Karnataka Times
Trending Stories, Viral News, Gossips & Everything in Kannada

Dubai: ರಾಮನವಮಿ ದಿನದ ಒಂದು ದಿನ ಮುಂಚೆ ದುಬೈನಲ್ಲಿ ನಡೆದಿದ್ದು ಏನು ಗೊತ್ತಾ?

advertisement

ಇಂದು ಅಂದ್ರೆ ಏಪ್ರಿಲ್ 17 ರಾಮ ಜನಿಸಿದ ದಿನ. ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತದ ಪುರಾಣ ಗಳಲ್ಲಿ ಬರುವಂತಹ ಭಗವಾನ್ ಶ್ರೀ ವಿಷ್ಣುವಿನ ಅವತಾರಗಳಲ್ಲಿ ಒಬ್ಬರಾಗಿರುತ್ತಾರೆ. ಮಾನವ ಸ್ವರೂಪದ ಮೂಲಕ ಮರ್ಯಾದ ಪುರುಷೋತ್ತಮ ಎನ್ನುವಂತಹ ಪದಕ್ಕೆ ಅರ್ಥ ನೀಡುವ ರೀತಿಯಲ್ಲಿ ಬಾಳಿ ಬದುಕಿದವರು. ದೇವತಾ ಸ್ವರೂಪದ ರೂಪದಲ್ಲಿ ಇವತ್ತಿಗೂ ಕೂಡ ಕೋಟ್ಯಾಂತರ ಭಕ್ತಾಭಿಮಾನಿಗಳು ಶ್ರೀರಾಮಚಂದ್ರ ನನ್ನ ಆರಾಧಿಸುತ್ತಾರೆ ಪೂಜಿಸುತ್ತಾರೆ.

ಇನ್ನು ಶ್ರೀರಾಮಚಂದ್ರನ ದೇವಸ್ಥಾನ ಇತ್ತೀಚಿಗಷ್ಟೇ ಅಂದರೆ ಜನವರಿ 22ರಂದು ಆಯೋಧ್ಯೆಯ ಜನ್ಮ ಭೂಮಿಯಲ್ಲಿ ಈಗಾಗಲೇ ಭವ್ಯ ರಾಮಲಲ್ಲನ ಮಂದಿರವನ್ನು ನಿರ್ಮಾಣ ಮಾಡಿರುವುದು ಪ್ರತಿಯೊಬ್ಬರಿಗೂ ತಿಳಿದಿದೆ ಹಾಗೂ ಇಂದು ಮೊದಲ ಬಾರಿಗೆ ರಾಮನವಮಿಯ (Ram Navami) ಸಂಭ್ರಮಾಚರಣೆ ಹಾಗೂ ಪೂಜೆ ಕೂಡ ಆ ಪುಣ್ಯಕ್ಷೇತ್ರದಲ್ಲಿ ನಡೆದಿದೆ. ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಗಲ್ಫ್ ಕಂಟ್ರಿಗಳಲ್ಲಿ ಕೂಡ ಭಾರತದ ಸಂಸ್ಕೃತಿಯ ಪರಿಚಯದ ಅನಾವರಣ ಆಗಿದೆ.

ಮುಸ್ಲಿಂ ರಾಷ್ಟ್ರದಲ್ಲಿ ಕೂಡ ರಾಮನ ಮಂದಿರ ನಿರ್ಮಾಣ ಆಗಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡ್ಬೇಕು ಯಾಕೆಂದರೆ ರಾಮ ಎನ್ನುವುದು ಕೇವಲ ಹಿಂದೂ ದೇವರು ಅಥವಾ ಹಿಂದು ಸಂಸ್ಕೃತಿಗೆ ಸಂಬಂಧಪಟ್ಟರುವಂತಹ ವ್ಯಕ್ತಿತ್ವ ಮಾತ್ರ ಅಲ್ಲ ಇದು ಭಾರತದ ಸಂಪ್ರದಾಯದ ಪ್ರತಿನಿಧಿಸುವಂತಹ ವ್ಯಕ್ತಿತ್ವದ ಪರಿಚಯ ಎಂದು ಹೇಳಬಹುದಾಗಿದೆ, ವಿದೇಶಗಳಲ್ಲಿ ಕೂಡ ಈ ರೀತಿ ರಾಮನ ಭಕ್ತಿಯ ಪರಿಕಲ್ಪನೆ ಇರುವುದು ನಮ್ಮೆಲ್ಲರ ಅದೃಷ್ಟವೇ ಸರಿ.

ರಾಮನವಮಿಗೆ ಒಂದು ದಿನ ಇರುವಂತ ದುಬೈಯಲ್ಲಿ ನಡೆದಿದ್ದೇನು ಗೊತ್ತಾ?

advertisement

ದುಬೈ ಬಗ್ಗೆ ನಿಮಗೆಲ್ಲ ತಿಳಿದಿರುವಂತದ್ದೇ. ಮರುಭೂಮಿಯ ಮೇಲೆ ಕಟ್ಟಿರುವಂತಹ ಈ ಪ್ರದೇಶ 90ರ ದಶಕದ ನಂತರವೇ ಶ್ರೀಮಂತ ದೇಶದ ಪೈಕಿಯಲ್ಲಿ ಕಾಣಿಸಿಕೊಂಡಿದ್ದು. ಯುನೈಟೆಡ್ ಅರಬ್ ಎಮಿರೇಟ್ಸ್ ಅಂದರೆ ಸಂಯುಕ್ತ ಆರೋಗ್ಯ ವಿಷಯಗಳ ಪೈಕಿಯಲ್ಲಿ ಕಾಣಿಸಿಕೊಳ್ಳುವಂತಹ ದುಬೈ ಅತ್ಯಂತ ಶ್ರೀಮಂತ ಸ್ಥಳಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ, ದುಬೈಗೆ (Dubai) ಬಂದು ಕೆಲಸ ಮಾಡಿ ಜೀವನದಲ್ಲಿ ಸೆಟಲ್ ಆಗಬೇಕು ಅನ್ನುವಂತಹ ಆಸೆಯಿಂದ ಬಹುತೇಕ ಹೆಚ್ಚಿನ ಭಾರತೀಯರು ಇಲ್ಲಿಗೆ ಬರ್ತಾರೆ.

 

Image Source: Hindustan Times

 

ಇನ್ನು ನಿನ್ನೆ ಅಂದ್ರೆ ಏಪ್ರಿಲ್ 16 ದಿನದ ಬಗ್ಗೆ ಮಾತನಾಡುವುದಾದರೆ ದುಬೈ (Dubai) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಳೆಯನ್ನು ಅಷ್ಟೊಂದು ಕಾಣೋದಿಲ್ಲ. ಅತ್ಯಂತ ಬರಡು ಪ್ರದೇಶದ ರೀತಿಯಲ್ಲಿ ಕಾಣಿಸಿಕೊಳ್ಳುವಂತಹ ದುಬೈನಲ್ಲಿ ಧಾರಾಕಾರ ಮಳೆ ಸುರಿದು ಬಂದಿತ್ತು ಅದು ಕೂಡ ಫೆಬ್ರವರಿ 17ಕ್ಕಿಂತ ಒಂದು ದಿನ ಮುಂಚೆ. ರಾಮನವಮಿಯ ಒಂದು ದಿನದ ಮುಂಚೆ ಇಡೀ ದುಬೈಗೆ ದುಬೈ ನೀರಿನಲ್ಲಿ ಮುಳುಗಿ ಹೋಗಿತ್ತು ಅಂದ್ರು ಕೂಡ ತಪ್ಪಾಗಲ್ಲ. ಧಾರಾಕಾರ ಮಳೆ ಸುರಿದು ಸಾಕಷ್ಟು ಮರ ರಸ್ತೆ ಹಾಗೂ ವಾಹನಗಳು ಕೂಡ ಹಾರಿಕೊಂಡು ಹೋಗಿದ್ವು.

 

Image Source: Bloomberg.com

 

ಇದರ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಡೆಗಳಲ್ಲಿ ಹರಿದಾಡುತ್ತಿವೆ. ಈ ರೀತಿ ಭೀಕರವಾಗಿ ಏರ್ಪೋರ್ಟ್ ನಲ್ಲಿ ಕೂಡ ನೀರು ತುಂಬಿರುವಂತಹ ಘಟನೆ ದುಬೈನಲ್ಲಿ ನಡೆದಿರುವುದು ಇದೇ ಪ್ರಥಮ ಎಂಬುದಾಗಿ ಕೂಡ ಸಾಕಷ್ಟು ಕಡೆಗಳಲ್ಲಿ ಕೇಳಿ ಬರುತ್ತಿದೆ.

advertisement

Leave A Reply

Your email address will not be published.