Karnataka Times
Trending Stories, Viral News, Gossips & Everything in Kannada

Scholarship: 2nd PUC ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಇಲ್ಲಿ ಸಿಗಲಿದೆ 20000 ರೂ ಪ್ರೋತ್ಸಾಹ ಧನ

advertisement

ಇಂದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವಲ್ಲಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೆ ಬಂದಿದೆ.ಮಕ್ಕಳನ್ನು ಶಾಲೆಯತ್ತ ಬರ ಮಾಡಿಕೊಡಿಕೊಳ್ಳುವಲ್ಲಿ ಉಚಿತ ಸಮವಸ್ತ್ರ, ಬ್ಯಾಗ್, ಪುಸ್ತಕ ಇತ್ಯಾದಿಯನ್ನು ಶಿಕ್ಷಣ ಇಲಾಖೆಯು ನೀಡುತ್ತ ಬಂದಿದೆ. ಅದೇ ರೀತಿ ಆರ್ಥಿಕ ಬೆಂಬಲವನ್ನು ನೀಡುವ ಮೂಲಕ ಪ್ರೋತ್ಸಾಹ ಧನವನ್ನು ಕೂಡ ವಿತರಣೆ ಮಾಡುತ್ತಿದೆ.

ಕರ್ನಾಟಕ ಸರ್ಕಾರವು ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಹೆಚ್ಚು ಅಂಕ ಗಳಿಕೆ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡುತ್ತಿದೆ.

ಈ ನಿಗಮದಿಂದ ಸಿಗಲಿದೆ:

ಈ ವಿದ್ಯಾರ್ಥಿವೇತನವು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯ ಮೂಲಕ ನೀಡಲಿದ್ದು ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಹೆಚ್ಚು ಸಹಾಯಕವಾಗಲಿದೆ. ಈ ನಿಗಮದ ಮೂಲಕ ಡಿಪ್ಲೊಮಾ ಅಥವಾ ಪದವಿ ಕೋರ್ಸ್ ಗಳನ್ನು ಮಾಡಿದ ಎಸ್ಸಿ / ಎಸ್ಟಿ ವಿದ್ಯಾರ್ಥಿಗಳಿಗೆ 20,000 ರೂ.ಗಳಿಂದ 35,000 ರೂ.ಗಳವರೆಗೆ ವಿದ್ಯಾರ್ಥಿವೇತನವನ್ನು (Scholarship) ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ಒತ್ತನ್ನು ನೀಡುತ್ತಿದೆ. ವಿಧ್ಯಾರ್ಥಿಗಳು ಮೊದಲ ಪ್ರಯತ್ನದಲ್ಲಿ ಅಂದರೆ ಪಸ್ಟ್ ಕ್ಲಾಸ್ ನಲ್ಲಿ ತೇರ್ಗಡೆಯಾದರೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಈ ಷರತ್ತುಗಳು ಇರಲಿದೆ:

 

Image Source: News18

 

advertisement

ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಕೆಲವೊಂದು ಷರತ್ತುಗಳು ಮುಖ್ಯವಾಗಿದ್ದು ಇದನ್ನು ತಿಳಿದುಕೊಂಡು ಅರ್ಜಿ ಹಾಕಬೇಕು.

ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು 23- 2024 ರಲ್ಲಿ ಪಾಸಾದವರು ಮಾತ್ರ ಅರ್ಜಿ ಹಾಕಬಹುದು. ವಿದ್ಯಾರ್ಥಿಯು ಎಸ್ಸಿ,ಎಸ್ಟಿ ಯಾಗಿದ್ದರೆ ಅರ್ಜಿ ಹಾಕಬಹುದು.ಇನ್ನು ವಿಧ್ಯಾರ್ಥಿಯು ಕರ್ನಾಟಕ ರಾಜ್ಯದ ಯಾವುದೇ ಖಾಸಗಿ ಅಥವಾ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು. ವಿದ್ಯಾರ್ಥಿಯು ಪಸ್ಟ್ ಕ್ಲಾಸ್ ನಲ್ಲಿ ಉತ್ತೀರ್ಣರಾಗಿದ್ದರೆ ಮಾತ್ರ ಅರ್ಹರು.

 

Image Source: The Indian Express

 

ಈ ದಾಖಲೆಗಳು ಬೇಕು:

  • ಆಧಾರ ಕಾರ್ಡ್
  • ವಿದ್ಯಾರ್ಥಿಯ ಅಂಕಪಟ್ಟಿ
  • ಫೋಟೋ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ಇತ್ಯಾದಿ

ವಿದ್ಯಾರ್ಥಿಗಳು sw.kar.nic.in ಈ ಲಿಂಕ್ ಮೂಲಕ ಈ ಯೋಜನೆಗೆ ಅರ್ಜಿ ಹಾಕಬಹುದಾಗಿದ್ದು ಅನ್ ಲೈನ್ ಮೂಲಕ ಅರ್ಜಿ ಹಾಕಬಹುದು. ಹೆಚ್ಚಿನ ಮಾಹಿತಿಗೆ ಸಮಾಜ ಕಲ್ಯಾಣ ಇಲಾಖೆಯನ್ನು ಭೇಟಿ ಮಾಡುವ ಮೂಲಕ ಮಾಹಿತಿ ಪಡೆಯಬಹುದು.

advertisement

Leave A Reply

Your email address will not be published.