Karnataka Times
Trending Stories, Viral News, Gossips & Everything in Kannada

Gold: ದೇಶದ ಯಾವುದೇ ಮೂಲೆಯಲ್ಲಿ ಚಿನ್ನ ಖರೀದಿಸುವುದಕ್ಕೆ ಹೋಗುವವರಿಗೆ ಹೊಸ ಸೂಚನೆ! ಈ ಕೆಲಸ ಮಾಡಿ

advertisement

ಚಿನ್ನ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಒಂದು ಲೋಹ ಈ ಜಗತ್ತಿನಲ್ಲಿ ಅತ್ಯಂತ ಬೆಲೆ ಬಾಳುತ್ತದೆ ಅಂದ್ರೆ ಖಂಡಿತವಾಗಿ ನಾವು ಅದನ್ನ ಚಿನ್ನ (Gold) ಅಂತ ಒಪ್ಪಿಕೊಳ್ಳಲೇಬೇಕು. ಕೆಲವರು ಚಿನ್ನವನ್ನು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಹಾಗೂ ತಮ್ಮ ಅಂದ ಅಲಂಕಾರವನ್ನು ತೋರಿಸಿ ಕೊಡುವುದಕ್ಕಾಗಿ ಖರೀದಿಸುತ್ತಾರೆ ಅವರು ಶ್ರೀಮಂತರು.

ಮಧ್ಯಮ ವರ್ಗದ ಜನರು ಚಿನ್ನವನ್ನು (Gold) ಅಲಂಕಾರಕ್ಕಾಗಿ ಖರೀದಿಸುತ್ತಾರೆ ನಿಜ ಆದರೆ ಅದಕ್ಕಿಂತಲೂ ಹೆಚ್ಚಾಗಿ ಅದನ್ನು ಹೂಡಿಕೆಯ ರೂಪದಲ್ಲಿ ಖರೀದಿ ಮಾಡಿರುತ್ತಾರೆ. ಯಾಕೆಂದರೆ ಚಿನ್ನದ ಪರಿಚಯ ಅದಾಗಿನಿಂದಲೂ ಕೂಡ ಅದರ ಬೆಲೆ ಏರುತ್ತಲೇ ಹೋಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಕ್ಷಯ ತೃತೀಯ ಕೂಡ ಹತ್ತಿರ ಬರ್ತಾ ಇದೆ.

ಈ ಸಂದರ್ಭದಲ್ಲಿ ಚಿನ್ನವನ್ನು ಖರೀದಿ (Gold Purchase) ಮಾಡುವಂತಹ ಮಹಿಳೆಯರು ಹಾಗೂ ಜನರಿಗೆ ಉಪಯುಕ್ತ ಕಾರಿ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ನೀಡಲು ಹೊರಟಿದ್ದೇವೆ. ಹೀಗಾಗಿ ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿ.

ಚಿನ್ನದ ಶುದ್ಧತೆಯನ್ನು ಕಂಡುಹಿಡಿಯುವುದು ಹೀಗೆ:

 

advertisement

Image Source: Mint

 

ಸಾಮಾನ್ಯವಾಗಿ ಚಿನ್ನದ ಅಂಗಡಿಗೆ ಹೋಗಿ ಚಿನ್ನವನ್ನು ಖರೀದಿ ಮಾಡುವಾಗ (Gold Purchase) ಅಲ್ಲಿನ ಸೇಲ್ಸ್ ಪರ್ಸನ್ ಗಳು ಹೇಳುವಂತಹ ಮಾತನ್ನ ಎಲ್ಲರೂ ಕೂಡ ನಂಬಿ ಬಿಡ್ತಾರೆ. ಅದು ಯಾವ ಶುದ್ಧತೆಯ ಚಿನ್ನ ಅನ್ನೋದು ಕೂಡ ಕೆಲವರಿಗೆ ತಿಳಿಯೋವಷ್ಟು ಜ್ಞಾನ ಇರೋದಿಲ್ಲ. ಅಂಥವರಿಗೆ ಇವತ್ತಿನ ಈ ಲೇಖನದ ಮೂಲಕ ನೀವು ಖರೀದಿ ಮಾಡುತ್ತಿರುವಂತಹ ಚಿನ್ನ ಯಾವ ಶುದ್ಧತೆಗೆ ಸೇರಿದ್ದು ಅನ್ನೋದನ್ನ ತಿಳಿಸುವ ಪ್ರಯತ್ನವನ್ನು ಮಾಡುತ್ತೇವೆ.

ಒಂದು ವೇಳೆ ನೀವು ಖರೀದಿ ಮಾಡುತ್ತಿರುವ ಚಿನ್ನ (Gold) ದಲ್ಲಿ 999 ಇದ್ದರೆ ಅದು 24 ಕ್ಯಾರೆಟ್ ಚಿನ್ನ, 916 ಇದ್ರೆ ಅದು 22 ಕ್ಯಾರೆಟ್ ಚಿನ್ನ, 875 ಇದ್ದರೆ 21 ಕ್ಯಾರೆಟ್ ಚಿನ್ನ, 833 ಇದ್ರೆ 20 ಕ್ಯಾರೆಟ್ ಚಿನ್ನ ಹಾಗೂ 750 ಇದ್ದರೆ 18 ಕ್ಯಾರೆಟ್ ಚಿನ್ನ ಎನ್ನುವುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದು. ಚಿನ್ನದ ಪರಿಶುದ್ಧತೆಯನ್ನು ತಿಳಿದುಕೊಳ್ಳುವಂತಹ ಅತ್ಯಂತ ಸುಲಭ ಮಾರ್ಗ ಇದಾಗಿದೆ.

 

Image Source: Business Today

 

ಇದರ ಜೊತೆಗೆ ನೀವು ಖರೀದಿ ಮಾಡುತ್ತಿರುವಂತಹ ಚಿನ್ನದ ಪ್ರಮಾಣಿಕೃತವನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ನೀವು ಆ ಚಿನ್ನದಲ್ಲಿರುವಂತಹ ಆರು ಡಿಜಿಟ್ನ ನಂಬರ್ ನ HUID ನಂಬರನ್ನು ನೀವು ಸರ್ಕಾರದಿಂದ ಲಾಂಚ್ ಆಗಿರುವಂತಹ BIS Care ಅಪ್ಲಿಕೇಶನ್ ಗೆ ಹೋಗಿ ಚೆಕ್ ಮಾಡಬಹುದಾಗಿದ್ದು ಅಪ್ಲಿಕೇಶನ್ ಓಪನ್ ಮಾಡಿದ ನಂತರ ನಿಮಗೆ Verify HUID ಎನ್ನುವಂತಹ ಆಪ್ಷನ್ ಕಾಣಿಸುತ್ತದೆ ಹಾಗೂ ಈ ಆರು ಡಿಜಿಟ್ ಅನ್ನು ನೀವು ಅಲ್ಲಿ ಸಬ್ಮಿಟ್ ಮಾಡಬೇಕಾಗಿರುತ್ತದೆ. ಈ ಮೂಲಕ ನೀವು ಖರೀದಿ ಮಾಡಿರುವಂತಹ ಚಿನ್ನದ ಪ್ರತಿಯೊಂದು ಮಾಹಿತಿಗಳನ್ನು ಕೂಡ ಅಲ್ಲಿ ಪಡೆದುಕೊಳ್ಳುತ್ತೀರಿ.

advertisement

Leave A Reply

Your email address will not be published.