Karnataka Times
Trending Stories, Viral News, Gossips & Everything in Kannada

Property: ಕೋರ್ಟ್ ವಿಚಾರಣೆಯಲ್ಲಿರುವ ಆಸ್ತಿಯನ್ನು ಖರೀದಿ ಅಥವಾ ಮಾರಾಟ ಮಾಡಲು ಸಾಧ್ಯವೇ? ಹೊಸ ರೂಲ್ಸ್

advertisement

ದಾವಾ ಆಸ್ತಿ ಎಂದರೆ ಏನು ಎನ್ನುವುದು ಮೊದಲಿಗೆ ಸರಿಯಾಗಿ ತಿಳಿದುಕೊಳ್ಳುವ ವಿಷಯವಾಗಿದೆ. ಇನ್ನು ದಾವಾಆಸ್ತಿ ಎಂದರೆ ಆಸ್ತಿ (Property)ಯ ಮಾರಾಟಕ್ಕೆ ಅಥವಾ ಅದನ್ನು ಕೊಳ್ಳುವಿಕೆಯ ಮೇಲೆ ಯಾರಾದರೂ ಕೇಸ್ ದಾಖಲಿಸಿದ್ದು ಅದು ಇನ್ನೂ ಇತ್ಯರ್ಥವಾಗದೆ ನ್ಯಾಯಾಲಯದಲ್ಲಿಯೇ ಉಳಿದಿರುವಂತಹ ಆಸ್ತಿಯೇ ದಾವಾ ಆಸ್ತಿ ಆಗಿದೆ.

ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಇರುವಂತಹ ಆಸ್ತಿಯನ್ನು ಮಾರಾಟ ಮಾಡಬಹುದಾ ಅಥವಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳೋಣ…

1882ರ Transfer of Property Act ಮತ್ತು ಅದರ 52ನೇ ಸೆಕ್ಷನ್ ನಲ್ಲಿ ತಿಳಿಸಿರುವಂತೆ Lis Pendens ಅಂದರೆ ಇತ್ಯರ್ಥವಾಗದಂತಹ ಆಸ್ತಿ. ಇದು ಸಾಮಾನ್ಯವಾಗಿ ಸ್ಥಿರ ಆಸ್ತಿ (Immovable Property) ಯ ಮೇಲೆ ದಾಖಲಾಗಿರುವಂತಹ ವಿಷಯವಾಗಿದ್ದು… ಯಾವುದೇ ಒಬ್ಬ ವ್ಯಕ್ತಿ ಯಾವುದಾದರೂ ಆಸ್ತಿ ಅದರಲ್ಲೂ ಸ್ಥಿರ ಆಸ್ತಿಯ ಮೇಲೆ ಕೇಸ್ ದಾಖಲಿಸಿದ್ದಾದಂತಹ ಪಕ್ಷದಲ್ಲಿ ಅದನ್ನು ನ್ಯಾಯಾಲಯವು ಸರಿಯಾದ ರೀತಿಯಲ್ಲಿ ಇತ್ಯರ್ಥಪಡಿಸಬೇಕಾಗುತ್ತದೆ. ಇನ್ನು ಇತ್ಯರ್ಥವಾಗದ ಆಸ್ತಿಯನ್ನು ದಾವಾ ಆಸ್ತಿ ಎಂದು ಕರೆಯಲಾಗುತ್ತದೆ.

 

advertisement

Image Source: Justdial

 

ಇನ್ನು ಆಸ್ತಿ (Property) ಯನ್ನು ಮಾರಾಟ ಮಾಡುವಂತಹ ಯಾವುದೇ ವ್ಯಕ್ತಿಯಾಗಲಿ ಅದನ್ನು ಕೊಳ್ಳುವವನಿಗೆ ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿರಬೇಕು. ಟ್ರಾನ್ಸ್ಫರ್ ಆಫ್ ಪ್ರಾಪರ್ಟಿ ಆಕ್ಟ್ 1882 ರ ಪ್ರಕಾರ ಆಸ್ತಿಯನ್ನು ಮಾರಾಟ ಮಾಡುವ ಮುನ್ನ ಆಸ್ತಿಯು ನ್ಯಾಯಾಲಯದ ತೀರ್ಪಿನಿಂದ ಇತ್ಯರ್ಥವಾಗದೆ ಇದ್ದಲ್ಲಿ ಅದನ್ನು ಮಾರಾಟ ಮಾಡಿದಲ್ಲಿ ಕೊಳ್ಳುವ ವ್ಯಕ್ತಿ ಅದರ ಕಾನೂನು ಶಿಸ್ತು ಬದ್ಧ ಕ್ರಮಕ್ಕೆ ಒಳಪಟ್ಟಿರುತ್ತಾನೆ. ಅಂದರೆ ಅದರ ಮಾಹಿತಿಯನ್ನು ತಿಳಿದು ಕಾನೂನಿನಿಂದ ಬರುವಂತ ತೀರ್ಪಿಗೆ ಬದ್ಧವಾಗಿರುವ ಪರಿಸ್ಥಿತಿಯನ್ನು ಹೊಂದಿರುತ್ತಾನೆ.

ಇದರ ಜೊತೆಗೆ ಮಾರಾಟ ಮಾಡಿದವರ ಪಕ್ಷದಿಂದ ಕೊಂಡುಕೊಂಡಿರುವಂತಹ ಪಕ್ಷದವರು ಲೀಸ್ ಪೆಂಡಿಂಗ್ ಆಕ್ಟ್ (Lease Pending Act) ನ ಮೂಲಕ ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುವಂತಹ ಕ್ರಮಗಳನ್ನು ಕೈಗೊಳ್ಳಬಹುದು. ಹೇಗೆಂದರೆ ಆಸ್ತಿಯ ಪ್ರಕರಣವು ಸರಿಯಾದ ಜುಡಿಷಿಯಲ್ ನ್ಯಾಯಾಲಯದ ಅಡಿಯಲ್ಲಿ ಇರಬೇಕು. ಮಾರಾಟ ಮಾಡುತ್ತಿರುವವನ ಹೆಸರಿನಲ್ಲಿಯೇ ಆ ಆಸ್ತಿಯೂ ಇರಬೇಕು.

ಜೊತೆಗೆ ಸ್ಥಿರ ಆಸ್ತಿ (Immovable Property) ಯ ಕುರಿತು ನೇರವಾಗಿ ಮತ್ತು ನಿರ್ದಿಷ್ಟವಾಗಿ ಪ್ರಶ್ನೆಯನ್ನು ಮಾಡಿರಬೇಕು. ಮಾರಾಟ ಮಾಡುವವನಿಂದ ಕೊಂಡುಕೊಂಡವನ ಹೆಸರಿಗೆ ಅದು ದಕ್ಕೆಯನ್ನು ಉಂಟುಮಾಡುವಂತೇ ಇದ್ದರೆ ಅಂತಹ ವ್ಯಕ್ತಿಯು ನ್ಯಾಯಾಲಯದಲ್ಲಿ ದಾವೆ ಆಸ್ತಿ (Property) ಯನ್ನು ಮಾರಾಟ ಮಾಡುವಂತಿಲ್ಲ. ಇನ್ನು Lis Pendens ಆಕ್ಟ್ ನ 52ನೇ ತಿದ್ದುಪಡಿಯ ಅಡಿಯಲ್ಲಿ ನೋಡುವುದಾದರೆ ಇತ್ಯರ್ಥವಾಗದ ಆಸ್ತಿಯು ಅಂತ್ಯವಿಲ್ಲದ ದಾವೆ ಎಂದು ಕರೆಸಿಕೊಳ್ಳುವ ಕಾರಣ ಆ ರೀತಿಯಾಗಿ ಮಾರಾಟ ಮಾಡುವಂತಹ ವ್ಯಕ್ತಿಯ ಮೇಲೆ ಕ್ರಮ ತೆಗೆದುಕೊಳ್ಳುವ ಮೂಲಕ ಆಸ್ತಿಯನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.