Karnataka Times
Trending Stories, Viral News, Gossips & Everything in Kannada

IPL 2024: ಚೆನ್ನೈ ಅಲ್ಲ ಈ ಬಾರಿ IPL ನಲ್ಲಿ ಸೆಮೀಸ್ ಗೆ ಬರುವ 4 ತಂಡ ತಿಳಿಸಿದ ಅಕ್ಷಯ್ ಕುಮಾರ್

advertisement

Akshay Kumar and Tiger Shroff predict these teams will make into playoffs: ಈ ಬಾರಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐಪಿಎಲ್ ನ 17ನೇ(IPL season 17) ಆವೃತ್ತಿ ಪ್ರಾರಂಭವಾಗಿದ್ದು ಬಹುತೇಕ ಅರ್ಧ ಟೂರ್ನಮೆಂಟ್ ಮುಗಿಯುವ ಹಂತಕ್ಕೆ ಬಂದಿದೆ. ಈ ಬಾರಿ ಪ್ರತಿಯೊಂದ ತಂಡಗಳು ಕೂಡ ಜಿದ್ದಾಜಿದ್ದಿನ ಪೈಪೋಟಿ ನೀಡುತ್ತಿದ್ದು ಮೊದಲು ಸೋತಂತಹ ತಂಡಗಳು ಕೂಡ ಈಗ ಮತ್ತೆ ಗೆಲುವಿನ ಲಯಕ್ಕೆ ಮರಳಿವೆ ಹಾಗೂ ಆರಂಭಿಕವಾಗಿ ಗೆದ್ದ ತಂಡಗಳು ಈಗ ಸೋಲನ್ನು ಕಾಣುತ್ತಿವೆ.

ಕಳೆದ ಬಾರಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹೇಂದ್ರ ಸಿಂಗ್ ಧೋನಿರವರ(MS Dhoni) ರವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಬಲಿಷ್ಠ ಗುಜರಾತ್ ತಂಡವನ್ನು ಸೋಲಿಸಿ ಐದನೇ ಬಾರಿಗೆ ಐಪಿಎಲ್ ಕಪ್ ಗೆದ್ದಿತ್ತು. ಇನ್ನು ಈ ಬಾರಿ ಕೂಡ ಆಡಿರುವಂತಹ ನಾಲ್ಕು ಪಂದ್ಯಗಳಲ್ಲಿ ಎರಡನ್ನು ಗೆದ್ದು ಎರಡನ್ನು ಸೋತಿದೆ. ಈ ಬಾರಿ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಐಪಿಎಲ್ ಪಂದ್ಯದಲ್ಲಿ ತಮ್ಮ ಸಿನಿಮಾ ಪ್ರಚಾರಕ್ಕಾಗಿ ಬಂದ ಅಕ್ಷಯ್ ಕುಮಾರ್ ಈ ಬಾರಿಯ ಪ್ಲೇ ಆಫ್ ಹಂತಕ್ಕೆ ಕ್ವಾಲಿಫೈ ಆಗುವ ನಾಲ್ಕು ನೆಚ್ಚಿನ ತಂಡಗಳ ಬಗ್ಗೆ ಹೇಳಿದ್ದು ಇಲ್ಲಿ ಚೆನ್ನೈ ತಂಡವನ್ನು ಅವರು ಆಯ್ಕೆ ಮಾಡಿಲ್ಲ. ಹಾಗಿದ್ದರೆ ಅವರು ಆಯ್ಕೆ ಮಾಡಿರೋ ತಂಡಗಳು ಯಾವುವು ಅನ್ನೋದನ್ನ ನೋಡೋಣ ಬನ್ನಿ.

The 17th season of the IPL is proving to be as unpredictable and thrilling as ever. With the league still wide open, Bollywood actors Akshay Kumar and Tiger Shroff's predictions add an interesting twist to the ongoing speculations.
Image Credit: moneycontrol

ಅಕ್ಷಯ್ ಕುಮಾರ್ ಪ್ರಕಾರ ಈ ನಾಲ್ಕು ತಂಡಗಳು ಪ್ಲೇ ಆಫ್ ಗೆ ತೇರ್ಗಡೆ ಆಗುತ್ತಂತೆ

advertisement

ಟೈಗರ್ ಶ್ರಾಫ್ ರವರ ಜೊತೆಗೆ ತಮ್ಮ ಮುಂದಿನ ಸಿನಿಮಾ ಆಗಿರುವಂತಹ ಬಡೇ ಮಿಯಾ ಚೋಟೆ ಮಿಯಾ ಸಿನಿಮಾದ ಪ್ರಮೋಶನ್ ಗಾಗಿ ಬಂದಂತಹ ಅಕ್ಷಯ್ ಕುಮಾರ್ ರವರು ಈ ಸಂದರ್ಭದಲ್ಲಿ ಕ್ರಿಕೆಟ್ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಇರ್ಫಾನ್ ಪಠಾಣ್(Irfan Pathan) ರವರು ಅಕ್ಷಯ್ ಕುಮಾರ್ ರವರಿಗೆ ಈ ಬಾರಿ ಪ್ಲೇ ಆಫ್ ಹಂತಕ್ಕೆ ಕ್ವಾಲಿಫೈ ಆಗುವಂತಹ ನಾಲ್ಕು ತಂಡಗಳನ್ನು ಹೆಸರಿಸಿ ಎಂಬುದಾಗಿ ಕೇಳಿದ್ದಾರೆ.

ಇದಕ್ಕೆ ಉತ್ತರ ನೀಡುತ್ತಾ ಅಕ್ಷಯ್ ಕುಮಾರ್ ಅವರು ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಆಶ್ಚರ್ಯ ಎನ್ನುವ ರೀತಿಯಲ್ಲಿ ಐದು ಬಾರಿ ಚಾಂಪಿಯನ್ ಆಗಿರುವಂತಹ ಹಾಗೂ ಧೋನಿಯವರ ನಾಯಕತ್ವದಲ್ಲಿ ಬಲಿಷ್ಠವಾಗಿ ಕಾಣಿಸಿಕೊಂಡಿರುವ ಚೆನ್ನೈ ತಂಡದ ಹೆಸರನ್ನು ಹೇಳಿಲ್ಲ.

The 17th season of the IPL is proving to be as unpredictable and thrilling as ever. With the league still wide open, Bollywood actors Akshay Kumar and Tiger Shroff's predictions add an interesting twist to the ongoing speculations.
Image Credit: moneycontrol

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗಾಗಲೇ ವೈರಲ್ ಆಗುತ್ತಿದ್ದು ಕೆಲವರು ಅಕ್ಷಯ್ ಕುಮಾರ್ ರವರ ಕ್ರಿಕೆಟ್ ಜ್ಞಾನದ ಬಗ್ಗೆ ಹಾಸ್ಯಾಸ್ಪದವಾಗಿ ಕೂಡ ಕಾಮೆಂಟ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಾರಿಯ ಚಾಂಪಿಯನ್ ಯಾರಾಗುತ್ತಾರೆ ಎನ್ನುವಂತಹ ಸತ್ಯವನ್ನ ಕಾಲವೇ ಉತ್ತರಿಸಲಿದೆ.

advertisement

Leave A Reply

Your email address will not be published.