Karnataka Times
Trending Stories, Viral News, Gossips & Everything in Kannada

Arecanut Cultivation: 2 ಎಕರೆ ಅಡಿಕೆ ತೋಟ, 210 ರಿಂದ 100 ಕ್ವಿಂಟಾಲ್ ಗೆ ಕುಸಿದ ಇಳುವರಿ, ಕಾರಣ ಇಷ್ಟೇ!

advertisement

ಕೃಷಿ‌ ನಮ್ಮ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು ಕೃಷಿ ಅಭಿವೃದ್ಧಿ ಮಾಡಲು ಸರಕಾರ ಹಲವು ರೀತಿಯ ಅಭಿವೃದ್ಧಿ ‌ಪರ ಚಟುವಟಿಕೆ ಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ.ಈಗಾಗಲೇ ಕೃಷಿ ಸಲಕರಣೆ, ಕೃಷಿ ಯಾಧಾರಿತ ತರಭೇತಿ ಇತ್ಯಾದಿಗಳನ್ನು ನೀಡ್ತಾ ಇದ್ದು ಕೃಷಿ ಅಭಿವೃದ್ಧಿ ಯಾಗಿದೆ. ಆದರೆ ಕೆಲವೊಮ್ಮೆ ರೈತರು ಹೆಚ್ಚಿನ ಇಳುವರಿ‌ ಕಾಣಬೇಕೆಂಬ ನಿಟ್ಟಿನಲ್ಲಿ ಕೃಷಿಯಲ್ಲಿ ಹೆಚ್ಚಿನ ತಂತ್ರಜ್ಞಾನ ಅಳವಡಿಕೆ ಮಾಡುತ್ತಾರೆ. ಇದು ಹೆಚ್ಚಿನ ಭಾರಿ ರೈತರಿಗೆ ತೊಂದರೆ ಉಂಟುಮಾಡಲಿದೆ. ಮೊದಲಿಗೆ ನಾವು ಯಾವುದೇ ತಂತ್ರಜ್ಞಾನ, ರಸಾಯನಿಕ ಪದ್ದತಿ ಅಳವಡಿಕೆ ಇತ್ಯಾದಿಗಳ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು.

ಕುಸಿದ ಇಳುವರಿ:

 

Image Source: Agri Farming

 

ಹೆಚ್ಚಿನ ರೈತರು ಕೃಷಿ (Arecanut Cultivation) ಯ ಬಗ್ಗೆ ಮಾಹಿತಿ ತಿಳಿಯದೇ ರಸಾಯನಿಕ ಪದ್ದತಿ ಅಳವಡಿಕೆ ಮಾಡುತ್ತಾರೆ. ಇದರಿಂದ ಕೃಷಿ ಹಾನಿಯಾಗಲಿದೆ. ಇಲ್ಲಿ ರೈತರೊಬ್ಬರು ಹೆಚ್ಚಿನ ರಸಾಯನಿಕ‌ ಮದ್ದು ಸಿಂಪಡಣೆ ಮಾಡಿ‌ ಬಹಳಷ್ಟು ನಷ್ಟ ಮಾಡಿಕೊಂಡಿದ್ದಾರೆ. ಎರಡು ಎಕರೆ ಜಮೀನಿನಲ್ಲಿ 210ಕ್ವಿಂಟಾಲ್ ಆಗುತ್ತಿದ್ದ ಅಡಿಕೆ ಇಳುವರಿ (Arecanut Yield) 100ಕ್ವಿಂಟಾಲ್ ಗೆ ಕುಸಿದಿದೆ.‌ ಅದೇ ರೀತಿ 60 ಮರಗಳು ಬರಡಾಗಿದ್ದು ಬಹಳಷ್ಟು ನಷ್ಟ ಉಂಟಾಗಿದೆ.

ಹೆಚ್ಚಿನ ಮದ್ದು ಸಿಂಪಡಣೆ ಮಾಡಬಾರದು:

advertisement

ಹೆಚ್ಚಿನ ರೈತರು ಮಾರುಕಟ್ಟೆಯಲ್ಲಿ ದುಂದುವೆಚ್ಚ ಮಾಡಿ ಔಷಧಿ ತಂದು ಸಿಂಪಡಣೆ ಮಾಡುತ್ತಾರೆ. ಹೌದು ಅಡಿಕೆ (Arecanut) ಗಿಡಗಳಿಗೆ ಅಗತ್ಯ ಇದ್ದರೆ ಮಾತ್ರ ಮದ್ದು ಸಿಂಪಡಣೆ ಮಾಡಬೇಕು. ಇಲ್ಲದಿದ್ದಲ್ಲಿ ಫಸಲು‌ ಕೊಡುವ ಮರಗಳ ಪೋಷಣೆ ಮತ್ತಷ್ಟು ಕಡಿಮೆ ಯಾಗಬಹುದು. ಕ್ರಿಮಿನಾಶಕದ ಅಗತ್ಯ ಇದ್ದರೆ ಮನೆಯಲ್ಲಿಯೇ ಕೂಡ ನೀವು ತಯಾರು ಮಾಡಬಹುದು. ಹುಳಿಯಾದ ಮಜ್ಜಿಗೆ ಮತ್ತು ಬೇವಿನ ಸೊಪ್ಪಿನ ರಸವನ್ನು ಮಿಶ್ರಣ ಮಾಡುವ ಮೂಲಕ ತಯಾರು ಮಾಡಬಹುದು.

ಅತೀಯಾದ ಕಳೆನಾಶಕ ಗಿಡಗಳಿಗೆ ಹಾನಿ:

 

Image Source: The Quint

 

ನೀವು ಅತಿಯಾದ ಕಳೆ ನಾಶಕ ಬಳಕೆ ಮಾಡಿದ್ದಲ್ಲಿ ಮಣ್ಣಿನಲ್ಲಿರುವ ಜೈವಿಕ ಅಂಶಗಳು,ಕೊಳೆತ ತ್ಯಾಜ್ಯ, ಎರೆಹುಳು, ಮಣ್ಣಿನ ಸಾಂದ್ರತೆ, ಮಣ್ಣಿನ ಪೋಷಕಾಂಶಗಳು ಇತ್ಯಾದಿಗಳು ನಾಶ ಆಗಲಿದೆ ಹಾಗಾಗಿ ಅಗತ್ಯ ಇದ್ದಷ್ಟು ಮಾತ್ರ ಕ್ರಿಮಿ ನಾಶಕ ಬಳಸಿ. ಅದರಲ್ಲೂ ಮನೆಯಲ್ಲೇ ತಯಾರು ಮಾಡಿದ ಕ್ರಿಮಿ ನಾಶಕ ಬಳಸುವುದು ಉತ್ತಮ.

ಮಣ್ಣಿನ ಗುಣಮಟ್ಟ ಪರೀಕ್ಷೆ ಮಾಡಿಸಬೇಕು:

ರೈತರು ಯಾವುದೇ ಕೃಷಿ (Arecanut Cultivation) ಮಾಡುವ ಸಂದರ್ಭದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಬಹಳ ಉತ್ತಮ. ಮಣ್ಣಿನ ಪರೀಕ್ಷೆ ಮಾಡಿಸಿ ಪೂರಕ ಗೊಬ್ಬರ ಹಾಕುವುದರಿಂದ ಉತ್ತಮ ಬೆಳೆ ಬೆಳೆದು ಕೃಷಿಯಲ್ಲಿ ರೈತನು ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ.ಅದೇ ರೀತಿ ಮಣ್ಣಿನಲ್ಲಿ ಜೈವಿಕ ಕ್ರಿಯೆ ಹೆಚ್ಚಾಗಬೇಕು. ಎರೆಹುಳುಗಳ ಸಂಖ್ಯೆ ಹೆಚ್ಚಾಗುವ ಮೂಲಕ ಮಣ್ಣಿನ‌ ಅಭಿವೃದ್ಧಿ ಯಾಗಬೇಕು.

advertisement

Leave A Reply

Your email address will not be published.