Karnataka Times
Trending Stories, Viral News, Gossips & Everything in Kannada

SBI: ಉತ್ತಮ ಅಡುಗೆ ಮಾಡಬಲ್ಲ ಎಲ್ಲಾ ಮಹಿಳೆಯರಿಗೂ ಸಿಹಿಸುದ್ದಿ ಕೊಟ್ಟ ಸ್ಟೇಟ್ ಬ್ಯಾಂಕ್! ಹೊಸ ಭಾಗ್ಯ

advertisement

ಮಹಿಳೆಯರನ್ನು ಸ್ವಾವಲಂಬಿ ಆಗಿಸುವ ನೆಲೆಯಲ್ಲಿ ಸರಕಾರ ಅನೇಕ ಯೋಜನೆಯನ್ನು ಈ ಹಿಂದಿನಿಂದಲೂ ರೂಪಿಸಿದೆ‌. ಇದರ ಹೊರತಾಗಿ ಕೂಡ ಮಹಿಳಾ ಪರವಾಗಿ ಕೆಲವು ಯೋಜನೆ ಈಗಲೂ ಚಾಲ್ತಿಯಲ್ಲಿ ಇದರ ಎಂದು ಹೇಳಬಹುದು. ಇದೀಗ ಸರಕಾರವು ರುಚಿಯಾದ ಅಡುಗೆ ಮಾಡುವ ಮಹಿಳೆಯರಿಗೆ ಬೊಂಬಾಟ್ ಶುಭ ಸುದ್ದಿಯೊಂದನ್ನು ನೀಡಿದೆ. ಈ ಮೂಲಕ ಮಹಿಳೆಯರಿಗೆ ಹಣಕಾಸಿನ ನೆರವು ನೀಡಲು ಮುಂದಾಗಿದ್ದು ಅನೇಕರಿಗೆ ಇದು ಸದುಪಯೋಗ ಆಗಲಿದೆ.

ಅನ್ನಪೂರ್ಣ ಯೋಜನೆ:

 

Image Source: Good News Today

 

ಮಹಿಳೆಯರಿಗಾಗಿ ಈಗಾಗಲೇ ಗೃಹಲಕ್ಷ್ಮೀ (Gruha Lakshmi) ಸೇರಿದಂತೆ ಅನೇಕ ಯೋಜನೆಯನ್ನು ರಾಜ್ಯ ಸರಕಾರ ಪರಿಚಯಿಸಿದೆ. ಕೆಲವೊಂದು ಸ್ವ ಉದ್ಯಮ ಮಾಡಲು ಕೂಡ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ಇದೀಗ ಅದರ ಬೆನ್ನಲ್ಲೆ ಮನೆಯ ಗೃಹಿಣಿಯರು ರುಚಿ ರುಚಿಯಾಗಿ ಅಡುಗೆ ಮಾಡುತ್ತಿದ್ದರೆ ಅಂತವರನ್ನು ಸ್ವ ಉದ್ಯೋಗದತ್ತ ಬೆಂಬಲಿಸುವ ಸಲುವಾಗಿ ಅನ್ನಪೂರ್ಣ ಯೋಜನೆಯನ್ನು ಪರಿಚಯಿಸುತ್ತಿದೆ. ಇದರ ಮೂಲಕ ಆರ್ಥಿಕ ನೆರವಿನ ಸಾಲ ಸೌಲಭ್ಯ ಸಿಗಲಿದೆ.

ಯೋಜನೆಯ ಉದ್ದೇಶ ಏನು?

ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುತ್ತಾರೆ ಎಂದರೆ ಅವರ ಅನುಕೂಲಕ್ಕಾಗಿ ಈಗಾಗಲೇ ಹೊಸ ಹೊಸ ಯೋಜನೆ ಜಾರಿಗೆ ತರಲಾಗುತ್ತಿದೆ. ಕೇಂದ್ರ ಸರಕಾರದಿಂದ ಜಾರಿಯಾದ ಅನ್ನಪೂರ್ಣ ಯೋಜನೆ (Annapurna Yojana) ಯ ಮೂಲಕ ಮಹಿಳೆಯರಿಗೆ 50,000 ರೂಪಾಯಿ ಕಡಿಮೆ ಬಡ್ಡಿದರದ ಸಾಲ (Loan) ನೀಡಲಾಗುತ್ತದೆ.

advertisement

ಈ ಆರ್ಥಿಕ ನೆರವು ನೀಡುವ ಮೂಲಕ ಅದನ್ನು ಪಡೆದು ಮಹಿಳೆಯರು ಸ್ವ ಉದ್ಯಮ ಮಾಡಬಹುದು. ಮಹಿಳೆಯರು ಆರ್ಥಿಕವಾಗಿ ಸದರಡವಾಗುವ ಸಲುವಾಗಿ ಈ ನೆರವನ್ನು ನೀಡಲಾಗುತ್ತಿದೆ.

ಯಾರೆಲ್ಲ ಅರ್ಹರು?

  • ಗ್ರಾಮೀಣ ಮತ್ತು ನಗರ ಭಾಗದ ಎಲ್ಲ‌ಮಹಿಳೆಯರು ಈ ಒಂದು ಆರ್ಥಿಕ ನೆರವನ್ನು ಅನ್ನಪೂರ್ಣ ಯೋಜನೆ ಮೂಲಕ ಪಡೆಯಬಹುದು.
  • ಇದರ ಮೂಲಕ ಹೊಟೇಲ್ ಉದ್ಯಮ ಮಾಡಲು ಬೇಕಾದ ಸಲಕರಣೆಗಳನ್ನು ಖರೀದಿ ಮಾಡಬಹುದು.
  • ಇದಕ್ಕೆ ಭಾರತೀಯರಿಗೆ ಮಾತ್ರವೇ ಅವಕಾಶ ಇರಲಿದೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಮಹಿಳೆಯರಿಗೆ ಈ ಸಾಲ ಮಂಜೂರಾಗಲಿದೆ.

ಯಾವ ಬ್ಯಾಂಕ್:

 

Image Source: Reuters

 

ಬಹುತೇಕ ಸರಕಾರಿ ಬ್ಯಾಂಕ್ ಬಲ್ಲಿ ಅನ್ನಪೂರ್ಣ ಯೋಜನೆಯ ನೆರವನ್ನು ಪಡೆಯುವ ಪ್ರಕ್ರಿಯೆ ಇರಲಿದೆ. SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ) ವುಮೆನ್ಸ್ ಅಕೌಂಟ್ ತೆರೆಯಬೇಕು. ಬಳಿಕ ಅವರಿಗೆ ಸಾಲದ ಮೊತ್ತ ಖಾತೆಗೆ ಬರಲಿದೆ.

ಕೇಂದ್ರ ಸರಕಾರ ರೂಪಿಸಿರುವ ಈ ಅನ್ನಪೂರ್ಣ ಯೋಜನೆ (Annapurna Yojana) ಯ ಮೇಲೆ ವಿಧಿಸಲಾಗುವ ಬಡ್ಡಿದರ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಆಗಲಿದೆ. 50 ಸಾವಿರ ರೂಪಾಯಿ ಒಮ್ಮೆ ಸಾಲ ಪಡೆದರೆ 1388ರೂಪಾಯಿ EMI ಪಾವತಿ ಮಾಡಬಹುದು. ಆರ್ಥಿಕ ಸಂಕಷ್ಟ ಹೊಂದಿ ಉದ್ಯಮ ಮಾಡಬಹುದು ಎನ್ನುವ ಮಹಿಳೆಯರಿಗೆ ಬಹಳಷ್ಟು ಈ ಯೋಜನೆ ಸಹಕಾರಿ ಆಗಲಿದೆ.

advertisement

Leave A Reply

Your email address will not be published.