬೇಸಿಸ್ ಪಾಯಿಂಟ್ ನೂರನೆಯ ಒಂದು ಭಾಗ ಲೆಕ್ಕಾಚಾರದ ಆಧಾರದ ಮೇಲೆ ಬಡ್ಡಿ ಪರ್ಸೆಂಟೇಜ್ ನಿಗದಿಪಡಿಸಲಾಗುತ್ತದೆ. ಪದ್ಯದ ಪ್ರಕಾರ ಸ್ಪ್ರೆಡ್ ಬದಲಾವಣೆಯ ಆಧಾರದ ಮೇಲೆ ಹೆಚ್ಚಳ ಆಗಬಹುದು. ಗ್ರಾಹಕರ ಕ್ರೆಡಿಟ್ ಸ್ಕೋರ್ (Credit Score), ಇನ್ಕಮ್ ಸೋರ್ಸ್, ಮತ್ತು ಸಾಲದ ಮೊತ್ತದ ಆಧಾರದ ಮೇಲೆ ಸ್ಪ್ರೆಡ್ ರೇಟ್ ನಿಗದಿಪಡಿಸಲಾಗುತ್ತದೆ.

ಇತರ ಬ್ಯಾಂಕುಗಳಲ್ಲಿ ಬಡ್ಡಿ ದರ:

  • ಕೆಲವು ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು 8.70% ನಿಂದ 10.5% ವರೆಗೆ ಗೃಹ ಸಾಲದ (Home Loan) ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ.
  • ಉದಾಹರಣೆಗೆ ನೋಡುವುದಾದರೆ ICICI Bank ನಲ್ಲಿ 9% ನಿಂದ 10.5% ವರೆಗೆ ಗೃಹ ಸಾಲದ ಬಡ್ಡಿ ದರ ಇದೆ. ಇದು ಮಾರ್ಚ್ ತಿಂಗಳವರೆಗೆ ಮಾನ್ಯವಾಗಿರುತ್ತದೆ.
  • ಅದೇ ರೀತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ 9.15 ಪರ್ಸೆಂಟ್ ನಿಂದ 10.5% ವರೆಗೆ ಬಡ್ಡಿದರ ಇದೆ. Axis Bank ನೋಡುವುದಾದರೆ Home Loan ದ ಮೇಲಿನ ಬಡ್ಡಿ ದರ 8.75% ನಿಂದ 9.65% ವರೆಗೆ ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ನಲ್ಲಿ 8.70 ಪರ್ಸೆಂಟ್ ನಿಂದ ಬಡ್ಡಿದರ ಆರಂಭವಾಗುತ್ತದೆ.

ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ದರ ಇದೆ ಎನ್ನುವುದನ್ನು ತಿಳಿದುಕೊಳ್ಳಲು ನೀವು ಆಯಾ ಬ್ಯಾಂಕ್ ಗಳ ವೆಬ್ಸೈಟ್ ಗೆ ಹೋಗಿ ಮಾಹಿತಿ ಪಡೆದುಕೊಳ್ಳಬಹುದು..

advertisement

Leave A Reply

Your email address will not be published.