Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಹಣ ಬಂದ್ರು ಖಾತೆಯಲ್ಲಿ ಇರಲ್ಲ! ಮಹಿಳೆಯರೇ ಈ ತಪ್ಪು ಮಾಡಬೇಡಿ

advertisement

ಗೃಹಲಕ್ಷ್ಮಿ ಯೋಜನೆಯ ಸಲುವಾಗಿ ಮನೆಯಲ್ಲಿ ಇರುವಂತಹ ಪ್ರತಿ ಗೃಹಿಣಿಯರು ತಮಗೆ ಬೇಕಾದಂತಹ ಸೌಲಭ್ಯ ಮತ್ತು ಆದಾಯವನ್ನು ಸೃಷ್ಟಿ ಮಾಡಿಕೊಳ್ಳುವಂತಹ ಮೂಲವನ್ನು ಕಂಡುಕೊಂಡಿದ್ದಾರೆ. ಇದಕ್ಕೆ ಸರ್ಕಾರವು ಕೂಡ ಅಪಾರ ಪ್ರಮಾಣದಲ್ಲಿ ನೆರವಾಗಿದೆ. ಈ ಎಲ್ಲದರ ನಡುವೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣದ ಕಂತಿನ ಮೊತ್ತ ಪ್ರತಿ ತಿಂಗಳಿಗೆ ಸರಿಯಾಗಿ ಕೆಲವೊಬ್ಬರಿಗೆ ಸಿಗದೇ ಇರುವುದು ದೊಡ್ಡ ಸಮಸ್ಯೆಯಾಗಿ ಪರಿಣಾಮವಾಗಿದೆ.

Gruha Lakshmi ಯೋಜನೆಯಲ್ಲಿ ಆಗುತ್ತಿರುವ ಸಮಸ್ಯೆ ಏನು?

 

Image Source: TV9 Kannada

 

advertisement

ಕೆಲವು ಗೃಹಿಣಿಯರು ತಾವು ನೀಡಿರುವಂತಹ ದಾಖಲಾತಿಗಳು ಸರಿಯಾಗಿ ವೆರಿಫಿಕೇಶನ್ ಆಗದೆ ಇರುವ ಕಾರಣ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಅಡಿಯಲ್ಲಿ ಅವರಿಗೆ ಹಣದ ಮೊತ್ತ ಸರಿಯಾದ ಸಮಯಕ್ಕೆ ಕ್ರೆಡಿಟ್ ಆಗುತ್ತಿಲ್ಲ. ಮತ್ತು ಇದರಿಂದ ಹಲವು ರೀತಿಯಾದಂತಹ ಸಮಸ್ಯೆಗಳು ಉದ್ಭವ ಆಗುತ್ತಲೇ ಇದೆ. ಇದರಿಂದ ವಂಚನೆ ಮಾಡುವವರಿಗೆ ಇದು ಸುಲಭವಾಗಿ ಸ್ಕ್ಯಾಮ್ ಮಾಡುವ ದಾರಿಯಾಗಿದೆ. ಇನ್ನು ಇತ್ತೀಚಿಗೆ ತಾನೇ ಸರ್ಕಾರ ಈ ಕುರಿತಾಗಿ ಕೆಲವು ಕ್ರಮಗಳನ್ನು ಕೂಡ ಕೈಗೊಂಡಿದೆ.

ಹೌದು ಸರ್ಕಾರವು ಮತ್ತೊಮ್ಮೆ ಇ-ಕೆವೈಸಿ ಮತ್ತು ದಾಖಲಾತಿಗಳನ್ನು ಮತ್ತೊಮ್ಮೆ ವೆರಿಫಿಕೇಶನ್ ಮಾಡುವ ಮೂಲಕ ಅದರಿಂದ ಆಗುತ್ತಿರುವಂತಹ ಸ್ಕ್ಯಾಮ್ ಅಥವಾ ಗೊಂದಲಗಳನ್ನು ದೂರ ಮಾಡಿಕೊಳ್ಳುವ ಕ್ರಮವನ್ನು ಕೈಗೊಂಡಿದೆ. ಇದರ ಸಲುವಾಗಿ Aadhaar Card Seeding, PAN Verification, Ration Card ನಲ್ಲಿ ಗೃಹಿಣೀಯ ಹೆಸರು, ನೀಡಲಾಗಿರುವಂತಹ ಎಲ್ಲಾ ದಾಖಲಾತಿಗಳಲ್ಲಿಯೂ ಒಂದೇ ಹೆಸರು ಇದೆಯೇ ಮತ್ತು ಅಕೌಂಟ್ ನಂಬರ್ ಸರಿಯಾಗಿದೆಯೇ ಈ ರೀತಿಯಾದಂತಹ ವೆರಿಫಿಕೇಶನ್ ಮಾಡುವ ಮೂಲಕ ಆಗುತ್ತಿರುವ ಸಮಸ್ಯೆಯನ್ನು ತಡೆಯಲು ಸರ್ಕಾರ ಮುಂದಾಗಿದೆ.

ಈ ಎಲ್ಲದರ ನಡುವೆಯೂ ಕೂಡ ವಂಚಿತರು ಫ್ರಾಡ್ ಆಕ್ಟಿವಿಟೀಸ್ ಮೂಲಕ ಹಲವು ಗೃಹಿಣಿಯರನ್ನು ವಂಚಿಸಿ ಅವರ ಖಾತೆಯಲ್ಲಿರುವಂತಹ ಹಣವನ್ನು ದೋಚಿದ್ದಾರೆ. ಅಂದರೆ ಸ್ಪಾಮ್ ಕರೆ ಮಾಡುವ ಮೂಲಕ ಗೃಹಿಣಿಯರ ಬಳಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಬಗ್ಗೆ ಮೊದಲಿಗೆ ಮಾತನಾಡಿ ನಂತರ ಅವರಿಂದ ವೆರಿಫಿಕೇಶನ್ ಗಾಗಿ ಕರೆ ಮಾಡುತ್ತಿದ್ದೇವೆ ಎಂದು ಅವರ ಬಳಿಯಿಂದ ಬ್ಯಾಂಕ್ ಅಕೌಂಟ್ ನಂಬರ್ (Bank Account Number), ಐ ಎಫ್ ಎಸ್ ಸಿ (IFSC Code) ಕೋಡ್ ಮತ್ತು ಓಟಿಪಿಯನ್ನು ಪಡೆದುಕೊಂಡು ವಂಚಕರು ಅವರ ಅಕೌಂಟ ಅಲ್ಲಿದ್ದ ಪೂರ್ತಿ ಮೊತ್ತವನ್ನು ದೋಚಿದ್ದಾರೆ.

ಆದ್ದರಿಂದ ಗೃಹಿಣಿಯರು ಯಾವುದೇ ಸರ್ಕಾರ ಅಥವಾ ಯಾವುದೇ ಬ್ಯಾಂಕ್ ಇಂದ ಬರುವಂತಹ ಕರೆಗಳು ಸರ್ಕಾರದಿಂದ ಮಾಡಿದ್ದಾಗುವುದಿಲ್ಲ ಎಂದು ಸುದ್ದಿ ಒಂದನ್ನು ಎಲ್ಲ ಗೃಹಿಣೀಯರಿಗೆ ತಿಳಿಸಲು ಮುಂದಾಗಿದೆ. ಮತ್ತು ಯಾವುದೇ ರೀತಿಯಾದಂತಹ ಓಟಿಪಿ ಮತ್ತು ಬ್ಯಾಂಕ್ ಅಕೌಂಟ್ ನ ನಂಬರ್ ಈ ಮುಂತಾದ ದಾಖಲೆಗಳನ್ನು ಕುರಿತಾಗಿ ಯಾರಿಗೂ ಮಾಹಿತಿ ನೀಡದೆ ಇರುವಂತೆ ಸೂಚಿಸಿದೆ.

advertisement

Leave A Reply

Your email address will not be published.