Karnataka Times
Trending Stories, Viral News, Gossips & Everything in Kannada

Virat Kohli: ಇನ್ನು ಕೆಲವೇ ಕೆಲವು ರನ್ ಬಾರಿಸಿದರೆ IPL ನಲ್ಲಿ ಇತಿಹಾಸದ ಪುಟ ಸೇರಲಿರುವ ಕೊಹ್ಲಿ! ಜಗತ್ತಿನಲ್ಲೇ ಮೊದಲಿಗ

advertisement

ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ಲೋಕದಲ್ಲಿ ಕಿಂಗ್ ಕೊಹ್ಲಿ ಎಂದೆ ಪ್ರಬಲರಾದವರು ಆಗಿದ್ದಾರೆ. ಇನ್ನು ವಿರಾಟ್ ಕೊಹ್ಲಿಯವರು ಬಹಳಷ್ಟು ಸಾಧನೆ ಈಗಾಗಲೇ ಮಾಡಿದ್ದಾರೆ. ಜೊತೆಗೆ ಹಲವಾರು ಯುವ ಕ್ರಿಕೆಟ್ ಆರಂಭಿಕರಿಗೆ ಬಹಳ ಇನ್ಸ್ಪಿರೇಷನ್ ಆಗಿದ್ದಾರೆ. ಇನ್ನು ವಿರಾಟ್ ಕೊಹ್ಲಿ (Virat Kohli) ಅವರು ಆರ್‌ಸಿಬಿ (RCB) ತಂಡ ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 2008ರಲ್ಲಿ ತಮ್ಮ ಡೆಬ್ಯು ನೀಡುವ ಮೂಲಕ ಐಪಿಎಲ್ ಗೆ ಪಾದರ್ಪಣೆ ಮಾಡಿದರು. ಇನ್ನು ಅವರು RCB ತಂಡ ಸೇರಿ 16 ವರ್ಷಗಳು ಪೂರ್ಣವಾಗುತ್ತಾ ಬಂದಿದೆ.

ಆದರೂ ಇನ್ನೂ ಒಂದೇ ತಂಡದಲ್ಲಿ ಆಡುತ್ತಿರುವಂತಹ ಧೀಮಂತ ಆಟಗಾರ ಆಗಿದ್ದಾರೆ ಕಿಂಗ್ ಕೊಹ್ಲಿ (Virat Kohli). ಇನ್ನು 16 ವರ್ಷದಿಂದಲೂ ಕೂಡ ಒಂದೇ ತಂಡದಲ್ಲಿ ಆಟ ಆಡುತ್ತಾ ಇರುವ ಕಿಂಗ್ ಕೊಹ್ಲಿ ಇನ್ನು 132 ರನ್ ಪೂರೈಸಿದರೆ, ಒಂದೇ ತಂಡದಲ್ಲಿ ಅಡಿ 8000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹೊಸ ಮೈಲಿಗಲ್ಲು ಸೃಷ್ಟಿ ಮಾಡಲಿದ್ದಾರೆ. ಇನ್ನು ಈ ಬಾರಿ 2024 ಐಪಿಎಲ್ ಆಟದಲ್ಲಿ ಇನ್ನು 434 ರನ್ ಬಾಕಿ ಇದ್ದು, ಅದನ್ನು ಮುಂಬರುವ ಆಟಗಳಲ್ಲಿ ಅವರು ಪೂರೈಸಿದರೆ ಅವರ ಹೆಸರಿನಲ್ಲಿ ಹೊಸ ಇಂಪ್ಯಾಕ್ಟ್ ಸೃಷ್ಟಿ ಆಗುವುದು ಖಂಡಿತ.

Virat Kohli ಅವರ ಪರ್ಫಾರ್ಮೆನ್ಸ್ ಹೇಗಿದೆ ಎಂದು ತಿಳಿದುಕೊಳ್ಳೋಣ:

 

Image Source: Scroll.in

 

advertisement

ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಚೆನ್ನೈ ಸೂಪರ್ ಕಿಂಗ್ (CSK) ತಂಡವನ್ನು ಚೆನ್ನೈನಲ್ಲಿ ಎದುರಿಸಿತು. ಇನ್ನು ಅದರಲ್ಲಿ ಕಿಂಗ್ ಕೊಹ್ಲಿ (Virat Kohli) ಅವರು 21 ರನ್ ಗಳಿಸಿದರು. ಇನ್ನು ಎರಡನೇ ಪಂದ್ಯ ಅಂದರೆ ಪಂಜಾಬ್ ಸೂಪರ್ ಕಿಂಗ್ಸ್ (PBKS) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಡಿದಂತಹ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಅವರು 49 ಬಾಲ್ ಗಳಲ್ಲಿ ಅಜಯ 77 ರನ್ ಗಳಿಸಿದ್ದಾರೆ. ಈ ಪಂದ್ಯ ಅವರ ಸಾಮರ್ಥ್ಯ ಏನೆಂಬುದನ್ನು ಮತ್ತೋಮ್ಮೆ ತೋರಿಸುತ್ತದೆ.

ಇನ್ನು ಅದಾದ ನಂತರ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿದ ಪಂದ್ಯದಲ್ಲಿ 59 ಎಸೆತಗಳನ್ನು ಎದುರಿಸಿದ ಕಿಂಗ್ ಕೊಹ್ಲಿ ಅವರು ಅಜಯ 83 ರನ್ ಗಳಿಸಿದ್ದಾರೆ. ಇನ್ನು ಕಳೆದ ಪಂದ್ಯವು ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು 20 ರನ್ ಗಳನ್ನು ಗಳಿಸಿದ್ದಾರೆ. ಇನ್ನು ಇದರಂತೆ ಆಡಿದಂತಹ ನಾಲ್ಕು ಐಪಿಎಲ್ ಪಂದ್ಯಗಳಲ್ಲಿ ಅವರು 201 ರನ್ ಗಳನ್ನು ಗಳಿಸಿದ್ದಾರೆ.

 

Image Source: JioCinema

 

ಇನ್ನು 2008ರಿಂದ ಇಲ್ಲಿಯವರೆಗೂ 240 ಐಪಿಎಲ್ ಪಂದ್ಯಗಳಲ್ಲಿ ಆಡಿರುವಂತಹ ಕೊಹ್ಲಿಯವರು 7466 ರನ್ ಪೂರೈಸಿದ್ದಾರೆ. ಇನ್ನು ಕಳೆದ 15 ಪಂದ್ಯಗಳ ಚಾಂಪಿಯನ್ಸ್ ಲೀಗ್ ನಲ್ಲಿ 424 ರನ್ ಗಳಿಸಿದ್ದಾರೆ. ಇನ್ನು ಈ ಬಾರಿ ಐಪಿಎಲ್ ಪಂದ್ಯಗಳಲ್ಲಿ ಇನ್ನು 434 ರನ್ ಪೂರೈಸಿದರೆ 8000 ರನ್ ಪೂರೈಸಿದ ಮೊದಲ ಭಾರತೀಯ ಕ್ರಿಕೆಟಿಗ ಮತ್ತು ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಸರಿಗೆ ಕೊಹ್ಲಿ ಸೇರ್ಪಡೆಯಾಗುತ್ತಾರೆ. ಇನ್ನು ಈ ವಿಷಯ ಅವರ ಅಭಿಮಾನಿಗಳಿಗೆ ಬಹಳ ಸಂತೋಷವನ್ನು ತಂದುಕೊಟ್ಟಿದೆ.

advertisement

Leave A Reply

Your email address will not be published.