Karnataka Times
Trending Stories, Viral News, Gossips & Everything in Kannada

Mahindra Company: ಬೆಳ್ಳಂಬೆಳಗ್ಗೆ ಮಹಿಂದ್ರ ಕಂಪನಿಯ ಕಾರು ಖರೀದಿಸಲು ಬಯುಸುವವರಿಗೆ 2 ಸಿಹಿಸುದ್ದಿ!

advertisement

ಭಾರತದಲ್ಲಿ ಕಾರು ನಿರ್ಮಾಣ ಕಂಪನಿಯಾಗಿರುವಂತಹ ಮಹೀಂದ್ರ ಸಂಸ್ಥೆ (Mahindra Company) ಸದ್ಯದ ಮಟ್ಟಿಗೆ SUV ವಿಭಾಗದಲ್ಲಿ ಭಾರತದಲ್ಲಿ ಕಾರು ನಿರ್ಮಾಣ ಕಂಪನಿಯಾಗಿದೆ. ಅದರಲ್ಲೂ ವಿಶೇಷವಾಗಿ ಈ ವರ್ಷ ರೋಮಾಂಚನಕಾರಿಯದಂತಹ ಕಾರು ಲಾಂಚಿಂಗ್ ಕಾರ್ಯಕ್ರಮವನ್ನು ಕೂಡ ಮಹೇಂದ್ರ ಸಂಸ್ಥೆ ಹೊಂದಿದೆ. 2023ರಲ್ಲಿ ಮಹಿಂದ್ರ ಸಂಸ್ಥೆ (Mahindra Company) ಯಿಂದ ಹೇಳಿಕೊಳ್ಳುವ ರೇಂಜಿನಲ್ಲಿ ಯಾವುದೇ ರೀತಿಯ SUV ಕಾರ್  ಗಳನ್ನು ಲಾಂಚ್ ಮಾಡಿರಲಿಲ್ಲ. ಇದೇ ಕಾರಣಕ್ಕಾಗಿ ಈಗ ಆ ನಷ್ಟವನ್ನು ತುಂಬಲು 2024ರಲ್ಲಿ ಎರಡು ಹೊಸ ಕಾರ್ ಗಳನ್ನು ಮಹೀಂದ್ರ ಸಂಸ್ಥೆ ಲಾಂಚ್ ಮಾಡುತ್ತಿದೆ. ಹಾಗಿದ್ದರೆ ಬನ್ನಿ ತಡ ಮಾಡೋದು ಬೇಡ ಆ ಕಾರುಗಳು ಯಾವುವು ಅನ್ನೋದನ್ನ ತಿಳಿಯೋಣ.

Mahindra XUV300 Facelift

ಈ ಹೊಸ ಕಾರು 2024ರ ಏಪ್ರಿಲ್ ತಿಂಗಳ ಅಂದರೆ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. Mahindra XUV300 Facelift ಕಾರಿನಲ್ಲಿ ನೀವು ಹೊಸ ಡಿಸೈನ್ ಹಾಗೂ ಸಾಕಷ್ಟು ಅಪ್ಡೇಟೆಡ್ ವರ್ಷನ್ ಗಳನ್ನು ಕಾಣಬಹುದಾಗಿದೆ. ಇಂಡಿಯನ್ ರೋಡ್ ನಲ್ಲಿ ಟೆಸ್ಟ್ ಮಾಡುವ ಸಂದರ್ಭದಲ್ಲಿ ಸಾಕಷ್ಟು ವಿಚಾರಗಳನ್ನು ಗಮನಿಸಿ ಇಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕ್ಯಾಬಿನ್ ಒಳಗೆ 10.25 ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ನೀವು ಕಾಣಬಹುದಾಗಿದೆ.

Image Source: GoMechanic

advertisement

ಅದೇ ಸೈಜ್ ನ ಡ್ರೈವರ್ ಡಿಸ್ಪ್ಲೇಯನ್ನೂ ಕಾರಿನಲ್ಲಿ ಅಳವಡಿಸಲಾಗಿದೆ. Mahindra XUV300 Facelift ಕಾರಿನ ಇಂಜಿನ್ ಆಪ್ಷನ್ ವಿಚಾರದಲ್ಲಿ ನೋಡುವುದಾದರೆ ಈಗ ಇರುವಂತಹ ಆಯ್ಕೆಯನ್ನೇ ಮುಂದುವರೆಸಲಿದ್ದು, 1.5 ಟರ್ಬೋ ಡೀಸೆಲ್, 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಲೀಟರ್ tGdi ಪೆಟ್ರೋಲ್ ಯೂನಿಟ್ ಇಂಜಿನ್ ಅನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಆರು ಸ್ಪೀಡ್ ಟಾರ್ಕ್ ಕನ್ವರ್ಟರ್, ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಈ SUV ಕಾರ್ ನಲ್ಲಿ ಅಪ್ಗ್ರೇಡ್ ಮಾಡಲಾಗಿದೆ.

Mahindra Thar 5-Door

ಈ ವರ್ಷ ಅತ್ಯಂತ ಬಹು ನಿರೀಕ್ಷಿತ ಕಾರುಗಳಲ್ಲಿ Mahindra Thar 5-Door ಖಂಡಿತವಾಗಿ ಕಾಣಿಸಿಕೊಳ್ಳುತ್ತದೆ. ಕಾರಿನ ಲಾಂಚ್ 2024ರ ದ್ವಿತೀಯಾರ್ಧಲ್ಲಿ ನಡೆಯಲಿದೆ. ಜೂನ್ ತಿಂಗಳಿನಿಂದಲೇ ಕಾರಿನ ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಲಿದೆ. ಸ್ಕಾರ್ಪಿಯೊ ಕಾರಿನ ತಳಹದಿಯನ್ನೇ Mahindra Thar 5-Door ಮುಂದುವರಿಸಿಕೊಂಡು ಹೋಗಲಿದೆ. ಈ ಕಾರಿನ ಅಲಾಯ್ ವೀಲ್ 19 ಇಂಚಿನದ್ದಾಗಿರಲಿದೆ. ಸಿಂಗಲ್ ಪೇನ್ ಸನ್ರೂಫ್ ಜೊತೆಗೆ ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಅನುಕೂಲ ನೀವು ಕಾಣಬಹುದಾಗಿದೆ.

Image Source: Overdrive

10.25 ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಜೊತೆಗೆ ಹೊಸ ಸ್ಟೇರಿಂಗ್ ವೀಲ್ ಹಾಗೂ ಇತ್ಯಾದಿ ವಿಶೇಷ ಫೀಚರ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಹಿಂಬದಿಯಲ್ಲಿ ಎಸಿ ವೆಂಟ್ಸ್ ಗಳ ಜೊತೆಗೆ ಒಳಗೆ ಲೆದರ್ ಫಿನಿಷ್ ಕೂಡ ಕಾರನ್ನು ಇನ್ನಷ್ಟು ವಿಶೇಷವಾಗಿ ಮಾಡುತ್ತದೆ. 2.2-litre mHawk ಡೀಸೆಲ್ ಹಾಗೂ 2.0-litre mStallion ಪೆಟ್ರೋಲ್ ಇಂಜಿನ್ ಅನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಇದರ ಜೊತೆಗೆ ಆರು ಸ್ಪೀಡ್ ಮಾನ್ಯುಯಲ್ ಹಾಗೂ ಆರು ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ ಮಿಷನ್ ಗಳನ್ನು ಅಳವಡಿಸಿರುವುದನ್ನು ನೀವು ಕಾಣಬಹುದಾಗಿದೆ. ಇನ್ನು ಅಂದಾಜು ಪ್ರಕಾರ ಥಾರ್ 5 ಡೋರ್ ಕಾರು ಪ್ರಾಪರ್ 4WD ಸಿಸ್ಟಮ್ ಅನ್ನು ಹೊಂದಿರಲಿದೆ. ಚಾಲಕ ಸ್ನೇಹ ಆಗಿ ಈ ಕಾರು ಕಾಣಿಸಿಕೊಳ್ಳಲಿದೆ.

advertisement

Leave A Reply

Your email address will not be published.