Karnataka Times
Trending Stories, Viral News, Gossips & Everything in Kannada

Post Office: 7000 ರೂ ಕಟ್ಟಿ ಮೆಚುರಿಟಿ ಸಮಯದಲ್ಲಿ 12 ಲಕ್ಷ ಸಿಗುತ್ತೆ! ಪೋಸ್ಟ್ ಆಫೀಸಿನ ಈ ಯೋಜನೆಗೆ ಮುಗಿಬಿದ್ದ ಜನ

advertisement

ಉಳಿತಾಯ ಮಾಡಿ ದೀರ್ಘಾವಧಿಯಲ್ಲಿ ಲಕ್ಷಾಂತರ ರೂಪಾಯಿ ಕೂಡಿಡಬೇಕು ಎಂಬ ಆಸೆ ಇದ್ದವರೂ ಯಾವ ಯೋಜನೆಯಲ್ಲಿ ಹಣ ಉಳಿತಾಯ ಮಾಡುವುದು ಉತ್ತಮ ಯಾವ ಯೋಜನೆಯಲ್ಲಿ ನಿಮಗೆ ಅಧಿಕ ಲಾಭ ಸಿಗಲಿದೆ ಎಲ್ಲಿ ಸಿಗಲಿದೆ ಎಂಬುದನ್ನು ಮೊದಲೇ ತಿಳಿಯಬೇಕು. ಈ ನಿಟ್ಟಿನಲ್ಲಿ ಅಂಚೆ ಕಚೇರಿಯ ಉಳಿತಾಯ ಯೋಜನೆ (Post Office Saving Scheme) ಯಲ್ಲಿ ನೀವು ಹೂಡಿಕೆ ಮಾಡಿದರೆ ನಿಮಗೆ ಅಧಿಕ ಲಾಭ ಸಿಗುವ ಜೊತೆಗೆ ಲಕ್ಷಾಂತರ ರೂಪಾಯಿ ಹಣ ಕೂಡಲಿದೆ.

ಯಾವುದು ಈ ಯೋಜನೆ:

ಅಂಚೆ ಇಲಾಖೆಯ ಉಳಿತಾಯ ಯೋಜನೆ (Post Office Saving Scheme) ಯಲ್ಲಿ ಮಹಿಳೆಯರಿಗೆ ಮಕ್ಕಳಿಗೆ, ವಯೋವೃದ್ಧರಿಗೆ ಎಂದು ಪ್ರತ್ಯೇಕ ವಿಭಾಗದಿಂದ ಅನೇಕ ಉಳಿತಾಯ ಯೋಜನೆಯನ್ನು ನಾವು ಕಾಣಬಹುದು. ಭರವಸೆಯಲ್ಲಿ ಆದಾಯ ಸಿಗುತ್ತದೆ ಎಂಬ ಯೋಜನೆಗೆ ಹಣ ವಿನಿಯೋಗ ಮಾಡುವವರು RD ಮಾಡಿ ಬಳಿಕ ದೀರ್ಘಾವಧಿಯ ಆದಾಯ ಪಡೆಯಬಹುದು. ಇದರಲ್ಲಿ ಒಂದೇ ಮೊತ್ತವನ್ನು ಕಂತಿನ ಪ್ರಕಾರ ಕಟ್ಟುತ್ತಾ ಹೋದರೆ ದೀರ್ಘಾವಧಿಯಲ್ಲಿ ಹಣ ನಿಮಗೆ ಅಧಿಕ ಲಾಭ ತಂದುಕೊಡಲಿದೆ.

ಎಷ್ಟು ಅವಧಿ ಹೂಡಿಕೆ ಇದೆ:

 

Image Source: India.Com

 

advertisement

RD ಪ್ರಕಾರ ಹೂಡಿಕೆ ಮಾಡುವವರು ದೀರ್ಘಾವಧಿಯ ಲಾಭ ಪಡೆಯಲಿದ್ದಾರೆ. 1,2,3,5 ಹಾಗೂ 10 ವರ್ಷಗಳ ವರೆಗೂ ಗರಿಷ್ಠ ಮಟ್ಟದ RD ಹೂಡಿಕೆ ಮಾಡುವ ಅವಧಿ ಇರಲಿದೆ. ತ್ರೈಮಾಸಿಕದ ಅವಧಿಯಂತೆ ಇಲ್ಲಿ ಬಡ್ಡಿದರ ಸಿಗಲಿದೆ.  6.7% ನಷ್ಟು ಬಡ್ಡಿದರ ನಿಮಗೆ ಸಿಗಲಿದ್ದು 7000 ಮಾಸಿಕದಂತೆ 5 ವರ್ಷ ಕಟ್ಟಿದರೆ 5ಲಕ್ಷ ಹಾಗೇ 10 ವರ್ಷ ಕಟ್ಟಿದರೆ 12 ಲಕ್ಷ ರೂಪಾಯಿ ನಿಮಗೆ ಸಿಗಲಿದೆ.

ಉತ್ತಮ ಬಡ್ಡಿದರ ಇದೆ:

 

Image Source: TV9 Bharatvarsh

 

ನೀವು ಈ ಒಂದು RD ಪ್ರಕಾರ ಉಳಿತಾಯ ಮಾಡಿದರೆ 6.7% ನಂತೆ ನಿಮ್ಮ ಹಣದ ಮೇಲೆ ಬಡ್ಡಿದರ ಪಡೆಯಲಿದ್ದೀರಿ. ಅಂದರೆ ತಿಂಗಳಿಗೆ 7000 ಎಂದಾದರೆ 5 ವರ್ಷಕ್ಕೆ 4.20 ಲಕ್ಷ ರೂಪಾಯಿ ಆಗಲಿದೆ ಅದಕ್ಕೆ ಅಂಚೆ ಕಚೇರಿ RD ಸೌಲಭ್ಯದ ಅಡಿಯಲ್ಲಿ 79,564ರೂಪಾಯಿ ಬಡ್ಡಿ ಮೊತ್ತ ಸಿಗಲಿದೆ. ಹಾಗಾಗಿ ಎಲ್ಲ ಒಟ್ಟು ನಿಮಗೆ 5ವರ್ಷದ ಬಳಿಕ 4,99,564ರೂಪಾಯಿ ನಿಮಗೆ ಸಿಗಲಿದೆ. ಅದೇ ನೀವು 10 ವರ್ಷದ RD ಮಾಡಿದರೆ 11,95,962ರೂಪಾಯಿ ಸಿಗಲಿದೆ. ಹಾಗಾಗಿ ಉತ್ತಮ ಬಡ್ಡಿದರದ ಮೊತ್ತ ನಿಮ್ಮ ಹಣಕ್ಕೆ ಪ್ರತಿಯಾಗಿ ಸಿಗುತ್ತದೆ.

ಎಚ್ಚರಿಕೆ ಅಗತ್ಯ:

ಇತ್ತೀಚೆಗೆ ಹಣ ಉಳಿಸಿ ಡಬಲ್ ಮಾಡಲು ಅನೇಕ ಸಂಘ ಸಂಸ್ಥೆ ಖಾಸಗಿ ಮೂಲಗಳ ಮೂಲಕ ಅಧಿಕ ಬಡ್ಡಿದರದ ಆಮಿಷ ನೀಡಿ ಹಣ ಉಳಿತಾಯ ಮಾಡಲು ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸಲಾಗುವುದು ಆದರೆ ಇದು ಯಾವಾಗ ನಿಮಗೆ ಅಪಾಯ ತರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ನೀವು ಗೊತ್ತಿಲ್ಲದ ಸಂಘ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿದರೆ ಅಪಾಯ ಒಳಗಾಗುತ್ತೀರಿ ಹಾಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಭದ್ರತಾ ಸುರಕ್ಷತೆ ಇರುವ ಅಂಚೆ ಇಲಾಖೆ ಅಡಿಯಲ್ಲಿ RD ಯೋಜನೆ ಅಡಿ ಹೂಡಿಕೆ ಮಾಡಿದರೆ ನಿಮಗೆ ಹಣ ಸುರಕ್ಷವಾಗುವ ಜೊತೆಗೆ ಅಧಿಕ ಬಡ್ಡಿದರದ ಲಾಭ ಪ್ರಯೋಜನೆ ಸಿಗಲಿದೆ.

advertisement

Leave A Reply

Your email address will not be published.