Karnataka Times
Trending Stories, Viral News, Gossips & Everything in Kannada

Hospital Bill: ಖಾಸಗಿ ಆಸ್ಪತ್ರೆಯಲ್ಲಿ ಬಿಲ್ ಕಟ್ಟುವವರಿಗೆ ಸಿಹಿಸುದ್ದಿ! ಕೇಂದ್ರದ ಘೋಷಣೆ

advertisement

ಇಂದು ಆರೋಗ್ಯ ರಕ್ಷಣೆಯ ಬಗ್ಗೆಯು ನಾವು ಅಷ್ಟೆ ಜಾಗೃತರಾಗಬೇಕು.ನಮ್ಮ ಯಾವುದೇ ಕೆಲಸ,ಹಣ ಇತ್ಯಾದಿಗಿಂತ ಆರೋಗ್ಯ ಎನ್ನುವುದು ಬಹಳ ಮುಖ್ಯ‌‌.ಹಾಗಾಗಿ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿಕೊಳ್ಳುವುದು ಬಹಳ ಮುಖ್ಯ.‌ಆದ್ರೆ ಇಂದು ಆರೋಗ್ಯ ಯಾವಾಗ ಕೆಡುತ್ತದೆ ಎಂದು ಹೇಳತಿರದು. ಹಾಗಾಗಿ ಬಡ ವರ್ಗದ ಜನತೆಗೆ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಸಹ ಕಷ್ಟವೇ. ಇಂದು ಸರಕಾರ ಬಡವರ್ಗದ ಜನತೆಯನ್ನು ಗುರಿಯಾಗಿಸಿಕೊಂಡು ಹೊಸ ಯೋಜನೆಯನ್ನು ಆರಂಭ ಮಾಡಿದೆ.ಈ ಯೋಜನೆಯಡಿ ಖಾಸಗಿ ಆಸ್ಪತ್ರೆ ಯಲ್ಲಿ ಸಹ ಬಡವರ್ಗದ ಜನತೆ ಉಚಿತ ಚಿಕಿತ್ಸೆ ಯನ್ನು ಪಡೆಯಬಹುದು‌.

Ayushman Bharat Yojana:

 

Image Source: GST Suvidha Kendra

 

ಈ ಯೋಜನೆ (Ayushman Bharat Yojana) ಯನ್ನು ಬಡವರ್ಗದ ಜನತೆಗಾಗಿಯೇ ಸರಕಾರ ಜಾರಿಗೆ ತಂದಿದೆ. ಬಡ ವರ್ಗದ ಕುಟುಂಬಗಳಿಗೆ ಚಿಕಿತ್ಸೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಅದರ ಜೊತೆ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಸಿಗಬೇಕು ಎಂಬ ನಿಟ್ಟಿನಲ್ಲಿ ಜಾರಿಗೆ ತಂದಿದೆ. ಈಗಾಗಲೇ ಈ ಯೋಜನೆಯಲ್ಲಿ 6 ವರ್ಷಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರ ಸಂಖ್ಯೆ 6.5 ಕೋಟಿ ಆಗಿದ್ದು, ಈ ಸಂಖ್ಯೆಯಲ್ಲಿ 3.2 ಕೋಟಿ ಮಹಿಳೆಯರು ಸೇರಿದ್ದಾರೆ. ಹಾಗಾಗಿ ವಿಶೇಷ ವಾಗಿ ಮಹಿಳೆಯರಿಗೆ ಈ ಯೋಜನೆ ಬಹಳ ಸಹಕಾರಿ ಯಾಗುತ್ತಿದೆ.

advertisement

ಈ ಸಮಸ್ಯೆ ಗಳಿಗೆ ಇದೆ:

ಈಗಾಗಲೇ ಮಹಿಳೆಯರು ಕ್ಯಾನ್ಸರ್, ಕಣ್ಣಿನ ಸಮಸ್ಯೆಗಳು, ಇಎಸ್ಟಿ ಸಮಸ್ಯೆಗಳು ಮತ್ತು ನವಜಾತ ಆರೈಕೆ ಪ್ಯಾಕೇಜ್‌ಗಳಲ್ಲಿ ಹೆಚ್ಚು ಸೇವೆಗಳನ್ನು ಪಡೆದುಕೊಂಡಿದ್ದು ಈಗಾಗಲೇ ಸುಮಾರು 10 ಕೋಟಿ ಆಯುಷ್ಮಾನ್ ಭಾರತ್ ಕಾರ್ಡ್‌ (Ayushman Bharat Card) ಗಳನ್ನು ವಿತರಣೆ ಮಾಡಲಾಗಿದೆ. ತೀರ ಸಿರಿಯಸ್ ಕಾಯಿಲೆಗಳಾದ ಕ್ಯಾನ್ಸರ್, ನರರೋಗ ಮೂತ್ರಪಿಂಡ ಸಂಬಂಧಿತ ಕಾಯಿಲೆ ಇತ್ಯಾದಿ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯಬಹುದು.

 

Image Source: Mint

 

ಅರ್ಜಿ ಹಾಕಬಹುದು:

  • ನೀವು ಮನೆಯಲ್ಲೇ ಕುಳಿತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸುಲಭವಾಗಿ ಅಪ್ಲೈ ಮಾಡಬಹುದಾಗಿದೆ. ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಆಯುಷ್ಮಾನ್ ಭಾರತ್ ಆಪ್ (Ayushman Bharat App) ಅನ್ನು ಡೌನ್‌ಲೋಡ್ ಮಾಡುವ ಮೂಲಕ‌ PM-JAY ಅಪ್ಲಿಕೇಶನ್ ತೆರೆಯಿರಿ.
  • ನಂತರ ಫಲಾನುಭವಿ ಎಂಬ ಆಯ್ಕೆ ‌ಇರಲಿದ್ದು ಹೊಸ ಸದಸ್ಯರ ನೋಂದಾವಣೆ ಗೆ ಕ್ಲಿಕ್ ಕೊಟ್ಟು ಅದರಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಒಟಿಪಿ ಕಳುಹಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. OTP ನಮೂದಿಸಿ.ಮುಂದೆ ನಿಮ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ ಮತ್ತು ವಿಳಾಸದಂತಹ ಅಗತ್ಯವಿರುವ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
  • ಬೇಕಾದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.ಎಲ್ಲ ವಿವರಗಳನ್ನು ಭರ್ತಿ ಮಾಡಿದ ಬಳಿಕ ಒಮ್ಮೆ ಪರಿಶೀಲಿಸಿ ವಿವರಗಳನ್ನು ದೃಢೀಕರಿಸಿ ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಿ.

advertisement

Leave A Reply

Your email address will not be published.