Karnataka Times
Trending Stories, Viral News, Gossips & Everything in Kannada

Property Purchase: ಎಷ್ಟೇ ಕೋಟಿ ಕೊಟ್ಟು ಆಸ್ತಿ ಖರೀದಿ ಮಾಡಿ ರಿಜಿಸ್ಟರ್ ಬಂದ್ರೆ ಮಾತ್ರ ಸಾಲಲ್ಲ! ಈ ಕೆಲಸ ಕಡ್ಡಾಯ ಮಾಡಿದ ಸರ್ಕಾರ

advertisement

ಇಂದು ಆಸ್ತಿ,ಅಂತಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೂಡಿಕೆ ಅಂತ ಬಂದಾಗ ನಾವು ಜಾಗ ಖರೀದಿ ಮಾಡುವ ಮೂಲಕವು ಒತ್ತು ನೀಡುತ್ತೇವೆ. ಯಾಕಂದ್ರೆ ಇಂದು ಆಸ್ತಿ ಖರೀದಿಗೆ ಹೆಚ್ಚಿನ ಮೌಲ್ಯ ಇರಲಿದ್ದು ಹಾಗಾಗಿ ಬೇಡಿಕೆಯು ಹೆಚ್ಚು ಇದೆ. ಅದರಲ್ಲೂ ನಗರ ಪ್ರದೇಶದಲ್ಲಿ ಆಸ್ತಿ ಖರೀದಿ (Property Purchase) ಗೆ ಹೆಚ್ಚಿನ ಜನರು ಆಸಕ್ತಿ ತೋರುತ್ತಿದ್ದು ಆಸ್ತಿ ನಿಮ್ಮ ಹೆಸರಿಗೆ ಮಾಡಿಕೊಳ್ಳುವಾಗ ಕೆಲವೊಂದು ನಿಯಮಗಳನ್ನು ಕೂಡ ಪಾಲಿಸಬೇಕಾಗುತ್ತದೆ.‌ಇನ್ನು ಆಸ್ತಿ‌ ರಿಜಿಸ್ಟಾರ್ (Property Register) ಆಯಿತು ನಮ್ಮದೆ ಪಾಲಾಯಿತು ಎಂದು ಹಾಗೇ ಕುಳಿತುಕೊಳ್ಳುವಂತಿಲ್ಲ ಆ ಬಳಿಕವು ಈ ಪ್ರಕ್ರಿಯೆ ಕಡ್ಡಾಯ ವಾಗಿದ್ದು ಯಾವುದು ಈ ನಿಯಮ ಎಂಬುದನ್ನು ತಿಳಿದುಕೊಳ್ಳಿ.

ಈ ಬಗ್ಗೆ ತಿಳಿದುಕೊಳ್ಳಿ:

ನೀವು ಜಮೀನು ಅನ್ನು ಖರೀದಿ (Property Purchase) ಮಾಡಿದ ನಂತರದಲ್ಲಿ ಅದನ್ನು ನೋಂದಣಿ ಮಾಡಿಸುವ ಮುನ್ನ ಅಳತೆ ಮಾಡಿಸಿ ಎಷ್ಟು ಜಾಗ ನಿಮ್ಮ ದಾಗಲಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ನೀವು ಖರೀದಿ ಮಾಡುವ ಆಸ್ತಿಯ ಅಳತೆ, ದಿಕ್ಕುಗಳಲ್ಲಿ ‌ಯಾರ ಪ್ರಾಪರ್ಟಿ ಇದೆ, ಆಸ್ತಿಯ ದಾಖಲೆಯಲ್ಲಿ‌ಯಾರ ಹೆಸರಿದೆ ಎಂಬುದನ್ನು ಪರಿಶೀಲನೆ ಮಾಡುವುದು ಅಗತ್ಯವಾಗಿದೆ.

 

Image Source: India Housing

 

ಈ ನಿಯಮ‌ ಕಡ್ಡಾಯ:

advertisement

ಆಸ್ತಿಯ ಮಾರಾಟ (Property Sale) ಎನ್ನುವುದು ಆಸ್ತಿ ವರ್ಗಾವಣೆಯನ್ನು ದೃಢೀಕರಿಸುತ್ತದೆ. ಆಸ್ತಿ ಸ್ವಾಧೀನ ಪ್ರಕ್ರಿಯೆಯಲ್ಲಿ ಸೇಲ್ ಡೀಲ್ ಬಹಳ ಪ್ರಮುಖ್ಯ ಪಾತ್ರ ವಹಿಸಲಿದ್ದು ಕೇವಲ ಆಸ್ತಿ ನಮ್ಮ ಹೆಸರಿನಲ್ಲಿ ಆದರೆ ಸಾಲದು, ಸೇಲ್ ಡಿಲ್ ಬಗ್ಗೆಯು ಖಚಿತ ಪಡಿಸಬೇಕು.

 

Image Source: Real Estate India

 

ಇದು ಒಂದು ಪ್ರಮುಖ ದಾಖಲೆಯಾಗಿದ್ದು ಮಾರಾಟವಾದ ಆಸ್ತಿಯ ಸಂಪೂರ್ಣ ವಿವರದ ಬಗ್ಗೆ ಇದು ತಿಳಿಸುತ್ತದೆ. ನೀವು ದಾಖಲೆಯಲ್ಲಿ ನಮ‌್ಮ ಹೆಸರು ಬಂದಿದೆ, ನಮ್ಮ ಪಾಲಿಗೆ ಆಸ್ತಿ (Property) ಆಗಿದೆ ಅಂದು ಕೊಂಡರೆ ಸಾಲದು ಆಸ್ತಿಯ ಒಡೆತನವನ್ನು ಮಾರಾಟಗಾರನು‌ ತನಗೆ ಹಸ್ತಾಂತರಿಸುವ ಪ್ರಕ್ತಿಯೆ ಪೂರ್ಣಗೊಳ್ಳಬೇಕು. ಸೇಲ್ ಡೀಲ್ ಅನ್ನು ನೀವು ಖಚಿತ ಪಡಿಸಬೇಕು. ಅದರ ಸಂಪೂರ್ಣ ದಾಖಲೆಗಳು ನಿಮಗೆ ಸಿಗಬೇಕು.

ಆಕ್ಷೇಪಣೆ ಬಗ್ಗೆ ಖಚಿತಪಡಿಸಿಕೊಳ್ಳಿ:

ಇಂದು ಆಸ್ತಿಯಲ್ಲಿ ಅಧಿಕಾರವೇ ಇಲ್ಲದ ವ್ಯಕ್ತಿಗಳು ಕೂಡ ಆಸ್ತಿ ಮಾರಾಟ ಮಾಡುವಂಥ ಸನ್ನಿವೇಶ ಗಳು ಉಂಟಾಗುತ್ತಿದೆ.‌ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಿ. ನೀವು ಖರೀದಿ ಮಾಡುವ ಆಸ್ತಿಯ ಬಗ್ಗೆ ಯಾವುದೇ ವ್ಯಕ್ತಿಯ ‌ಆಕ್ಷೇಪಣೆ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.ಇನ್ನು ಈ ಪ್ರಾಪರ್ಟಿ ಎಷ್ಟು ಜನರಿಂದ ಎಷ್ಟು ಜನಕ್ಕೆ ಸೇಲ್ ಆಗಿದೆ? ಇದರ ಮುಖ್ಯ ವ್ಯಕ್ತಿ ಯಾರು? ಯಾರ ಹೆಸರಿನಲ್ಲಿ ಮೊದಲು ಇತ್ತು ಎನ್ನುವ ಡೇಟಾ ಪರಿಶೀಲನೆ ಮಾಡಿ. ಯಾಕಂದ್ರೆ ನಿಮ್ಮ ಆಸ್ತಿ ರಿಜಿಸ್ಟರ್ ಆಗುವ ಸಂದರ್ಭದಲ್ಲಿ ಎಲ್ಲ ಇದರ ಮೂಲ ದಾಖಲೆಗಳು ಇರಬೇಕು.

advertisement

Leave A Reply

Your email address will not be published.