Karnataka Times
Trending Stories, Viral News, Gossips & Everything in Kannada

Mumbai Indians: ಬೂಮ್ರಾ ತರ ಬೌಲಿಂಗ್ ಹಾಗೂ ಮಲಿಂಗಾ ರೀತಿ ಯಾರ್ಕರ್ ಹಾಕಬಲ್ಲ ಈ ಆಟಗಾರನನ್ನು ಮುಂಬೈ ಇನ್ನು ಆಡಿಸಿಲ್ಲ! ಯಾರು ಗೊತ್ತಾ?

advertisement

ಐಪಿಎಲ್ 2024ರಲ್ಲಿ ನಾನಾ ರೀತಿಯಾದಂತಹ ಸಂಗತಿಗಳು ಕಾಣ ಸಿಗುತ್ತದೆ, ಕೆಲವು ಪ್ಲೇಯರ್ಸ್ ಗಳು ತಮ್ಮ ಅದ್ಭುತ ಆಟಗಾರಿಕೆಯ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆ ಗಳಿಸಿದರೆ ಇನ್ನಷ್ಟು ಪ್ಲೇಯರ್ಸ್ ಗಳು ಲಯ ಕಳೆದುಕೊಂಡು ತಮ್ಮ ತಂಡಕ್ಕೆ ಕಂಟಕವಾಗಿ ಮಾರ್ಪಟ್ಟಿದ್ದಾರೆ.

ಹೀಗಿರುವಾಗ ಕೆಲ ತಂಡಗಳು ಬೌಲರ್ಸ್ (Bowlers) ಗಳನ್ನು ಕೋಟಿಗಟ್ಟಲೆ ಹಣ ನೀಡಿ ಖರೀದಿಸಿ ಬೆಂಚ್ ಮೇಲೆ ಕೂರಿಸಿದ್ದಾರೆ. ಅಂತಹ ಪ್ಲೇಯರ್ಸ್ ಗಳಲ್ಲಿ ಲತೀಶ್ ಮಲಿಂಗ (Lathis Malinga) ರೀತಿ ಆಕ್ಷನ್ ಹಾಗೂ ಬೂಮ್ರಾ (Bumrah) ರೀತಿ ಬೌಲಿಂಗ್ ಮಾಡಬಹುದಾದ ಕೆಪ್ಯಾಸಿಟಿಯನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಕೂಡ ಒಬ್ಬರು. ಆ ಆಟಗಾರರು ಯಾರು? ಅವರಿಗೆ ಹಾರ್ದಿಕ್ ಒಮ್ಮೆಯು ಅವಕಾಶ ನೀಡದಿರಲು ಕಾರಣವೇನು? ಎಂಬುದನ್ನು ಈ ಪುಟದ ಮುಖಾಂತರ ತಿಳಿಯೋಣ.

ಮುಂಬೈ ತಂಡದ ಸೋಲಿಗೆ ಕಳಪೆ ಬೌಲಿಂಗ್ ಕಾರಣ:

2024ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡ ಆಡಿರುವಂತ 7 ಮ್ಯಾಚ್ಗಳಲ್ಲಿ ಮೂರು ಮ್ಯಾಚ್ನಲ್ಲಿ ಮಾತ್ರ ಜಯಭೇರಿಯನ್ನು ಸಾಧಿಸಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರ ಕ್ಯಾಪ್ಟನ್ಸಿಯಲ್ಲಿ (Hardik Pandya’s Captaincy) ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದ್ದು, ಇವರ ಸೋಲಿಗೆ ಡೆತ್ ಓವರ್ ನಲ್ಲಿನ ಬೌಲಿಂಗ್ ಮುಖ್ಯ ಕಾರಣವಾಗುತ್ತಿದೆ.

ಈ ಆಟಗಾರನಿಗೆ ಅವಕಾಶ ನೀಡಿದ ಹಾರ್ದಿಕ್ ಪಾಂಡ್ಯ:

 

Image Source: Hindustan Times

 

advertisement

ಪಂಜಾಬ್ ಕಿಂಗ್ಸ್ ತಂಡದ ಅಶುತೋಷ ಶರ್ಮ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮುಂಬೈ ಇಂಡಿಯನ್ಸ್ ಬೌಲರ್ ಗಳನ್ನು ಧೂಳಿಪಟ ಮಾಡಿದರು. ಅದರಂತೆ CSK ವಿರುದ್ಧದ ಪಂದ್ಯದಲ್ಲಿ ಆಕಾಶ್ ಮದ್ವಾಲ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಬಲಶಾಲಿ ಬ್ಯಾಟರ್ ಗಳಿಗೆ ತತ್ತರಿಸಿ ಹೋದರು.

ಹೀಗೆ Mumbai Indians ನ ಬೌಲಿಂಗ್ ಲೈನ್ ಅಪ್ (MI Bowling Lineup) ಅಷ್ಟು ಭದ್ರವಾಗಿ ಇಲ್ಲದೆ ಹೋದರು ಕೂಡ ಕ್ಯಾಪ್ಟನ್ ಹಾರ್ದಕ್ ಪಾಂಡ್ಯವರಾಗಲಿ ಅಥವಾ ಎಂಐ ಮ್ಯಾನೇಜ್ಮೆಂಟ್ ಅವರ ಆಗಲಿ ಲತೀಶ್ ಮಲಿಂಗಾವರಂತಹ ಆಕ್ಷನ್ ಹಾಗೂ ಬೂಮ್ರಾ ರೀತಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ನುವಾನ್ ತುಷಾರಾ (Nuwan Thushara) ಅವರನ್ನು ಬೆಂಜ್ ಮೇಲೆ ಸೀಮಿತವಾಗಿರಿಸಿದ್ದಾರೆ ಹೊರತು ಒಂದು ಚಾನ್ಸನ್ನು ನೀಡುತ್ತಿಲ್ಲ.

 

Image Source: Crictoday

 

4.8೦ ಲಕ್ಷಕ್ಕೆ ಖರೀದಿಸಿ ಬೆಂಚಿಗೆ ಸೀಮಿತವಾದ್ರಾ ನುವಾನ್ ತುಷಾರ:

ಮುಂಬೈ ಮ್ಯಾನೇಜ್ಮೆಂಟ್, ಅದ್ಭುತ ಯಾರ್ಕರ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ನುವಾನ್ ತುಷಾರ್ ಅವರನ್ನು 4.80 ಲಕ್ಷ ಹಣವನ್ನು ನೀಡಿ ಐಪಿಎಲ್ 2024ರ ಆಕ್ಷನ್ ನಲ್ಲಿ ಖರೀದಿಸಿ ಬೆಂಚ್ಗೆ ಸೀಮಿತವಾಗಿರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಅತ್ಯುತ್ತಮ ಬೌಲರ್ ಆಗಿ ಕಾರ್ಯನಿರ್ವಹಿಸುತ್ತಿರುವ ಜಸ್ಪ್ರೀತ್ ಬೂಮ್ರಾ (Jasprit Bumrah) ಎಲ್ಲ ಮ್ಯಾಚ್ಗಳಲ್ಲಿ ವಿಕೆಟ್ಗಳ ವಿಕೆಟ್ಗಳ ಸುರಿಮಳೆಯನ್ನು ಕಲೆ ಹಾಕುತ್ತಿದ್ದಾರೆ.

ನುವಾನ್ ತುಷಾರ ಬಂದ್ರೆ MI ಮತ್ತಷ್ಟು ಬಲಿಷ್ಠ:

ಅದರೆ ಅವರಿಗೆ ಇತರೆ ಬೌಲರ್ಗಳ ಸಾತ್ ದೊರಕುತ್ತಿಲ್ಲ, ಅವರಂತೆ ಬೌಲಿಂಗ್ ಶೈಲಿ ಹಾಗೂ ವಿಕೆಟ್ ಕೀಳುವ ಸಾಮರ್ಥ್ಯವನ್ನು ಹೊಂದಿರುವ ತುಷಾರ ಅವರಿಗೆ ಮುಂದಿನ ಮ್ಯಾಚ್ಗಳಲ್ಲಾದರೂ ಎಂಐ ಮ್ಯಾನೇಜ್ಮೆಂಟ್ ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಅವಕಾಶ ನೀಡಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ. ಹೀಗೆ ನುವಾನ್ ತುಷಾರ ಬಾಲ್ ಹಿಡಿದು ಅಖಾಡಕ್ಕೆ ಬಂದರೆ ಮುಂಬೈ ಇಂಡಿಯನ್ಸ್ ತಂಡ (Mumbai Indians Team) ಮತ್ತಷ್ಟು ಬಲಿಷ್ಠ ಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಕೂಗು ಅಭಿಮಾನಿ ವಲಯದಿಂದ ಕೇಳಿ ಬರುತ್ತಿದೆ.

advertisement

Leave A Reply

Your email address will not be published.