Karnataka Times
Trending Stories, Viral News, Gossips & Everything in Kannada

Virat Kohli: ನಿನ್ನೆ ಪಂದ್ಯದಲ್ಲಿ ಕೊಹ್ಲಿ ಔಟಾ ಅಥವಾ ಇಲ್ವಾ! ಅಸಲಿ ಸತ್ಯ ಬಿಚ್ಚಿಟ್ಟ ಮಾಜಿ ಕ್ರಿಕೆಟರ್

advertisement

ನಿನ್ನೆ ಎಲ್ಲರಿಗೂ ತಿಳಿದಿರುವ ಹಾಗೆ ಮಧ್ಯಾಹ್ನ ನಡೆದಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ 1 ರನ್ ಗಳಿಂದ ಸೋತಿದೆ. ಅದರಲ್ಲೂ ವಿಶೇಷವಾಗಿ ನಿನ್ನೆ ಕೊನೆಯ ಹಂತದಲ್ಲಿ ಸ್ಪಿನ್ನರ್ ಆಗಿರುವಂತಹ ಕರಣ್ ಶರ್ಮ (Karan Sharma) ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆದ್ದಿತ್ತು.

ಇದರ ನಡುವೆ ಈಗ ವಿರಾಟ್ ಕೊಹ್ಲಿ ಔಟ್ ಆಗಿರುವಂತಹ ವಿಚಾರ ಕೂಡ ಸೋಶಿಯಲ್ ಮೀಡಿಯಾ ಸೇರಿದಂತೆ ಕ್ರಿಕೆಟ್ ದಿಗ್ಗಜರ ನಡುವೆ ವಿವಾದಾತ್ಮಕ ಚರ್ಚೆಗೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ. ಕೆಲವರು ಇದನ್ನು ಔಟ್ ಎಂದು ಹೇಳಿದ್ರೆ ಅವರ ಅಭಿಮಾನಿಗಳು ಮಾತ್ರ ವಿರಾಟ್ ಕೊಹ್ಲಿ (Virat Kohli) ಔಟ್ ಆಗಿಲ್ಲ ಕೇವಲ ಕಳಪೆ ಅಂಪೈರಿಂಗ್ ಕಾರಣದಿಂದಲೇ ವಿರಾಟ್ ಕೊಹ್ಲಿ ಅವರಿಗೆ ಔಟ್ ನೀಡಲಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ವಿಶ್ಲೇಷಕ ಆಗಿರುವಂತಹ ಆಕಾಶ್ ಚೋಪ್ರಾ ವಿರಾಟ್ ಕೊಹ್ಲಿ ಅವರ ಔಟ್ ಬಗ್ಗೆ ಸರಿಯಾದ ವಿವರಣೆಯನ್ನು ನೀಡಿದ್ದು ಏನು ಹೇಳಿದ್ದಾರೆ ಅನ್ನೋದನ್ನ ತಿಳಿಯೋಣ ಬನ್ನಿ.

ವಿರಾಟ್ ಕೊಹ್ಲಿ ಅವರ ವಿವಾದಾತ್ಮಕ ಔಟ್ ಬಗ್ಗೆ ಆಕಾಶ್ ಚೋಪ್ರಾ ವಿವರಣೆ:

 

Image Source: Cricfit

 

advertisement

ನಿನ್ನೆ ಒಂದು ಎಸೆತದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು ಔಟ್ ಆಗ್ತಾರೆ. ವಿರಾಟ್ ಕೊಹ್ಲಿ ಅವರ ಅಭಿಮಾನಿಯಾಗಿ ನಿನ್ನ ನಡೆದಿರುವುದನ್ನ ನೋಡಿದರೆ ಖಂಡಿತವಾಗಿ ಅಂಪೆರ್ ಮೋಸ ಮಾಡಿದ್ದಾರೆ ಅಥವಾ ಸರಿಯಾದ ರೀತಿಯಲ್ಲಿ ತೀರ್ಮಾನವನ್ನು ನೀಡಿದ ಅಂತ ಹೇಳಬಹುದಾಗಿದೆ ಆದರೆ ನಿಜಕ್ಕೂ ಕ್ರಿಕೆಟ್ ನಿಯಮ ಏನು ಹೇಳುತ್ತೆ ಅನ್ನೋದನ್ನ ಕೂಡ ನಾವು ನೋಡ ಬೇಕಾಗಿರುತ್ತದೆ.

ಮುಂಭಾಗದಿಂದ ನೋಡಿದ್ರೆ ವಿರಾಟ್ ಕೊಹ್ಲಿ ಅವರು ಖಂಡಿತವಾಗಿ ಔಟ್ ಆಗಿಲ್ಲ ಅನ್ನೋದಾಗಿ ಅಭಿಮಾನಿಗಳು ಹೇಳಬಹುದು. ಯಾಕೆಂದ್ರೆ ಮುಂಭಾಗದಿಂದ ನೋಡುವಾಗ ಬಾಲ್ ಎದೆಯ ಭಾಗಕ್ಕೆ ಇರುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.

 

Image Source: Circle of Cricket

 

ಆದರೆ ನೀವು ಸೈಡ್ ಆಂಗಲ್ ನಲ್ಲಿ ನೋಡಿದ್ರೆ ವಿರಾಟ್ ಕೊಹ್ಲಿ ಅವರು ಕ್ರಿಸ್ಟ್ ನಿಂದ ಮುಂದೆ ಬಂದು ನಿಂತಿದ್ದಾರೆ ಮಾತ್ರವಲ್ಲದೆ ತಮ್ಮ ಕೈಯನ್ನು ಕೂಡ ತಮ್ಮ ದೇಹದಿಂದ ಮುಂದೆ ಹಾಗೂ ಎತ್ತರದಲ್ಲಿ ಇಟ್ಟುಕೊಂಡಿದ್ದಾರೆ. ಆ ಸಂದರ್ಭದಲ್ಲಿ ಬಾಲ್ ಕೆಳಗೆ ಬೀಳುವ ಸಂದರ್ಭದಲ್ಲಿ ಡಿಪ್ ಆಗುವ ಕಾರಣದಿಂದಾಗಿ ವಿಕೆಟ್ ಗೆ ಸಮಾನಾಂತರವಾಗಿ ಕಾಣಿಸಿಕೊಳ್ಳುತ್ತದೆ.

ಕ್ರಿಕೆಟ್ ನಿಯಮಗಳ ಪ್ರಕಾರ ಯಾವುದೇ ಅನುಮಾನವಿಲ್ಲದೆ ಇದು ಔಟ್ ಎಂಬುದಾಗಿ ತೀರ್ಮಾನ ನೀಡಬಹುದಾಗಿದೆ ಎಂಬುದಾಗಿ ವಿವರಣೆ ಸಮೇತ ತಮ್ಮ ವಿಡಿಯೋದಲ್ಲಿ ಆಕಾಶ್ ಚೋಪ್ರಾ (Aakash Chopra) ಹೇಳಿಕೊಂಡಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವಂತಹ ವಾದ ವಿವಾದಗಳಿಗೆ ಸರಿಯಾದ ಕ್ಲಾರಿಫಿಕೇಶನ್ ನೀಡುವ ಕೆಲಸವನ್ನು ಮಾಡಿದ್ದಾರೆ ಎಂಬುದಾಗಿ ಹೇಳಬಹುದು.

advertisement

Leave A Reply

Your email address will not be published.