Karnataka Times
Trending Stories, Viral News, Gossips & Everything in Kannada

Gruha Lakshmi: ಒಂದು ಕಂತಿನ‌ ಗೃಹಲಕ್ಷ್ಮಿ ಹಣ ಬಂದಿಲ್ಲವೇ? ಹಾಗಿದ್ದಲ್ಲಿ ಏನು ಮಾಡಬೇಕು?

advertisement

ರಾಜ್ಯ ಸರಕಾರದ ಗೃಹಲಕ್ಷ್ಮಿ (Gruha Lakshmi) ಯೋಜನೆಯ ಹಣ ಮಹಿಳೆಯರಿಗೆ ಆರ್ಥಿಕ ವಾಗಿ ಹೆಚ್ಚು ಅನುಕೂಲ ವಾಗುತ್ತಿದೆ. ಎರಡು ಸಾವಿರ ಮೊತ್ತ ಖಾತೆಗೆ ಜಮೆಯಾದ ಬಗ್ಗೆ ಕೆಲವು ಮಹಿಳೆಯರು ಖುಷಿ ಹಂಚಿ ಕೊಂಡರೆ ಇನ್ನೂ ಕೆಲವು ಮಹಿಳೆಯರು ಹಣ ಖಾತೆಗೆ ಇನ್ನೂ ಕೂಡ ಜಮೆಯಾಗಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ 20% ನಷ್ಟು ಮಹಿಳೆಯರ ಖಾತೆಗೆ ಈ ಹಣ ಜಮೆ ಯಾಗಿಲ್ಲ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಇದಕ್ಕೆ ಪರಿಹಾರ ಏನು ಎಂಬುದನ್ನು ಸಹ ಸ್ಪಷ್ಟ ಪಡಿಸಿದ್ದಾರೆ.

Image Source: Prajavani

Gruha Lakshmi ಹಣ ಜಮೆಯಾಗಿಲ್ಲವೇ? ನೀವೇನು ಮಾಡಬೇಕು?

advertisement

  • ನೀವು ಗ್ರಾಮ ಒನ್ (Gram One), ಸೇವಾ ಸಿಂಧು (Seva Sindhu) ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ರೂ ಒಂದು ಕಂತಿನ ಹಣ ಜಮೆ ಯಾಗಿಲ್ಲ ಎಂದಾದರೆ ಮೊದಲಿಗೆ ನೀವು ನಿಮ್ಮ ಖಾತೆ ಹೊಂದಿರುವ ಬ್ಯಾಂಕ್ ಗೆ ತೆರಳಿ ಖಾತೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ ಪರಿಹರಿಸಿಕೊಳ್ಳಿ. ನಿಮ್ಮ ಬ್ಯಾಂಕ್ ಆಪ್ಡೆಟ್, ಬ್ಯಾಂಕ್ ಖಾತೆ ಆಧಾರ್ ಗೆ ಜೋಡಣೆ ಇತ್ಯಾದಿ ಸಮಸ್ಯೆ ಯನ್ನು ಪರಿಹಾರ ಮಾಡಿಕೊಳ್ಳಿ.
  • ನಿಮ್ಮ‌ಬ್ಯಾಂಕ್ ಖಾತೆಯ ಸಮಸ್ಯೆ ಎಂದಾದರೆ ಅದಕ್ಕೂ ನಿಮಗೊಂದು ಅವಕಾಶ ಇದೆ. ಅಂಚೆಕಛೇರಿ ಮೂಲಕ ಹೊಸದಾಗಿ ಬ್ಯಾಂಕ್ ಖಾತೆಯನ್ನು ತೆರೆದು ನೀವು ಮತ್ತೆ ಅರ್ಜಿ ಹಾಕಬಹುದು.
  • ಈಗಾಗಲೇ ಹಣ ಬಾರದೇ ಇರುವ ಮಹಿಳೆಯರ ದಾಖಲೆಗಳನ್ನು ಪರಿಶೀಲನೆ ಮಾಡಲು ಪ್ರತಿ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರು ಮನೆಗೆ ತೆರಳಿ ಹಣ ಬಾರದೇ ಇರುವ ಮಹಿಳೆಯರ ಹೆಸರನ್ನು ಪಟ್ಟಿ ಮಾಡಿ, ಅದಕ್ಕೆ ಪರಿಹಾರವನ್ನು ನೀಡಿ ಏನು ಕ್ರಮ ಕೈಗೊಳ್ಳಬೇಕು ಎಂಬ ಸೂಚನೆಯನ್ನು ನೀಡುತ್ತಿದ್ದಾರೆ.
  • ಅದೇ ರೀತಿ ನಿಮ್ಮ ಆಧಾರ್ ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಬದಲಾವಣೆ ಇತ್ಯಾದಿ ಆಪ್ಡೆಟ್ ಮಾಡಿಸಲು ಇದ್ದರೆ ಅದನ್ನು ಸರಿ ಮಾಡಿ ಅರ್ಜಿ ಸಲ್ಲಿಕೆ ಮಾಡಿ.
  • ನಿಮ್ಮ ರೇಷನ್ ಕಾರ್ಡ್‌ (Ration Card) ಗೆ ಆಧಾರ್ ಲಿಂಕ್, ಮತ್ತು ಮನೆಯ ಯಜಮಾನನ ಹೆಸರು ಮೊದಲು ದಾಖಲಾಗಿದ್ದರೆ ಹಣ ಬರುವುದಿಲ್ಲ‌ ಅದನ್ನು ಸರಿಪಡಿಸಿಕೊಳ್ಳಿ.

ಗೃಹಲಕ್ಷ್ಮಿ ಮೊತ್ತ ಇನ್ಮುಂದೆ ಹೆಚ್ಚಾಗಬಹುದಾ?

ಲೋಕಸಭಾ ಚುನಾವಣೆ ಇನ್ನೇನೂ ನಡೆಯಲಿದ್ದು ಈ ಭಾರಿ ಕಾಂಗ್ರೆಸ್ ಗೆದ್ದರೆ ಮಹಿಳಾ ಪರವಾದ ಯೋಜನೆಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವ ಬಗ್ಗೆಯು ಭರವಸೆ ನೀಡಿದೆ. ಹಾಗಾಗಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಗೃಹಲಕ್ಷ್ಮಿ ಮೊತ್ತವು ಹೆಚ್ಚಾಗಬಹುದಾ? ಎನ್ನುವ ಕುತೂಹಲ ಕೂಡ ಮೂಡುತ್ತಿದೆ. ಈ ಸಿಹಿ ಸುದ್ದಿಗಾಗಿ ಹೆಚ್ಚಿನ ಮಹಿಳೆಯರು ಕೂಡ ಕಾದು ಕುಳಿತಿದ್ದಾರೆ.

advertisement

Leave A Reply

Your email address will not be published.