Karnataka Times
Trending Stories, Viral News, Gossips & Everything in Kannada

Maruti Suzuki Fronx: ಮಾರ್ಚ್ ಅಂತ್ಯದ ಆಫರ್! ಯುವಕರ ಈ ಸ್ಟೈಲಿಶ್ ಕಾರಿನ ಮೇಲೆ 77 ಸಾವಿರವರೆಗೆ ಡಿಸ್ಕೌಂಟ್

advertisement

ಮಾರುತಿ ಸುಜುಕಿ ಕಂಪನಿಯಿಂದ ಈಗ ಹೊಸ ರೀತಿಯಾದಂತಹ ಸಿಹಿಸುದ್ದಿ ಸಿಕ್ಕಿದ್ದು ಇದೇ ಮಾರ್ಚ್ ತಿಂಗಳಿನಲ್ಲಿ ಭರ್ಜರಿ 77,000 ರಿಯಾಯಿತಿಯೊಂದಿಗೆ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಕಾರು ಮಾರುಕಟ್ಟೆಯಲ್ಲಿ ಚಾಲ್ತಿಯಾಗಲಿದೆ. ಅರೆನಾ (Arena) ಹಾಗೂ ನೆಕ್ಸಾ (Nexa) ಡೀಲರ್ ಶಿಪ್ ಗಳೊಂದಿಗೆ ವಿವಿಧ ಮಾದರಿಯಲ್ಲಿ ಮಾರಾಟ ಗೊಳ್ಳುವಂತಹ ಹೊಸ ಯೋಜನೆ ಅನ್ನು ತೆಗೆದುಕೊಂಡು ಬಂದಿದ್ದು ಅದರ ಮೂಲಕ ಭರ್ಜರಿ ರಿಯಾಯಿತಿಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.

Maruti Suzuki Fronx Highlights and Features:

 

Image Source: Team Car Delight

 

ಮೊದಲಿಗೆ ಇದರಲ್ಲಿನ ಪೆಟ್ರೋಲ್ ರೂಪಾಂತರಗಳು 20.1 ಮತ್ತು 21.79Kmpl ಹೊಂದಿದೆ. CNG ಮಾದರಿಗಳು 28.61 ಕಿಲೋಮೀಟರ್ ನವರಿಗೂ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಕಾರು ಸುರಕ್ಷತೆಯ ವಿಚಾರದಲ್ಲೂ ಬಹಳಷ್ಟು ಆಧುನಿಕತೆಯನ್ನು ಬಳಸಿದ್ದು, ಇದರಲ್ಲಿ 6 ಏರ್‌ ಬ್ಯಾಗ್‌, EBD (Electronic Break Force Distribution), ESP (Electronic Stability Program), ABS (Anti Lock Breaking System), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಸಹ ಹೊಂದಿದೆ. ಇದರ ಜೊತೆಗೆ ಸಿಗ್ಮಾ, ಡೆಲ್ಟಾ ಪ್ಲಸ್, ಡೆಲ್ಟಾ, ಆಲ್ಫಾ ಸೇರಿದಂತೆ ವಿವಿಧ ರೂಪಾಂತರ ಹಾಗೂ ನೆಕ್ಸಾ ಬ್ಲೂ, ಅರ್ಥನ್ ಬ್ರೌನ್, ಆರ್ಕ್ಟಿಕ್ ವೈಟ್, ಒಪ್ಯುಲೆಂಟ್ ರೆಡ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೆ ಮಾರುಕಟ್ಟೆಯಲ್ಲಿ ಚಾಲ್ತಿ ಪಡೆದುಕೊಳ್ಳಲಿದೆ.

 

advertisement

Image Source: Car India

 

ಇದು 5 ಮಂದಿ ಆರಾಮಾಗಿ ಪ್ರಯಾಣಿಸಬಹುದಾದ ವಾಹನ ಆಗಿದ್ದು, ಮಾರುಕಟ್ಟೆಯಲ್ಲಿ FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನದೊಂದಿಗೆ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ ಪ್ಲೇ, ಹೆಡ್ಸ್ ಅಪ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಕ್ರೂಸ್ ಕಂಟ್ರೋಲ್, ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Maruti Suzuki Fronx Discount:

 

Image Source: DriveSpark

 

ಇನ್ನು ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಕಾರು ಮಾರುಕಟ್ಟೆಯಲ್ಲಿ ಮಾರ್ಚ್ ನಿಂದ ಚಾಲ್ತಿ ಪಡೆದುಕೊಳ್ಳಲಿದ್ದು ಬರೋಬ್ಬರಿ 77 ಸಾವಿರದಷ್ಟು ರಿಯಾಯಿತಿಯನ್ನು ನೀಡಿದ್ದಾರೆ. ಇದರ ಪ್ರಸ್ತುತ ಬೆಲೆ 7.51 ಲಕ್ಷದಿಂದ 13.05 ಲಕ್ಷದ ವರೆಗೂ ಇದೆ. ಮತ್ತು ಪ್ರಸ್ತುತ ನೀಡಿರುವಂತಹ ರಿಯಾಯಿತಿಯಲ್ಲಿ 7000 ಕಾರ್ಪೊರೇಟ್ ಡಿಸ್ಕೌಂಟ್, 10000 ಎಕ್ಸ್ ಚೇಂಜ್ ಬೋನಸ್, ವೆಲಾಸಿಟಿ ಎಡಿಷನ್ 60,000, ಆಕ್ಸೆಸರಿ ಡಿಸ್ಕೌಂಟ್ (Accessory Discount) ಅನ್ನು ಹೊಂದಿದೆ. ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಮಾದರಿಗಳು 10,000, ನಗದು ರಿಯಾಯಿತಿ, 10,000 ಇಷ್ಟು ವಿಶಿಷ್ಟ ರೀತಿಯಾದಂತಹ ರಿಯಾಯಿತಿಗಳನ್ನು ನೀಡಲಾಗಿದೆ.

ಇನ್ನು ಈ ರೀತಿಯಾದಂತಹ ಡಿಸ್ಕೌಂಟ್ ಮಾರ್ಚ್ 2024 ರಿಂದ ಶುರುವಾಗಲಿದ್ದು.. ಕಾರ್ ತೆಗೆದುಕೊಳ್ಳಬೇಕು ಎಂದು ಇಚ್ಚಿಸುವವರು ಬಂಪರ್ ಆಫರ್ ಅನ್ನು ಪಡೆದುಕೊಳ್ಳಬಹುದು. ಮತ್ತು ಇದು ವಿಶ್ವಾಸ ಅರ್ಹವೂ ಆಗಿದೆ.

advertisement

Leave A Reply

Your email address will not be published.