PF Balance: ಕೇವಲ ಒಂದೇ ಒಂದು ಸಂದೇಶದಿಂದ ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ತಿಳಿದುಕೊಳ್ಳಿ!
ಸಾಮಾನ್ಯವಾಗಿ ಉದ್ಯೋಗದಲ್ಲಿ ಇರುವವರಿಗೆ ಪಿಎಫ್ ಖಾತೆ (PF Account) ಯನ್ನು ಕೊಡಲಾಗುತ್ತದೆ. ಉದ್ಯೋಗಸ್ಥರ ಸಂಬಳದಲ್ಲಿ ಒಂದು ನಿಗದಿತ ಮೊತ್ತವನ್ನು ಕಡಿತಗೊಳಿಸಿ ಮಾಡಲಾಗುತ್ತದೆ. ನಿವೃತ್ತಿಯ ನಂತರ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ಹಣವನ್ನು ಪಡೆಯಬಹುದು. ಒಂದೇ ವೇಳೆ ನಿಮ್ಮ ಪಿ ಎಫ್ ಖಾತೆ (PF Account) ಯಲ್ಲಿ ಎಷ್ಟು ಬ್ಯಾಲೆನ್ಸ್ ಇರಬಹುದು ಎಂದು ತಿಳಿದುಕೊಳ್ಳಲು ನೀವು ಬಯಸಿದರೆ, ಬ್ಯಾಂಕ್ ಗೆ ಹೋಗದೆ, ಯಾವುದೇ ಇಂಟರ್ನೆಟ್ ಸಹಾಯವಿಲ್ಲದೆ ಮನೆಯಲ್ಲಿಯೇ ಕುಳಿತು ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
PF Account ಯ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ನೀವು ಬ್ಯಾಂಕಿಗೆ ಹೋಗದೆ ಅಥವಾ ಇಂಟರ್ನೆಟ್ ಸಹಾಯವು ಇಲ್ಲದೆ ಕೇವಲ ಒಂದೇ ಒಂದು ಮಿಸ್ ಕಾಲ್ (Miss Call) ಕೊಡುವುದರ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದು. ಕೇವಲ ಒಂದು ಸಂದೇಶದ ಮೂಲಕ ಪಿ ಎಫ್ ನಲ್ಲಿ ಎಷ್ಟು ಹಣ ಇದೆ ಎನ್ನುವ ಮಾಹಿತಿ ನಿಮಗೆ ಲಭ್ಯವಾಗುತ್ತದೆ.
ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು, ಮೊದಲು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ EPFOHO ಎಂದು ಟೈಪ್ ಮಾಡಿ. ಬಳಿಕ ನಿಮ್ಮ UAN ಸಂಖ್ಯೆಯನ್ನು 7738299899 ಈ ಸಂಖ್ಯೆಗೆ ಕಳುಹಿಸಿ.
ಮಿಸ್ಟ್ ಕಾಲ್ ಕೊಟ್ಟು ಪಿ ಎಫ್ ಖಾತೆ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಕ್ಯೆಯಿಂದ 9966044425 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ. ಈಗ ನಿಮ್ಮ ಪಿ ಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎನ್ನುವ ಮಾಹಿತಿಯನ್ನು ನಿಮ್ಮ ಮೊಬೈಲ್ಗೆ ಸಂದೇಶದ ಮೂಲಕ ಕಳುಹಿಸಲಾಗುತ್ತದೆ.
ಉಮಂಗ್ ಆಪ್ ಮೂಲಕ ಪಿ ಎಫ್ ಬ್ಯಾಲೆನ್ಸ್ ಚೆಕ್ ಮಾಡಿ:
ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ, ಉಮಂಗ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ಈಗ ಪಿಎಫ್ ಬ್ಯಾಲೆನ್ಸ್ (PF Balance) ಪರಿಶೀಲಿಸಲು ಈ ಅಪ್ಲಿಕೇಶನ್ ನಲ್ಲಿ ನಿಮ್ಮ ಪಾಸ್ ಬುಕ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಬಳಿಕ UAN ಸಂಖ್ಯೆಯನ್ನು ಹಾಕಿ. ಅದನ್ನು ಭರ್ತಿ ಮಾಡಿ. ಈಗ ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎನ್ನುವುದನ್ನು ಚೆಕ್ ಮಾಡಬಹುದು.
ಪಿಎಫ್ ಹಣಕ್ಕೆ ಸರ್ಕಾರದಿಂದ ಸಿಗುತ್ತೆ ಬಡ್ಡಿ:
ಪಿಎಫ್ ಖಾತೆಯಲ್ಲಿ ಜಮಾ ಹಾಗೂ ಹಣಕ್ಕೆ ಸರ್ಕಾರದಿಂದ ಬಡ್ಡಿ ಕೂಡ ಕಾಲಕಾಲಕ್ಕೆ ಸಿಗುತ್ತದೆ. ಹಾಗಾಗಿ ನೀವು ಉದ್ಯೋಗಸ್ಥರಾಗಿದ್ರೆ ಪಿಎಫ್ ಖಾತೆಯ ಮೂಲಕ ನಿವೃತ್ತಿಯ ಸಮಯದಲ್ಲಿ ಉತ್ತಮ ಮೊತ್ತದ ಪಿ ಎಫ್ ಹಣವನ್ನು ಪಡೆಯಬಹುದು.