Karnataka Times
Trending Stories, Viral News, Gossips & Everything in Kannada

First Car: ಭಾರತದಲ್ಲಿ ಮೊಟ್ಟ ಮೊದಲು ಕಾರು ಖರೀದಿಸಿದ ವ್ಯಕ್ತಿ ಯಾರು ಗೊತ್ತಾ? ಹೆಸರು ಲೆಳಿದ್ರೆ ಹೆಮ್ಮೆ ಪಡ್ತೀರಾ.

advertisement

ಭಾರತ ಇದೀಗ ಅತೀ ದೊಡ್ಡ ಆಟೋಮೊಬೈಲ್ ಹಬ್. ವಿಶ್ವದ ಬಹುತೇಕ ಆಟೋ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಪಾಲು ಹೊಂದಲು ತುದಿಗಾಲಲ್ಲಿ ನಿಂತಿದೆ. ಸದ್ಯ ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors), ಮಹೀಂದ್ರ (Mahindra) ಸೇರಿದಂತೆ ಹಲವು ಭಾರತೀಯ ಕಂಪನಿಗಳು ಅಧಿಪತ್ಯ ಸಾಧಿಸಿದೆ. ವಿದೇಶಗಳಲ್ಲೂ ಛಾಪು ಮೂಡಿಸಿದೆ. ಭಾರತದಲ್ಲಿ ಕಾರು, ದುಬಾರಿ ಐಷಾರಾಮಿ ವಾಹನಗಳು ಇರುವುದು ಅಚ್ಚರಿಯಲ್ಲ. ಆದರೆ ಬ್ರಿಟಿಷರ ಕಾಲದಲ್ಲಿ ಭಾರತದಲ್ಲಿ ಮೊದಲು ಕಾರು (First Car) ಖರೀದಿಸಿ ಭಾರತೀಯರಲ್ಲಿ ಅಚ್ಚರಿ ಮೂಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಅಷ್ಟಕ್ಕೂ ಅವರು ಯಾರು? ಭಾರತದ ಮೇಲೆ ಪರಕೀಯರ ದಾಳಿ, ಬ್ರಿಟಿಷರು ಕೊಳ್ಳೆ ಹೊಡೆದ ಬಳಿಕ ಅತೀವ ಬಡ ರಾಷ್ಟ್ರವಾದ ಭಾರತ ಎಲ್ಲದ್ದಕ್ಕೂ ಬ್ರಿಟಿಷರ ಅನುಮತಿ ಪಡೆಯಬೇಕಿತ್ತು. ಇದರ ನಡುವೆ ಭಾರತದಲ್ಲಿ ಮೊದಲ ಕಾರು (First Car) ಖರೀದಿಸಿದವರ ಕುರಿತು ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

ಭಾರತಕ್ಕೆ ಮೊದಲು ಕಾರ್ ಪರಿಚಯಿಸಿದವರು:

ಇಂದು ಭಾರತದಲ್ಲಿ ಕೋಟ್ಯಾಂತರ ಕಾರುಗಳು ನೋಡ ಸಿಗುತ್ತದೆ. ಹಳ್ಳಿ ಹಳ್ಳಿಗಳಲ್ಲಿ ಬೀದಿ ಬೀದಿಗಳಲ್ಲಿ ಕಾರು ಚಲಿಸುತ್ತದೆ. ಆದರೆ ಮೊದಲು ಭಾರತದಲ್ಲಿ ಒಂದೇ ಒಂದು ಕಾರು ಕೂಡ ಇರಲಿಲ್ಲ. ಭಾರತದ ಕೈಗಾರಿಕಾ ಪಿತಾಮಹ ಅನ್ನೋ ಬಿರುದುಪಡೆದಿರುವ ಜಮ್‌ಶೆಡ್‌ ಜಿ ಟಾಟಾ (Jamshedji Tata) ಕಾರು ಖರೀದಿಸಿದ ಮೊದಲ ಭಾರತೀಯ. 1897ರಲ್ಲಿ ಜೆಮ್‌ಶೆಡ್ ಜಿ ಟಾಟಾ (Jamshedji Tata) ಇಂಗ್ಲೆಂಡ್‌ನಿಂದ ಕಾರು (First Car) ಖರೀದಿಸಿ ಭಾರತಕ್ಕೆ ಆಮದು ಮಾಡಿದ್ದರು. ಆ ಕಾಲದಲ್ಲಿ ಈ ಸಾಹಸ ದೂರದ ಮಾತು, ಯೋಚನೆ ಮಾಡುವ ಪರಿಸ್ಥಿತಿಯಲ್ಲೂ ಭಾರತೀಯರು ಇರಲಿಲ್ಲ. ಆದರೆ ಉದ್ಯಮಿ ಜೆಮ್‌ಶೆಡ್ ಜಿ ಟಾಟಾ, ಭಾರತೀಯರಿಗೆ ಎಲ್ಲವೂ ಸಾಧ್ಯ ಅನ್ನೋ ಸ್ಪಷ್ಟ ಸೂಚನೆಯನ್ನು ಬ್ರಿಟಿಷ್ ರಿಗೆ ನೀಡಿ ಬೆವರಿಳಿಸಿದ್ದರು.

 

Image Source: Tata Group

 

advertisement

ಭಾರತಕ್ಕೆ ಕಾಲಿಟ್ಟಿತ್ತು ಬ್ರಿಟಿಷ್ ಕಾರು:

ಕ್ರಾಂಪ್ಟನ್ ಗ್ರೇವಿಯಸ್ (Crompton Greaves) ಅನ್ನೋ ಬ್ರಿಟಿಷ್ ಕಾರನ್ನು ಜಮ್‌ಶೆಡ್ ಜಿ ಟಾಟಾ (Jamshedji Tata) ಖರೀದಿಸಿ ಭಾರತಕ್ಕೆ ತಂದಿದ್ದರು. ಫಾಸ್ಟರ್ ಈ ಕಂಪನಿಯ ಮಾಲೀಕ. ಈತ ಭಾರತದಲ್ಲಿ ಆಡಳಿತ ಕೆಲಸದಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿ. ಈತನ ಫಾಸ್ಟರ್ ಕ್ರಾಂಪ್ಟನ್ ಗೇವಿಯಸ್ ಕಂಪನಿಯ ಕಾರನ್ನು ಜೆಮ್‌ಶೆಡ್ ಜಿ ಟಾಟಾ ಖರೀದಿಸಿ ಭಾರತಕ್ಕೆ ತಂದಿದ್ದರು. ಆದರೆ ಭಾರತದಲ್ಲಿ ಮೊದಲ ಕಾರು ಹೊಂದಿದ ವ್ಯಕ್ತಿ ಇದೇ ಫಾಸ್ಟರ್. 1896ರಲ್ಲಿ ಈತ ತನ್ನದೇ ಕಂಪನಿಯ ಕಾರನ್ನು ಭಾರತಕ್ಕೆ ತಂದಿದ್ದರು. ಮರು ವರ್ಷ ಇದೇ ಕಂಪನಿಯ ಕಾರನ್ನು ಜೆಮ್‌ಶೆಡ್ ಜಿ ಟಾಟಾ ಖರೀದಿಸಿದ್ದರು.

Image Source: Patrika

 

ಜಮ್‌ಶೆಡ್ ಜಿ ಟಾಟಾ ತಮ್ಮ 29ನೇ ವಯಸ್ಸಿಗೆ ಉದ್ಯಮ ಕ್ಷೇತ್ರಕ್ಕೆ ಇಳಿದು ಭಾರತದ ಯಶಸ್ವಿಯಾಗಿ ಉದ್ಯಮಿಯಾಗಿ ಹೊರಹೊಮ್ಮಿದ್ದರು. ಆರಭದಲ್ಲಿ ಹಲವು ಏರಿಳಿತ ಕಂಡ ಟಾಟಾ ಅಷ್ಟೇ ವೇಗದಲ್ಲಿ ನಾಲ್ಕು ಯೋಜನೆ ಕೈಗೆತ್ತಿಕೊಂಡು ದೇಶದ ಇತಿಹಾಸ ಬದಲಿಸಿದರು. ಸ್ಟೀಲ್, ಹೊಟೆಲ್, ಶಿಕ್ಷಣ ಹಾಗೂ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕೈಗೆತ್ತಿಕೊಂಡು ಭಾರತವನ್ನು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದರು.

advertisement

Leave A Reply

Your email address will not be published.