Karnataka Times
Trending Stories, Viral News, Gossips & Everything in Kannada

Car Loan: ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಲು ಕಡಿಮೆ ಬಡ್ಡಿಯಲ್ಲಿ ಈ 3 ಬ್ಯಾಂಕ್ ಗಳು ಸಾಲ ನೀಡುತ್ತವೆ!

advertisement

ಇಂದು ಪ್ರತಿಯೊಬ್ಬ ರಿಗೂ ವಾಹನದ ಅವಶ್ಯಕತೆ ಇದ್ದೆ ಇರುತ್ತದೆ. ಹಾಗಾಗಿ ಸಾಲ ಮಾಡಿಯಾದರೂ ವಾಹನ ಖರೀದಿಗೆ ಆಸಕ್ತಿ ವಹಿಸುತ್ತಾರೆ.ಇಂದು ಎಲೆಕ್ಟ್ರಿಕ್ ವಾಹನ ಖರೀದಿಗೆ ಸರಕಾರ ಹಲವು ರೀತಿಯ ಅವಕಾಶ ನೀಡುತ್ತಿದ್ದು ಅದೇ ರೀತಿ ಕೆಲವೊಂದು ಬ್ಯಾಂಕ್ ಗಳು ಕೂಡ ಕಡಿಮೆ ಬಡ್ಡಿದರ ದಲ್ಲಿ ಸಾಲ(Loan) ಸೌಲಭ್ಯ ವನ್ನು ನೀಡುತ್ತಿದೆ.

ಉಳಿತಾಯ ಹೆಚ್ಚಳ

ಇಂದು ಹೆಚ್ಚಿನ‌ ಜನರು ಇಲೆಕ್ಟ್ರಿಕ್ ವಾಹನದತ್ತ ಮುಖ ಮಾಡಿದ್ದಾರೆ. ಯಾಕಂದ್ರೆ ಈ ವಾಹನಗಳಿಂದ ಹೆಚ್ಚಿನ ಉಳಿತಾಯ ಕೂಡ ಆಗಲಿದೆ.ಅದರ ಜೊತೆ ಪರಿಸರ ಸಂರಕ್ಷಣೆಗೂ ಒತ್ತು ನೀಡಿದಂತೆ ಆಗುತ್ತದೆ.ಇಂದು ಆಟೋಮೊಬೈಲ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರ ಜೊತೆ ಇವಿ ಮಾರುಕಟ್ಟೆ ಕೂಡ ತುಂಬಾನೇ ಎತ್ತರಕ್ಕೆ ಬೆಳೆಯುತ್ತದೆ.

ಸುರಕ್ಷತಾ ಪರೀಕ್ಷೆ

advertisement

ಅದೆ ರೀತಿ ಇಲೆಕ್ಟ್ರಾನಿಕ್ ವಾಹನಗಳ ಸುರಕ್ಷತೆಗಾಹಿ ಕೈಗಾರಿಕೆಗಳ ಸಚಿವಾಲಯ ಆಟೋಮೊಬೈಲ್ ಕಂಪನಿಗಳಿಗೆ ಸುರಕ್ಷತಾ ಪರೀಕ್ಷೆಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಇಂದು ಸರಕಾರ ತೆರಿಗೆ ವಿನಾಯಿತಿ ಯೊಂದಿಗೆ ಇತರ ಪ್ರೋತ್ಸಾಹಗಳನ್ನು ಸಹ ನೀಡುತ್ತಿದೆ. ಇದೀಗ ಇಲೆಕ್ಟ್ರಿಕ್ ವಾಹನವನ್ನು ಖರೀದಿಸಲು ನೀವು ಕಾರ್ ಲೋನಿನ (Car Loan) ಮೇಲೆ ಕಡಿಮೆ ಬಡ್ಡಿ ದರಗಳ ಮೂಲಕ ಖರೀದಿ ಮಾಡಬಹುದು.

ಈ ಬ್ಯಾಂಕ್ ನಲ್ಲಿ ಅನ್ವಯ

  • ಎಸ್ ಬಿ ಐ (SBI) ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಕಾರು ಸಾಲಕ್ಕೆ ಅನ್ವಯವಾಗುವ ಬಡ್ಡಿದರದಲ್ಲಿ 25 BP ಗಳ ಹೆಚ್ಚಿನ ರಿಯಾಯಿತಿಯನ್ನು ನೀಡುವ ಮೂಲಕ ಇಲ್ಲಿ ಸಾಲಕ್ಕೆ ಉತ್ತಮ ಆಯ್ಕೆ.‌ ಅದೇ ರೀತಿ SBI ಗ್ರೀನ್ ಕಾರ್ ಲೋನ್ 8.75% ರಿಂದ 9.45% ವರೆಗೆ ಕೊಡುಗೆ ನೀಡಿದೆ ಪ್ರಸ್ತುತ ವಾಹನ ಸಾಲ ನೀಡುವ ಯೋಜನೆಗಿಂತ 20 ಬೇಸಿಸ್ ಪಾಯಿಂಟ್‌ಗಳವರೆಗೆ ಕಡಿಮೆ ದರದಲ್ಲಿ ಸಾಲವನ್ನು ನೀಡಲಿದೆ.
  • ಅದೇ ರೀತಿ ಯೂನಿಯನ್ ಬ್ಯಾಂಕ್  (Union Bank) ನಲ್ಲೂ ಕಾರು ಖರೀದಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತದೆ. ಇಲ್ಲಿ ಬಡ್ಡಿ ದರವು ಕ್ರೆಡಿಟ್ ಸ್ಕೋರ್ (Credit Score) ಅನ್ನು ಅವಲಂಬಿಸಿ ಬದಲಾವಣೆ ಮಾಡಲಾಗುತ್ತದೆ.
  • ಬ್ಯಾಂಕ್ ಆಫ್ ಮಹಾರಾಷ್ಟ್ರ (Bank Of Maharashtra) ವು ಎಲೆಕ್ಟ್ರಿಕ್ ಗ್ರೀನ್ ಕಾರ್ ಲೋನ್ ಯೋಜನೆ ಮೂಲಕ ಸಂಸ್ಕರಣಾ ಶುಲ್ಕ ಮತ್ತು ದಾಖಲಾತಿ ಶುಲ್ಕಗಳನ್ನು ವಿಧಿಸದೇ ಸಾಲ ನೀಡುತ್ತದೆ. ಅದೇ ರೀತಿ ಈ ಬ್ಯಾಂಕ್ 0.25% ರಿಯಾಯಿತಿಯನ್ನು ಸಹ ನೀಡಲಿದೆ. CIBIL ಸ್ಕೋರ್‌ಗೆ ಅನುಗುಣವಾಗಿ 8.8% ರಿಂದ 13% ವರೆಗೆ ಬದಲಾಗುತ್ತದೆ.

advertisement

Leave A Reply

Your email address will not be published.