Karnataka Times
Trending Stories, Viral News, Gossips & Everything in Kannada

Gold Rate: ಭಾರತದಲ್ಲಿ IPL ಆರಂಭ ಆದಾಗ ಚಿನ್ನದ ಬೆಲೆ ಹೇಗಿತ್ತು ಗೊತ್ತಾ?

advertisement

ಚಿನ್ನಕ್ಕೆ ಅದರದೇ ಆದ ಮೌಲ್ಯ ಸದಾ ಕಾಲ ಇದ್ದೇ ಇರುತ್ತದೆ. ನಮ್ಮ ಕಷ್ಟ ಕಾಲಕ್ಕೆ ತುರ್ತು ಅಗತ್ಯದ ಸಂದರ್ಭದಲ್ಲಿ ಹಣ ಹೊಂದಾಣಿಕೆ ಮಾಡಲು ಸಾಧ್ಯ ಆಗದೆ ಇದ್ದರೆ ಆಗ ಮಕ್ಕಳ ಮದುವೆ, ಸಾಲದ ಮೊತ್ತ ಪಾವತಿಗೆ ಹಣ ಹೊಂದಾಣಿಕೆ ಮಾಡಲು ಚಿನ್ನದ (Gold) ಮೇಲೆ ಹಣ ಪಡೆಯಬಹುದು. ಅದೇ ರೀತಿ ತುರ್ತು ಅಗತ್ಯಕ್ಕೆ ಸಾಲ ಪಡೆಯಲು ಕೂಡ ಚಿನ್ನದ ಮೇಲೆ ಸಾಲ (Gold Loan) ಸೌಲಭ್ಯ ಸಿಗಲಿದೆ. ಚಿನ್ನ ಮಹಿಳೆಯರ ನೆಚ್ಚಿನ ಆಭರಣ ಆಗಿದ್ದು ಅದರ ಬೆಲೆ ಕಾಲದಿಂದ ಕಾಲಕ್ಕೆ ಬದಲಾವಣೆ ಆಗುತ್ತಲೇ ಇದೆ. ಹಾಗಾದರೆ ಭಾರತದಲ್ಲಿ IPL ಆರಂಭ ಆದಾಗ ಚಿನ್ನದ ಮೊತ್ತ ಹೇಗಿತ್ತು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

IPL ಹಿನ್ನೆಲೆ:

ಭಾರತದಲ್ಲಿ ಬಹುತೇಕ ಜನರ ನೆಚ್ಚಿನ ಆಟ ಎಂದರೆ ಕ್ರಿಕೆಟ್ ಎನ್ನಬಹುದು. ಕ್ರಿಕೆಟ್ ನಲ್ಲಿ ಭಾರತವು ಗಣನೀಯ ಸಾಧನೆ ಮಾಡುತ್ತಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ವಾಹಣತ್ವದಲ್ಲಿ ಭಾರತದಲ್ಲಿ ಮೊದಲ IPLಕ್ರಿಕೆಟ್ ಆವೃತ್ತಿ ಆರಂಭ ಆಗಿದೆ. 2008ರಂದು IPL ಆರಂಭ ಆಗಿ ಆ ವರ್ಷದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಜಯಭೇರಿ ಬಾರಿಸಿದೆ. ಈ ಅವಧಿಯಲ್ಲಿ ಚಿನ್ನದ ಬೆಲೆ (Gold Rate) ಎಷ್ಟು ಇದ್ದಿರ ಬಹುದು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗುತ್ತಿದ್ದು ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.

ಬೆಲೆ ಎಷ್ಟು ಇತ್ತು?

 

Image Source: Mint

 

advertisement

ಭಾರತದಲ್ಲಿ IPL ಆರಂಭ ಆಗಿದ್ದಾಗ ಚಿನ್ನದ ಬೆಲೆ (Gold Rate) ಕಡಿಮೆ ಇದೆ ಎಂದು ಹೇಳಬಹುದು. 2008ರಲ್ಲಿ ಬಂಗಾರದ ಬೆಲೆಯೂ 24 ಕ್ಯಾರೆಟ್ ಶುದ್ಧ ಚಿನ್ನಕ್ಕೆ 12,500ರೂಪಾಯಿ ಆಗಲಿದೆ. 10ಗ್ರಾಂ ಚಿನ್ನಕ್ಕೆ 12,500 ರೂಪಾಯಿ ಆಗಿದ್ದು ಆಗ ಶುದ್ಧ ಚಿನ್ನಕ್ಕೆ ಲಕ್ಷಾಂತರ ರೂಪಾಯಿನಲ್ಲೆ ಬೇಕಾದ ಡಿಸೈನ್ ನಲ್ಲಿ ಚಿನ್ನ ಖರೀದಿ ಮಾಡಬಹುದಾಗಿತ್ತು ಆದರೆ ಈಗ ಚಿನ್ನದ ಬೆಲೆ ತುಂಬಾ ದುಬಾರಿಯಾಗಿದ್ದು ಆಗಿದ್ದ ಬೆಲೆ ಕಂಡು ಎಲ್ಲರೂ ಮೂಕ ವಿಸ್ಮಿತರಾಗುತ್ತಿದ್ದಾರೆ.

ಈಗಿನ ಬೆಲೆ ಹೇಗಿದೆ?

 

Image Source: Firstpost

 

ಇಂದಿನ ಒಂದು ಚಿನ್ನದ ಬೆಲೆ (Gold Price) ಯೂ ಕಳೆದ ಕೆಲ ದಿನ ಕ್ಕಿಂತಲೂ ಕಡಿಮೆ ಇದೆ ಎನ್ನಬಹುದು. 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 75,805 ರೂಪಾಯಿ ಆಗಿರಲಿದೆ. 2008ರ IPL ಸಂದರ್ಭದಲ್ಲಿ 12,500 ಇತ್ತು ಈಗ 63,305 ರೂಪಾಯಿ ಬೆಲೆ ಏರಿಕೆ ಆಗಿರುವುದನ್ನು ಕಾಣಬಹುದು. ಇದು ಬರಿ ಚಿನ್ನದ ಮೊತ್ತ ವಾಗಿದ್ದು ವಿನ್ಯಾಸ ಮಾಡಿದ್ದಕ್ಕೆ ಮಜೂರಿ ವೆಚ್ಚ ಕೂಡ ಪಡೆಯಲಾಗುವುದು.

ಇಂದು ಸ್ವಲ್ಪ ಬೆಲೆ ಹೆಚ್ಚು?

22 ಕ್ಯಾರೆಟ್ ಚಿನ್ನ ಒಂದು ಗ್ರಾಂ ಗೆ 6,815ರೂಪಾಯಿ ಆಗಲಿದೆ . ಅದೇ ರೀತಿ ಶುದ್ಧ ಚಿನ್ನ 24ಕ್ಯಾರೆಟ್ ಒಂದು ಗ್ರಾಂ ಮೇಲೆ 7434 ರೂಪಾಯಿ ಒಂದು ಗ್ರಾಂ ಮೇಲೆ ಇದೆ. ಚಿನ್ನದ ಬೆಲೆ ನಿನ್ನೆಗಿಂತ 50ರೂಪಾಯಿ ಏರಿಕೆ ಆಗಿದೆ. ಒಟ್ಟಾರೆಯಾಗಿ 2008ರ ಬೆಲೆ ಈಗಿನ ಬೆಲೆಗಿಂತ ತುಂಬಾ ಕಮ್ಮಿ ಇದ್ದರೂ ಆಗ ಸಿಗುವ ವೇತನ ಕರೆನ್ಸಿ ಮೌಲ್ಯ ಕೂಡ ಏಕಪ್ರಕಾರವಾಗಿ ಇರಲಿದೆ ಎಂದು ಹೇಳಬಹುದು.

advertisement

Leave A Reply

Your email address will not be published.