Karnataka Times
Trending Stories, Viral News, Gossips & Everything in Kannada

Supreme Court: ಹೆಂಡತಿಯ ಬಂಗಾರದ ಕುರಿತು ಬೆಳ್ಳಂಬೆಳಿಗ್ಗೆ ಕೋರ್ಟ್ ಹೊಸ ತೀರ್ಪು!

advertisement

ಸ್ನೇಹಿತರೆ, ಆಭರಣಗಳು ಮಹಿಳೆಯರ ಆಸ್ತಿ ಆಗಿರುತ್ತದೆ ಅದನ್ನು ಆಕೆ ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಹಾಗೂ ಆಭರಣಗಳು ಎಂದಿಗೂ ಗಂಡನೊಂದಿಗಿನ ಜಂಟಿ ಆಸ್ತಿಯಾಗಲು (Joint Property) ಸಾಧ್ಯವಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ (Supreme Court) ನೀಡಿದೆ. ಅಲ್ಲದೆ ಹೆಂಡತಿಯ ಒಡವೆ ಆಭರಣಗಳನ್ನು (Jewellery) ಪತಿ ತನ್ನ ಕಷ್ಟಕ್ಕೆಂದು ಅಡವಿಟ್ಟು, ಆ ಹಣವನ್ನು ಬಳಸಿಕೊಂಡರೆ ಅದನ್ನು ಸ್ವಲ್ಪ ಕಾಲಾವಧಿಯೊಳಗೆ ಬಿಡಿಸಿ ವಾಪಸ್ ಕೊಡಬೇಕೆಂಬ ಕಟ್ಟುನಿಟ್ಟದ ಆದೇಶವನ್ನು ಹೊರಡಿಸಿದೆ.

ಪತಿ ತನ್ನ ಆಭರಣಗಳನ್ನು ಬಳಸಿಕೊಂಡಿದ್ದಕ್ಕೆ ಮಹಿಳೆ ದೂರು:

 

Image Source: Jane Madell

 

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ (Sanjeev Khanna) ಮತ್ತು ದೀಪಂಕರ್ ದತ್ತ (Dipankar Dutta) ಅವರ ನ್ಯಾಯ ಪೀಠವು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ವಿಶೇಷ ಆದೇಶವೊಂದನ್ನು ಹೊರಡಿಸಿದ್ದಾರೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದಷ್ಟೇ 50 ವರ್ಷದ ಮಹಿಳೆಯು ತನ್ನ ಆಭರಣಗಳನ್ನೆಲ್ಲ ಪತಿ ಬಳಸಿಕೊಂಡು ಅದನ್ನು ವಾಪಸ್ ಹಿಂದಿರುಗಿಸದಾ ಕಾರಣ ಗಂಡನ ಮೇಲೆ ದೂರನ್ನು ದಾಖಲು ಮಾಡಿದ್ದಳು.

advertisement

ಮಹಿಳೆಯ ಪ್ರಕಾರ, ಆಕೆ ತನ್ನ ತವರು ಮನೆಯಿಂದ ತಂದಿದ್ದಂತಹ ಎಲ್ಲಾ ಒಡವೆ ಆಭರಣಗಳನ್ನು ಪತಿಯು ಮೊದಲ ರಾತ್ರಿಯೇ ತನ್ನ ವಶಕ್ಕೆ ಪಡೆದುಕೊಂಡು ಸುರಕ್ಷತೆಯ ದೃಷ್ಟಿಯಿಂದ ತನ್ನ ತಾಯಿಗೆ ಅದನ್ನು ಒಪ್ಪಿಸಿದ್ದನು. ಕಾಲಕ್ರಮೇಣ ಹೆಂಡತಿಯ ಅನುಮತಿ ಪಡೆಯದೆ ಪತಿ ಮತ್ತು ತಾಯಿ ಇಬ್ಬರು ಎಲ್ಲಾ ಆಭರಣಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಕಾರಣದಿಂದ ಕೌಟುಂಬಿಕ ನ್ಯಾಯಾಲಯ (Family Court) ದಲ್ಲಿ ಪತ್ನಿ ತನ್ನ ಗಂಡ ಹಾಗೂ ಅತ್ತೆಯ ವಿರುದ್ಧ ತನಗೆ ಉಂಟಾದ ನಷ್ಟವನ್ನು ಮರುಪಾವತಿಸಲು ಪ್ರಕರಣ ದಾಖಲಿಸಿದ್ದಾರೆ.

ಸುಪ್ರೀಂ ಕೋರ್ಟ್ನ ಮಾತ್ರ ನಿರ್ಧಾರ:

 

Image Source: Amar Ujala

 

ಈ ಪ್ರಕರಣದ ಕುರಿತು ತನಿಖೆ ನಡೆಸಿ, ಮದುವೆಯ ಸಮಯದಲ್ಲಿ ಅಥವಾ ವಿದಾಯ ಹೇಳುವ ಸಮಯದಲ್ಲಿ ತನ್ನ ತವರು ಮನೆಯಿಂದ ಮಹಿಳೆಗೆ ಉಡುಗೊರೆಯಾಗಿ ನೀಡಲಾದ ಆಸ್ತಿಗಳು (Property) ಅವಳ ಸ್ತ್ರೀ ಧನ್ ಆಸ್ತಿ (Stridhan Property) ಗಳಾಗಿರುತ್ತವೆ. ಇದರ ಮೇಲೆ ಪತಿಗೆ ಯಾವುದೇ ನಿಯಂತ್ರಣವಿರುವುದಿಲ್ಲ. ಆದರೆ ಪತಿ ತನ್ನ ಸಂಕಷ್ಟದ ಸಮಯದಲ್ಲಿ ಅದನ್ನು ಬಳಸಬಹುದು, ಅದೇನೇ ಇದ್ದರೂ ಅವನು ಹೆಂಡತಿಗೆ ಅದರ ಮೌಲ್ಯವನ್ನು ಪುನಃ ಸ್ಥಾಪಿಸಲು ನೈತಿಕ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.

ಆದರೆ ಈ ಪ್ರಕರಣದಲ್ಲಿ, ಹೆಂಡತಿಯ ಎಲ್ಲಾ ಆಭರಣಗಳನ್ನು (Jewellery) ಕಸಿದುಕೊಂಡು, ಹಿಂದಿರುಗಿಸದ ಕಾರಣ ಪತಿಗೆ 25 ಲಕ್ಷಗಳ ಅರ್ಥಿಕ ಪರಿಹಾರವನ್ನು ಪಾವತಿಸುವಂತೆ ಆದೇಶ ನೀಡಿದೆ. ಪತ್ನಿಗೆ 50 ವರ್ಷ ವಯಸ್ಸಾಗಿರುವುದರಿಂದ ಆಕೆಯ ಜೀವನದ ವೆಚ್ಚ, ಸಮಾನತೆ ಹಾಗೂ ನ್ಯಾಯದ ಹಿತದೃಷ್ಟಿಯಿಂದ ಕೋರ್ಟ್ ಈ ಆದೇಶವನ್ನು ಜಾರಿಗೊಳಿಸಿದೆ.

advertisement

Leave A Reply

Your email address will not be published.