Karnataka Times
Trending Stories, Viral News, Gossips & Everything in Kannada

Bank Rules: ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯ ಹಣ ತಗೆಯಲು ಹೊಸ ರೂಲ್ಸ್! ಈ ದಾಖಲೆ ಕಡ್ಡಾಯ

advertisement

ಹಣ ಪ್ರತಿಯೊಬ್ಬರ ಜೀವನದಲ್ಲಿಯೂ ಮಹತ್ವಪೂರ್ಣ ಸ್ಥಾನವನ್ನು ಹೊಂದಿದೆ. ಹಾಗಾಗಿಯೇ ಕಷ್ಟದ ಕಾಲಕ್ಕೆ ಹಣ ಬೇಕಾಗುತ್ತದೆ ಎಂದು ಮನಗಂಡು ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಸಂಗ್ರಹ ಮಾಡಿ ಇಡುತ್ತಾರೆ. ಆದರೆ ಬ್ಯಾಂಕ್ ಖಾತೆಯಲ್ಲಿ ಹಣ ಕೂಡಿಟ್ಟ ವ್ಯಕ್ತಿ ಮರಣ ಹೊಂದಿದರೆ ಆ ಹಣ ಯಾರಿಗೆ ಸೇರಲಿದೆ? ಆ ಹಣ ಪಡೆಯಲು ಏನು ಮಾಡಬೇಕು ಎಂಬ ಇತ್ಯಾದಿ ವಿಚಾರಗಳ ಬಗ್ಗೆ ಮಹತ್ವ ಪೂರ್ಣ ಮಾಹಿತಿ ಇಲ್ಲಿದೆ.

Bank Rules ಇದೆ:

ಬ್ಯಾಂಕ್ ನಲ್ಲಿ ನಾವು ಕೂಡಿಡುವ ಹಣಕ್ಕೆ ಬಡ್ಡಿದರ ಅಧಿಕವಾಗೆ ಸಿಗಲಿದೆ ಆದರೆ, ಹಣ ಕೂಡಿಟ್ಟ ವ್ಯಕ್ತಿ ಮರಣ ಹೊಂದಿದರೆ ಆ ವ್ಯಕ್ತಿ ಒಂದು ಕುಟುಂಬದ ಯಜಮಾನನಾಗಿದ್ದರೆ ಕುಟುಂಬ ನಿರ್ವಹಣೆಗೆ ಹಣಕಾಸಿನ ಅಗತ್ಯ ತುಂಬಾ ಇದ್ದು ಮೃತ ವ್ಯಕ್ತಿಯ ಹಣವನ್ನು ವಾಪಾಸ್ಸು ಪಡೆಯುವುದು ಕೂಡ ಅಗತ್ಯವಾಗುತ್ತದೆ. ಹಾಗಾಗಿ ಕೆಲವೊಂದು ವಿಧಾನ ಅನುಸರಿಸಬೇಕು. ಬ್ಯಾಂಕ್ ನಲ್ಲಿ ಇದಕ್ಕೆ ಪ್ರತ್ಯೇಕ ನಿಯಮ (Bank Rules) ಕೂಡ ಇದೆ.

Image Source: Informalnewz

ಯಾವುದು ಆ ನಿಯಮಗಳು (Bank Rules):

advertisement

  • ಮೃತ ವ್ಯಕ್ತಿಯ ಖಾತೆಯ ಹಣ ತೆಗೆಯುವ ಮುನ್ನ ಬ್ಯಾಂಕಿನವರು ವ್ಯಕ್ತಿ ಮೃತರಾದದ್ದಕ್ಕೆ ಸಾಕ್ಷಿ ಪುರಾವೆ ಕೇಳುತ್ತಾರೆ.
  • ಅಪಘಾತ ಅಥವಾ ಇತರ ಸಂದರ್ಭದಲ್ಲಿ ಸತ್ತರೆ ಮೊದಲು ಆ ವ್ಯಕ್ತಿಯ ನಂತರದ ನಾಮಿನಿ ಯಾರೆಂದು ಪರಿಶೀಲನೆ ಮಾಡುತ್ತಾರೆ. ನಾಮಿನಿ ಹೆಸರು ಇದ್ದ ವ್ಯಕ್ತಿಗೆ ಹಣ ಜಮೆ ಮಾಡಿ ನೀಡಲಾಗುತ್ತದೆ.
  • ಅದೇ ರೀತಿ ಜಂಟಿ ಖಾತೆ ತೆರೆದು ಅದರಲ್ಲಿ ಒಬ್ಬರು ಮೃತರಾದರೆ ಆಗ ಬ್ಯಾಂಕ್ ಖಾತೆಯಲ್ಲಿನ ಹಣ ಏಕ ವ್ಯಕ್ತಿಯ ಸ್ವಾಧೀನಕ್ಕೆ ಬರಲಿದೆ‌.ಅಂದರೆ ಇನ್ನೊಬ್ಬ ವ್ಯಕ್ತಿ ಮೃತ ವ್ಯಕ್ತಿಯ ಮರಣ ಸರ್ಟಿಫಿಕೇಟ್ ನೀಡಿದರೆ ಬದುಕಿದ್ದ ವ್ಯಕ್ತಿ ಖಾತೆಗೆ ಹಣ ಜಮೆ ಆಗಲಿದೆ. ಹೀಗೆ ಆದ ಬಳಿಕ ಈ ಖಾತೆ ಜಂಟಿ ಆಗಿರದೇ ಏಕ ವ್ಯಕ್ತಿ ಖಾತೆ ಆಗಿ ಬದಲಾಗಲಿದೆ.
  • ಈ ಪ್ರಕ್ರಿಯೆ ಬಳಿಕ ಮರಣ ಸರ್ಟಿಫಿಕೇಟ್ ಸೇರಿದಂತೆ ಇತರ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಲಾಗುವುದು.

ಈ ದಾಖಲೆಗಳು ಅಗತ್ಯ:

  • ಮೃತ ವ್ಯಕ್ತಿಯ ಬ್ಯಾಂಕ್ ಪಾಸ್ ಬುಕ್
  • ಮೃತ ವ್ಯಕ್ತಿಯ ಹಳೆ ಆಧಾರ್ ಕಾರ್ಡ್ ಪ್ರತಿ
  • ಮೃತ ವ್ಯಕ್ತಿಯ ಎಟಿಎಂ ಕಾರ್ಡ್.
  • ಮೃತ ವ್ಯಕ್ತಿಯ ಚೆಕ್ ಬುಕ್ (Cheque Book) ಹಾಗೂ ಮರಣ ಪ್ರಮಾಣ ಪತ್ರವನ್ನು (Death Certificate) ನೀಡಬೇಕು. ಈ ಎಲ್ಲ ದಾಖಲೆಯ ಹೊತೆಗೆ ಹಣ ಕ್ಲೈಂ ಮಾಡುವ ಅರ್ಜಿ ಭರ್ತಿ ಮಾಡಿ‌ ನೀಡಬೇಕು. ಆಗ ನಿಮಗೆ ಸೇರಬೇಕಾದ ಹಣ ಬ್ಯಾಂಕ್ ನಿಂದ ನಿಮ್ಮಖಾತೆಗೆ ಹಣ ಜಮೆ ಆಗಲಿದೆ.

ನಾಮಿನಿ ಇರದಿದ್ದರೆ?

ಮೃತ ವ್ಯಕ್ತಿಯ ಬ್ಯಾಂಕ್ ಖಾತೆಗೆ ನಾಮಿನಿ (Nominee)ಯೇ ಇರದಿದ್ದರೆ ಆಗ ಏನಾಗಬಹುದು ಎಂದು ಅನೇಕರಿಗೆ ತಿಳಿದಿರಲಾರದು. ಮೃತ ವ್ಯಕ್ತಿಗೆ ನಾಮಿನಿ ಇಲ್ಲದಿದ್ದರೆ ಇದಕ್ಕಾಗಿ ಮೃತ ವ್ಯಕ್ತಿಯ ಉತ್ತರಾಧಿಕಾರಿಯ ಪ್ರಮಾಣ ಪತ್ರ ನೀಡಬೇಕು. ಆ ಬಳಿಕ ಎಲ್ಲ ಪರಿಶೀಲನೆ ಮಾಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಸಾಲ ಸೌಲಭ್ಯವೂ ಸಿಗಲಿದೆ.

advertisement

Leave A Reply

Your email address will not be published.