Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಗೆ ಕೊನೆ ದಿನ ಹತ್ತಿರ! ಇದುವರೆಗೂ ಬುಕ್ ಮಾಡದವರಿಗೆ RTO ಹೊಸ ಸೂಚನೆ.

advertisement

ದೇಶದಾದ್ಯಂತ ಎಲ್ಲಾ ವಾಹನಗಳಲ್ಲಿಯೂ ಒಂದೇ ರೀತಿಯ ನಂಬರ್ ಪ್ಲೇಟ್ ಗಳನ್ನು ಬಳಕೆ ಮಾಡಬೇಕೆಂಬ ಕಾರಣದಿಂದ ಭಾರತ ಸರ್ಕಾರವು ಪ್ರತಿ ವಾಹನ ಮಾಲೀಕರನ್ನು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number Plate) ಹಾಕಿಸಿಕೊಳ್ಳುವಂತೆ ಫೆಬ್ರವರಿ ತಿಂಗಳ (February month)ವರೆಗೂ ಗಡುವು ನೀಡಿತ್ತು. ಆದರೆ ವಾಹನ ಮಾಲೀಕರ ಬೇಜವಾಬ್ದಾರಿ ತನದಿಂದಾಗಿ ಈ ಕಾರ್ಯ ಯಶಸ್ವಿಯಾಗಿ ಮೂಡಿ ಬರಲಿಲ್ಲ. ಹೀಗಾಗಿ ಮತ್ತೊಂದು ಅವಕಾಶ ನೀಡಿರುವ ಸರ್ಕಾರ ಗಡುವಿನ ದಿನಾಂಕವನ್ನು ಮೇ 31ಕ್ಕೇ ಮುಂದೂಡಿದ್ದಾರೆ.

ನೀವು ಇಂದಿಗೂ ಕೂಡ HSRP ನಂಬರ್ ಪ್ಲೇಟ್(HSRP Number Plate) ಅನ್ನು ಆನ್ಲೈನ್ ನಲ್ಲಿ ಬುಕ್ ಮಾಡಿಲ್ಲವೆಂದಾದರೆ ತಪ್ಪದೇ ಈ ಕೆಲ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಆನ್ಲೈನ್ ನಲ್ಲಿ ಬುಕ್ ಮಾಡುವುದು ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ HSRP ನಂಬರ್ ಪ್ಲೇಟ್ ನಲ್ಲಿ ಜನರಿಗೆ ಭಾರಿ ವಂಚನೆ ಮಾಡುತ್ತಿರುವ ಕೆಲ ಪ್ರಕರಣಗಳು ದಾಖಲಾಗಿದ್ದು, ಈ ಕುರಿತು ಸಾರಿಗೆ ಇಲಾಖೆ ಕರ್ನಾಟಕದ ಜನರಿಗೆ ಕೆಲ ಸೂಚನೆಯನ್ನು ನೀಡಿದ್ದಾರೆ.

 

Image Source: Paytm

 

ಅಂತರ್ಜಾಲದಲ್ಲಿ ನಕಲಿ ಲಿಂಕ್ಗಳನ್ನು ಹರಿಬಿಡುತ್ತಿರುವ ಕಿಂಗ್ ಪಿಂಗ್ಗಳು:

ಇಲಾಖೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಐಷಾರಾಮಿ ಹೋಟೆಲ್ ನಲ್ಲಿ ಅಡಿಗಿ ಕುಳಿತಿರುವಂತಹ ಸೈಬರ್ ಅಪರಾಧಿಗಳು (Cyber Criminals) ಈ ಎಲ್ಲಾ ಪ್ರಕರಣಗಳ ಕಿಂಗ್ ಪಿಂನ್ಗಳಾಗಿ ಕೆಲಸ ಮಾಡುತ್ತಿದ್ದು, ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ನೊಂದಣಿ ಪ್ರಕ್ರಿಯೆ (HSRP Number Plate Registration Process) ಯನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಹೌದು ಗೆಳೆಯರೇ ನಕಲಿ ಲಿಂಕ್ (Fake Links) ಗಳನ್ನು ಅಥವಾ ಕ್ಯೂಆರ್ ಕೋಡ್ ಗಳನ್ನು ಹರಿಬಿಟ್ಟು, ವಂಚನೆ ಮಾಡಿ ಜನರಿಂದ ಹಣ ಕೀಳುವ ಕೆಲಸ ಮಾಡುತ್ತಿದ್ದಾರೆ.

advertisement

QR ಕೋಡ್ ಸ್ಕ್ಯಾನ್ ಮಾಡಿದರೆ ಖಾತೆಯಲ್ಲಿರುವ ಹಣ ಸಂಪೂರ್ಣ ಖಾಲಿ!

ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಗಳನ್ನು ಆನ್ಲೈನಲ್ಲಿ ಬುಕ್ ಮಾಡಬೇಕಾಗಿರುವ ಕಾರಣ, ಅಂತರ್ಜಾಲದಲ್ಲಿ ಲಭ್ಯವಿರುವಂತಹ ಯಾವುದಾದರೂ ಒಂದು ಲಿಂಕ್ ಗೆ ತಮ್ಮ ದಾಖಲಾತಿಗಳನ್ನೆಲ್ಲ ನಮೂದಿಸಿ ಹಣ ಪಾವತಿ ಮಾಡುವಾಗ QR ಕೋಡ್ ಸ್ಕ್ಯಾನ್ ಮಾಡಿ ಬಿಡುತ್ತಾರೆ, ಅಂತಹ ಸಮಯದಲ್ಲಿ ಈ ಸೈಬರ್ ಅಪರಾಧಿಗಳು ವಾಹನ ಮಾಲೀಕರ ಖಾತೆಯಲ್ಲಿ ಇರುವ ಹಣವನ್ನೆಲ್ಲ ಸಂಪೂರ್ಣವಾಗಿ ಖಾಲಿ ಮಾಡಿಬಿಡುತ್ತಾರೆ.

ಮೋಸ ಹೋಗದಿರಲು ಸರ್ಕಾರದ ಈ ನಿಯಮವನ್ನು ಪಾಲಿಸಿ:

 

Image Source: ZigWheels.com

 

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ಗಳನ್ನು ನಿಮ್ಮ ವಾಹನಗಳಿಗೆ ಹಾಕಿಸುವ ಗಡುವಿನ ದಿನ ಹತ್ತಿರ ಬರುತ್ತಿದೆ. ಇದೇ ಆತುರದಿಂದ ಅಂತರ್ಜಾಲದಲ್ಲಿ ಲಭ್ಯವಿರುವಂತಹ ಯಾವ್ಯಾವುದೋ ಲಿಂಕ್ ಗಳನ್ನು ಕ್ಲಿಕ್ ಮಾಡುವ ಬದಲು ಸರ್ಕಾರದ ಅಧಿಕೃತ ವೆಬ್ಸೈಟ್ ಆದ SIAM ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್ ಔದ್ಯೋಗಿಕ ವೆಬ್ಸೈಟ್ ಗೆ ಭೇಟಿ ನೀಡಿ. ಕೇಳಲಾಗುವಂತಹ ದಾಖಲಾತಿಗಳನ್ನೆಲ್ಲ ನಮೂದಿಸಿ, ನಿಗದಿತ ಮೊತ್ತದ ಹಣವನ್ನು ಪಾವತಿ ಮಾಡಿದರೆ ಕೆಲವೇ ಕೆಲವು ದಿನಗಳಲ್ಲಿ HSRP ನಂಬರ್ ಪ್ಲೇಟನ್ನು ನಿಮ್ಮ ಮನೆಗೆ ಅಥವಾ ಸಮೀಪವಿರುವ ಶೋರೂಮ್ಗೆ ಡೆಲಿವರಿ (Showroom Delivery) ಮಾಡಿಸಿಕೊಳ್ಳಬಹುದು.

ಆನಂತರ ನಿಮ್ಮ ವಾಹನಕ್ಕೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟನ್ನು ಹಾಕಿಸಿಕೊಂಡು ದಂಡ ಕಟ್ಟುವುದರಿಂದ ಪಾರಾಗಬಹುದು. ಆನ್ಲೈನ್ ನಲ್ಲಿ HSRP ನಂಬರ್ ಪ್ಲೇಟ್ಗಳನ್ನು ಬುಕ್ ಮಾಡುವುದು ಸಾಧ್ಯವಾಗದೇ ಹೋದರೆ ಆರ್ ಟಿ ಓ ಕಚೇರಿ (RTO office) ಅಥವಾ ಶೋರೂಂಗೆ ಭೇಟಿ ನೀಡಿ HSRP ನಂಬರ್ ಪ್ಲೇಟ್ ಅನ್ನು ಕೇಳಿ ಪಡೆಯುವ ಅವಕಾಶವಿದೆ.

advertisement

Leave A Reply

Your email address will not be published.