Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ಕಾರ್ಡ್ ನವೀಕರಿಸಲು ಯಾವುದೇ ಕೇಂದ್ರಕ್ಕೆ ಅಲೆದಾಟುವಂತ್ತಿಲ್ಲ, ಹೊಸ ರೂಲ್ಸ್ ಜಾರಿಗೆ!

advertisement

ಆಧಾರ್ ಕಾರ್ಡ್ (Aadhaar Card) ಇಂದು ಎಲ್ಲ ದಾಖಲೆಗಿಂತ ಬಹು ಮುಖ್ಯವಾದ ದಾಖಲೆಯಾಗಿದೆ. ಸರಕಾರದ ಯಾವುದೇ ಯೋಜನೆಗಳನ್ನು ಪಡೆಯುದಾದರೂ ಈ ಆಧಾರ್ ಕಾರ್ಡ್ ಮುಖ್ಯ ಪಾತ್ರವಹಿಸುತ್ತದೆ. ಈ ಸಂದರ್ಭದಲ್ಲಿ , ಆಧಾರ್ ಅನ್ನು ಅಪ್‌ಡೇಟ್‌ ಮಾಡುವುದು ಬಹಳ ಮುಖ್ಯವಾಗುತ್ತದೆ.ಇದೀಗ ಆಧಾರ್ ಆಪ್ಡೆಟ್ ಮಾಡಲು ಹೊಸ ನಿಯಮವನ್ನು ಜಾರಿಗೆ ತಂದಿದ್ದು ಈ ವಿಚಾರ ನೀವು ತಿಳಿಯಲೇ ಬೇಕು.

ಆಧಾರ್ ಕಾರ್ಡ್‌ನ ನವೀಕರಣ ಮತ್ತು ನೋಂದಣಿಗೆ ಸಂಬಂಧಿಸಿದಂತೆ UIDAI ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದೇ ರೀತಿ ನೀವು ಆನ್‌ಲೈನ್‌ನಲ್ಲಿ ನವೀಕರಣ ಮಾಡಲು ಅವಕಾಶ ಕೂಡ ಇದೆ. ಇದೀಗ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್‌ನ ನೋಂದಣಿ ಮತ್ತು ನವೀಕರಣ ವಿಚಾರ ಕುರಿತಂತೆ ಅಧಿಸೂಚನೆಯನ್ನು ನೀಡಿದ್ದು ಆಧಾರ್ ಅನ್ನು ನವೀಕರಿಣ ಮಾಡಬೇಕಾದ್ರೆ ಹೊಸ ಫಾರ್ಮ್ ಅನ್ನು ಫಿಲ್ ಆಫ್ ಮಾಡಬೇಕಾಗುತ್ತದೆ.

ಈ ನಿಯಮ ಇದೆ

ಹಳೆಯ ನಿಯಮದ ಪ್ರಕಾರ ಆನ್‌ಲೈನ್ ಮೋಡ್‌ನಲ್ಲಿ ವಿಳಾಸ ಮತ್ತು ಇತರ ಕೆಲವು ಮಾಹಿತಿಯನ್ನು ನವೀಕರಿಸುವ ಸೌಲಭ್ಯವಿತ್ತು. ಆದರೆ ಇತರ ವಿಷಯಗಳನ್ನು ನವೀಕರಿಸಲು ದಾಖಲಾತಿ ಕೇಂದ್ರಕ್ಕೆ ಹೋಗಬೇಕಾಗಿತ್ತು, ಆದರೆ ಈ ಹೊಸ ನಿಯಮದ ಅಡಿಯಲ್ಲಿ, ಈಗ ಅನೇಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿಯೂ ನವೀಕರಿಸಬಹುದು ಎಂದಿದೆ. ಅದೇ ರೀತಿ ಹೊಸ ನಮೂನೆಯ ಮೂಲಕ ಬಳಕೆದಾರರು ಆಧಾರ್ ಕಾರ್ಡ್‌ನಲ್ಲಿ ಸಂಪೂರ್ಣ ಜನ್ಮ ದಿನಾಂಕವನ್ನು ಮುದ್ರಿಸಲು ಬಯಸಿದರೆ, ಅವರು ಅದಕ್ಕೆ ಸಾಕ್ಷ್ಯಚಿತ್ರ ಪುರಾವೆಯನ್ನು ನೀಡಬೇಕಾಗುತ್ತದೆ

advertisement

ಈ ನಿಯಮ ಇಲ್ಲ

2016ರ ರೂಲ್ಸ್ ಪ್ರಕಾರ ಅಧಾರ್ ಕಾರ್ಡ್ (Aadhaar Card) ನವೀಕರಣ ಮಾಡುದಾದ್ರೆ ಆನ್‌ಲೈನ್ ಮೋಡ್‌ನಲ್ಲಿ ವಿಳಾಸಗಳ ನವೀಕರಣಕ್ಕೆ ಮಾತ್ರ ಅವಕಾಶ ಇತ್ತು. ಇತರ ಆಧಾರ್ ವಿವರಗಳ ನವೀಕರಣಕ್ಕಾಗಿ ಅವಕಾಶ ಇದ್ದು ಈ ಹೊಸ ನಿಯಮಗಳಲ್ಲಿ ಈ ಯಾವುದೇ ನಿರ್ಬಂಧ ಇಲ್ಲ ಎಂದಿದೆ.

ವಂಚನೆ ತಪ್ಪಿಸಿ

ನಿಮ್ಮ ಆಧಾರ್ ಸಂಖ್ಯೆಯನ್ನು ಉಪಯೋಗಿಸಿ ಮೋಸ ಮಾಡುವ ದುಷ್ಕರ್ಮಿಗಳು ಇಂದು ಬಹಳಷ್ಟು ಮಂದಿ ಇದ್ದು ಅದನ್ನು ದುರ್ಬಳಕೆ ಮಾಡುವ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಈ ಬಗ್ಗೆ ಎಚ್ಚರವಾಗಿರುವುದು ಅತೀ ಮುಖ್ಯ ವಾಗುತ್ತದೆ. ಹಾಗಾಗಿ ಆಧಾರ್ ಕಾರ್ಡ್ ಅನ್ನು ಯಾವೆಲ್ಲ ದಾಖಲೆಗಳೊಂದಿಗೆ ಲಿಂಕ್ ಮಾಡಲಾಗಿದೆ ಎಂಬುದನ್ನು ಸಹ ಖಚಿತಪಡಿಸಿಕೊಳ್ಳಬೇಕು.

advertisement

Leave A Reply

Your email address will not be published.